ಜನ ಮನದ ನಾಡಿ ಮಿಡಿತ

Advertisement

ಪುಂಜಾಲಕಟ್ಟೆಯ ನೈನಾಡು ಎಂಬಲ್ಲಿ 6 ತಿಂಗಳ ಕರುವನ್ನು ಕೊಂದ ಚಿರತೆ

ಬಂಟ್ವಾಳ: ಹಟ್ಟಿಯ ಹೊರಗಡೆ ಕಟ್ಟಿ ಹಾಕಿದ್ದ ಸಣ್ಣ ಕರುವೊಂದನ್ನು ಚಿರತೆ ಕೊಂದು ತಿಂದ ಘಟನೆ ಪುಂಜಾಲಕಟ್ಟೆ ಪೋಲೀಸ್ ಠಾಣಾ ವ್ಯಾಪ್ತಿಯ ನೈನಾಡು ಎಂಬಲ್ಲಿ ಇಂದು ನಡೆದಿದೆ.


ನೈನಾಡು ವಿಠಲ ಶೆಟ್ಟಿ ಎಂಬವರ ಮನೆಯ ಸುಮಾರು 6 ತಿಂಗಳು ಕರುವನ್ನು ಚಿರತೆ ಕೊಂದು ಅರ್ಧ ತಿಂದು ಹಾಕಿದೆ.ಮನೆಯ ಸಮೀಪದಲ್ಲಿರುವ ಹಟ್ಟಿಯ ಹೊರಗಡೆ ಈ ಒಂದು ಕರುವನ್ನು ಕಟ್ಟಿಹಾಕಲಾಗಿತ್ತು.
ಮಧ್ಯರಾತ್ರಿ ವೇಳೆ ಚಿರತೆ ಕರುವನ್ನು ಕೊಂಡುಹೋಗಿರಬಹುದು ಎಂದು ಶಂಕಿಸಲಾಗಿದೆ
ನಾಯಿಗಳು ಬೊಗಳಿದೆಯಾದರು ಚಿರತೆ ಬಂದು ಈ ತರಹ ಮಾಡಬಹುದು ಎಂಬುದು ತಿಳಿದಿರಲಿಲ್ಲ ಎಂದು ಮನೆಯವರು ಹೇಳುತ್ತಾರೆ‌.


ಯಾಕೆಂದರೆ ಈವರೆಗೆ ಪರಿಸರದಲ್ಲಿ ಚಿರತೆ ದಾಳಿ ಬಗ್ಗೆ ತಿಳಿದಿಲ್ಲ. ಹಾಗಾಗಿ ನಾಯಿಗಳು ಅಷ್ಟು ಜೋರಾಗಿ ಬೊಗಳಿದರೂ ಇಂತಹ ಯೋಚನೆ ಬಂದಿರಲಿಲ್ಲ.
ಹಟ್ಟಿಯಿಂದ ಸುಮಾರು 50 ಮೀ.ದೂರದ ಅಡಿಕೆ ತೋಟಕ್ಕೆ ಕರುವನ್ನು ಎಳೆದುಕೊಂಡು ಹೋಗಿ ಕೊಂದು‌‌ಬಳಿಕ ತಿಂದಿದೆ. ಘಟನೆಯ ಬಗ್ಗೆ ಅರಣ್ಯ ಇಲಾಖೆ ಹಾಗೂ ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

ಉಡುಪಿ: ಕೊಲೆ ಯತ್ನ ಪ್ರಕರಣದ ಇಬ್ಬರು ಆರೋಪಿಗಳ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ…!

ಉಡುಪಿ: ಉಡುಪಿಯಲ್ಲಿ ನಿಲ್ಲಿಸಿದ್ದ ಶ್ರೀ ದುರ್ಗಾಂಬ ಬಸ್ ಕಳವು: ಮುದ್ದಾಡಿ ಹಾಡಿಯಲ್ಲಿ ಪತ್ತೆ…!

ಮಂಗಳೂರು: ವಿದ್ಯಾರ್ಥಿಗಳ ಕೊರತೆಯಿಂದ ಮಂಗಳೂರು ವಿವಿಯ 16 ಪಿಜಿ ಕೋರ್ಸ್‌ಗಳು ಸ್ಥಗಿತ.

ಮಂಗಳೂರು: ಮಂಗಳೂರು-ಉಡುಪಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಹೊಸ ಆಶಾಕಿರಣ

ಮಂಗಳೂರು: ನ್ಯಾಯಾಧೀಶರ ಕಾರಿಗೆ ಗೂಡ್ಸ್ ಆಟೋ ಡಿಕ್ಕಿ: ಗಾಯಗೊಂಡಿದ್ದ ಚಾಲಕ ಸಾವು

ಕಠ್ಮಂಡು: ನೇಪಾಳದಲ್ಲಿ ಭಾರೀ ಮಳೆ, ಪ್ರವಾಹ-ಭೂಕುಸಿತಕ್ಕೆ 27 ಮಂದಿ ಬಲಿ; ನಾಲ್ವರು ನಾಪತ್ತೆ…!

ಕಾರ್ಕಳ: ಸುವರ್ಣ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ಮುಳುಗಿ ಮೃತ್ಯು…!

ಬಂಟ್ವಾಳ: ಮಾಣಿ ಭಾಗದಲ್ಲಿ ಮಾರ್ಗಸೂಚಿ ಫಲಕಗಳ ಕೊರತೆ: ವಾಹನ ಸವಾರರಿಗೆ ಗೊಂದಲ, ಅಪಘಾತದ ಆತಂಕ

ಬಂಟ್ವಾಳ: ಕಲ್ಲಡ್ಕ ಫ್ಲೈಓವರ್‌ನಲ್ಲಿ ದನ ಸಾಗಿಸುತ್ತಿದ್ದ ಲಾರಿ ತಡೆ: ಪೊಲೀಸರಿಂದ ವಾಹನ ವಶಕ್ಕೆ

error: Content is protected !!