ಜನ ಮನದ ನಾಡಿ ಮಿಡಿತ

ಇತ್ತೀಚಿನ ಸುದ್ದಿ
ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ…! ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ ಅಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ ಇವರ ಅಧ್ಯಕ್ಷತೆಯಲ್ಲಿ ಶ್ರೀ ಮಂಗಳಾದೇವಿ ದೇವಸ್ಥಾನದ ಪ್ರಾಂಗಣದಲ್ಲಿ ಜರಗಿತು. ತಾಲೂಕಿನ ವಗ್ಗದ ನಿವಾಸಿ ಅಟೋ ಚಾಲಕನೋರ್ವ ಕಾಣೆ…! ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕೇರಳದ ಚುನಾವಣಾ ಪ್ರಭಾರಿ ವಿನೋದ್ ಥಾವ್ಡೆ ಅವರು ನಿನ್ನೆ ಕಾಸರಗೋಡಿಗೆ ಆಗಮಿಸಿ ಚುನಾವಣಾ ಪ್ರಕ್ರಿಯೆಗಳ ಅವಲೋಕನ ನಡೆಸಿದರು. ಸೂರಿಕುಮೇರು: ಮಾಣಿ ಸಮೀಪದ ಸೂರಿಕುಮೇರು ಜಂಕ್ಷನ್‌ನಲ್ಲಿ ಖಾಸಗಿ ಬಸ್‌ಗೆ ಪಿಕಪ್ ವಾಹನ ಡಿ*ಕ್ಕಿ..! ಉಡುಪಿ: ಹೆಮ್ಮಾಡಿ ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಯಾನಕ ವ್ಹೀಲಿಂಗ್ ಮಾಡಿದ ಯುವಕನ ಬಂಧನ…!
Advertisement

ಸಸ್ಪೆನ್ಸ್-ಥಿಲ್ಲರ್‌, ಆ್ಯಕ್ಷನ್ ಎಂಟರ್ಟೈನ್ಮಂಟ್ ಸಿನಿಮಾ ಕ್ಲಾಂತಾ ಫೆ.2 ಕ್ಕೆ ತೆರೆಗೆ

ಕ್ಲಾಂತಾ ಕನ್ನಡ ನಿಮಾದ ಚಿತ್ರೀಕರಣವು ಬಹುತೇಕ ಕರಾವಳಿಯ ಸುತ್ತಮುತ್ತ ನಡೆದಿದ್ದು, ನಮ್ಮ ಮಣ್ಣಿನ ಮಹಿಮೆ, ಆಚಾರ, ವಿಚಾರ,ಸಂಸ್ಕೃತಿಯನ್ನು ಸಾರುವುದರ ಜೊತೆಗೆ ಎಲ್ಲರಿಂದಲೂ ಪ್ರಶಂಸೆಗೆ ಪಾತ್ರವಾಗಿದೆ. ಚಿತ್ರದಲ್ಲಿ ತುಳುನಾಡಿನ ಕೊರಗಜ್ಜ ದೈವದ ಪವಾಡದ ಬಗ್ಗೆ ಹೇಳಲಾಗಿದೆ. ಈ ಸಿನಿಮಾ ಕರಾವಳಿ ಜಿಲ್ಲೆಯಾದ್ಯಂತ ಫೆಬ್ರವರಿ 2 ರಂದು ತೆರೆಕಾಣಲಿದೆ ಎಂದು ಸಿನಿಮಾದ ನಿರ್ದೇಶಕ ವೈಭವ್ ಪ್ರಶಾಂತ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.


ಸಿನಿಮಾ ರೋಚಕವಾಗಿ, ಟ್ವಿಸ್ಟ್‌ಗಳ ಮೂಲಕ ಸಾಗಿ, ಪ್ರೇಕ್ಷಕರಿಗೆ ಕುತೂಹಲ ಮೂಡಿಸುತ್ತದೆ . ಈ ಸಿನಿಮಾದಲ್ಲಿ ಇಂದಿನ ಯುವ ಜನಾಂಗಕ್ಕೆ ಒಂದು ಸಂದೇಶ ಹೇಳುವ ಪ್ರಯತ್ನ ಮಾಡಲಾಗಿದೆ. ನಿರ್ದೇಶಕ ವೈಭವ್ ಪ್ರಶಾಂತ್, ನಿರ್ಮಾಪಕ ಉದಯ್ ಅಮ್ಮಣ್ಣಾಯ ಕೆ ಅವರ ಅದ್ಭುತ ಪ್ರಯತ್ನವಾಗಿದೆ. ಸಿನಿಮಾದಲ್ಲಿ ಎಂ ವಿಫೇಶ್ ನಾಯಕರಾಗಿ ಹಾಗೂ ಸಂಗೀತಾ ಭಟ್ ನಾಯಕಿಯಾಗಿ ನಟಿಸಿದ್ದಾರೆ. ಅವರೊಂದಿಗೆ ಪಂಚಮಿ ವಾಮಂಜೂರು, ಶೋಭರಾಜ್, ವೀಣಾ ಸುಂದರ್, ಸಂಗೀತಾ, ದೀಪಿಕಾ, ಪ್ರವೀಣ್ ಜೈನ್, ಸ್ವಪ್ಪಾ ಶೆಟ್ಟಿಗಾರ್ ತುಳು
ರಂಗಭೂಮಿ ಖಳನಟ ತಿಮ್ಮಪ್ಪ ಕುಲಾಲ್, ರಾಘವೇಂದ್ರ ಕಾರಂತ್ ಹೊಸ ಪ್ರತಿಭೆ ಯುವ ಮಂಜೇಶ್ ನಟಿಸಿದ್ದಾರೆ. ನಿರ್ಮಾಪಕರಾಗಿ ಸುಬ್ರಹ್ಮಣ್ಯ ಪಂಜದ ಉದಯ ಅಮ್ಮಣ್ಣಾಯ ಕೆ, ಸಹೋದರ ಸತೀಶ್ ಅಮ್ಮಣ್ಣಾಯ ಇವರು ಬಂಡವಾಳ ಹಾಕಿ, ಪ್ರದೀಪ್ ಗೌಡ, ಅರುಣ್ ಕುಮಾರ್, ಜಯಕುಮಾರ್, ಹೇಮಂತ್ ರ ಇವರು ಸಹ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ . ಛಾಯಾಗ್ರಹಣ ಮೋಹನ್, ಸಂಗೀತ ಎಸ್ ಪಿ ಚಂದ್ರಕಾಂತ್, ಸಾಹಸ ವಿನೋದ್, ಸಂಭಾಷಣೆ ಮಹೇಶ್ ಮಂಡ್ಯ ,ಸಂಕಲನ ಪಿ ಆರ್ ಸೌಂದರ್ ರಾಜ್ ಇವರು ಕೆಲಸ ಮಾಡಿದ್ದಾರೆ.

ಸಿನಿಮಾದ ಕಥೆ ಬಗ್ಗೆ ಹೇಳುವುದಾದರೆ,ವೀಕೆಂಡ್‌ನಲ್ಲಿ ಮನೆಯವರಿಗೆ ತಿಳಿಸದ ಹುಡುಗ-ಹುಡುಗಿ ಅಪರಿಚಿತ ಸ್ಥಳವೊಂದಕ್ಕೆ ಹೋಗಿ, ಅಲ್ಲಿ ಸಮಸ್ಯೆಗಳಿಗೆ ಸಿಲುಕಿ ಕೊಳ್ಳುತ್ತಾರೆ. ಇದರಿಂದ ಹೇಗೆ ಪಾರಾಗುತ್ತಾರೆ, ಒಂದು ನಿರ್ಧಾರ ಹೇಗೆಲ್ಲಾ ತೊಂದರೆಗೆ ಸಿಲುಕಿಸುತ್ತದೆ, ಅಲ್ಲಿಂದ ಅವರು ಪಾರಾಗುತ್ತಾರೆಯೋ, ಅಲ್ಲೇ ಮಣ್ಣಾಗುತ್ತಾರೋ, ಅಥವಾ ದೈವ ಅವರನ್ನು ರಕ್ಷಿಸುತ್ತದೆಯೋ ಎಂಬುದೇ ಸಿನಿಮಾದ ಕಥೆಯ ಒಂದು ಎಳೆ ಸಿನಿಮಾವು ಈಗಾಗಲೇ ರಾಜ್ಯಾದ್ಯಂತ ಬಿಡುಗಡೆ ಆಗಿ ಎಲ್ಲಾ ಕಡೆ ಅದ್ಭುತ ಪ್ರತಿಕ್ರಿಯೆ ಬಂದಿದ್ದು ಈಗ ಫೆಬ್ರವರಿ 2 ನೇ ತಾರೀಕಿನಿಂದ ಕರಾವಳಿ ಭಾಗದ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನಗೊಳ್ಳಲಿದೆ.
ಪತ್ರಿಕಾಗೋಷ್ಠಿಯಲ್ಲಿ ವಿಘ್ನೇಶ್, ಪಂಚಮಿ ವಾಮಂಜೂರು ಉಪಸ್ಥಿತರಿದ್ದರು.

ಉತ್ತಮ ಸಿನಿಮಾಗಳಿಗೆ ಪ್ರೋತ್ಸಾಹ ನೀಡಿ: ವಿಘ್ನೇಶ್
ಉತ್ತಮ ಸಿನಿಮಾಗಳು ಬಂದಾಗ ಪ್ರೇಕ್ಷಕರು ಟಾಕೀಸ್ ಗೆ ಬಂದು ಸಿನಿಮಾ ನೋಡಿ ಎಂದು ಚಿತ್ರದ ನಟ ವಿಘ್ನೇಶ್ ವಿನಂತಿಸಿದರು. ಪ್ರೇಕ್ಷಕರು ಸಿನಿಮಾ ನೋಡಿ ಬೆಂಬಲಿಸಿದಾಗ ನಿರ್ಮಾಪಕರಿಗೂ ಅನುಕೂಲವಾಗುತ್ತದೆ. ನನ್ನಂತಹ ಹೊಸ ಕಲಾವಿದರಿಗೆ ತಂತ್ರಜ್ಞರಿಗೆ ಸಹಾಯ ಆಗುತ್ತದೆ ಎಂದವರು ತಿಳಿಸಿದರು.

Leave a Reply

Your email address will not be published. Required fields are marked *

ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ…!

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ ಅಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ ಇವರ ಅಧ್ಯಕ್ಷತೆಯಲ್ಲಿ ಶ್ರೀ ಮಂಗಳಾದೇವಿ ದೇವಸ್ಥಾನದ ಪ್ರಾಂಗಣದಲ್ಲಿ ಜರಗಿತು.

ತಾಲೂಕಿನ ವಗ್ಗದ ನಿವಾಸಿ ಅಟೋ ಚಾಲಕನೋರ್ವ ಕಾಣೆ…!

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕೇರಳದ ಚುನಾವಣಾ ಪ್ರಭಾರಿ ವಿನೋದ್ ಥಾವ್ಡೆ ಅವರು ನಿನ್ನೆ ಕಾಸರಗೋಡಿಗೆ ಆಗಮಿಸಿ ಚುನಾವಣಾ ಪ್ರಕ್ರಿಯೆಗಳ ಅವಲೋಕನ ನಡೆಸಿದರು.

ಸೂರಿಕುಮೇರು: ಮಾಣಿ ಸಮೀಪದ ಸೂರಿಕುಮೇರು ಜಂಕ್ಷನ್‌ನಲ್ಲಿ ಖಾಸಗಿ ಬಸ್‌ಗೆ ಪಿಕಪ್ ವಾಹನ ಡಿ*ಕ್ಕಿ..!

ಉಡುಪಿ: ಹೆಮ್ಮಾಡಿ ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಯಾನಕ ವ್ಹೀಲಿಂಗ್ ಮಾಡಿದ ಯುವಕನ ಬಂಧನ…!

ಉಡುಪಿ: ನಾವುಂದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಾರು ಮತ್ತು ಟ್ರಕ್ ನಡುವೆ ಭೀಕರ ಅಪಘಾತ….!

ಪುಂಜಾಲಕಟ್ಟೆ: ಪುಂಜಾಲಕಟ್ಟೆಯ ಬಸವನಗುಡಿ ಎಂಬಲ್ಲಿ ಸ್ಕೂಟರ್‌ಗೆ ಕೆ.ಎಸ್ ಆರ್ ಟಿಸಿ ಬಸ್ ಡಿ*ಕ್ಕಿ….!

ನಾಟೇಕಲ್: ಮನೆ ಗೋಡೆಗೆ ಹಾರಿ ಬಡಿದ ಕಾರು; ಪಾರಾದ ಪ್ರಯಾಣಿಕರು….!

error: Content is protected !!