ಜನ ಮನದ ನಾಡಿ ಮಿಡಿತ

Advertisement

ಕಟೀಲಿನಲ್ಲಿ ವಿವಿ ಮಟ್ಟದ ಕರಾಟೆ; ಸೈಂಟ್ ಅಲೋಶಿಯಸ್‌ಗೆ ಸಮಗ್ರ ಪ್ರಶಸ್ತಿ

ಬಜಪೆ : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಮಂಗಳೂರು ವಿವಿ ಮಟ್ಟದ ಪುರುಷರ ಮತ್ತು ಮಹಿಳೆಯರ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.


ಸಮಗ್ರ ಪ್ರಶಸ್ತಿ ವಿಭಾಗದಲ್ಲಿ ಮಂಗಳೂರು ಸೈಂಟ್ ಅಲೋಸಿಯಸ್ ಕಾಲೇಜು ಪ್ರಥಮ, ಮಂಗಳೂರು ಎಸ್‌ಡಿಎಂ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ ದ್ವಿತೀಯ, ಮಂಗಳೂರು ಸೈಂಟ್ ಆಗ್ನೆಸ್ ಕಾಲೇಜು ತೃತೀಯ ಪ್ರಶಸ್ತಿ ಪಡೆದವು.
ಪುರುಷರ ವಿಭಾಗದಲ್ಲಿ ಮಂಗಳೂರು ಎಸ್‌ಡಿಎಂ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ ಪ್ರಥಮ, ಕುಂದಾಪುರ ಭಂಡಾರ್‌ಕಾರ‍್ಸ್ ಕಾಲೇಜು ದ್ವಿತೀಯ, ಮಂಗಳೂರು ಸೈಂಟ್ ಅಲೋಶಿಯಸ್ ಕಾಲೇಜು ತೃತೀಯ ಪ್ರಶಸ್ತಿಯನ್ನು ಪಡೆದವು. ಮಹಿಳೆಯರ ವಿಭಾಗದಲ್ಲಿ ಮಂಗಳೂರು ಸೈಂಟ್ ಆಗ್ನೆಸ್ ಕಾಲೇಜು ಪ್ರಥಮ, ಸೈಂಟ್ ಅಲೋಸಿಯಸ್ ಕಾಲೇಜು ದ್ವಿತೀಯ, ಕುಂದಾಪುರ ಭಂಡಾರ್‌ಕಾರ‍್ಸ್ ಕಾಲೇಜು ತೃತೀಯ ಪ್ರಶಸ್ತಿ ಪಡೆದವು.
ಮೂಡುಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ಎಂ. ವಿವೇಕ್ ಆಳ್ವ, ಹಳೆ ವಿದ್ಯಾರ್ಥಿ ಸಂಘದ ಕಿರಣ್ ಕುಮಾರ ಶೆಟ್ಟಿ, ಉದ್ಯಮಿ ಧನಂಜಯ ರೈ, ವೃಂದಾ ಎಸ್. ಹೆಗ್ಡೆ, ಕಟೀಲು ಕಾಲೇಜಿನ ಪ್ರಾಂಶುಪಾಲ ಡಾ. ವಿಜಯ್ ವಿ., ಜಯರಾಮ ರೈ, ಶೆಲ್ವಂದ್ರನ್, ವಿವಿಯ ಶಂಕರ ನಾರಾಯಣ, ಕರಾಟೆ ಶಿಕ್ಷಕರಾದ ಈಶ್ವರ ಕಟೀಲ್, ಮೋರ್ಗನ್ ವಿಲಿಯಂ, ಚಂದ್ರಹಾಸ ಅಂಚನ್, ಸುರೇಶ್, ವಿಕ್ಟರ್, ಶಿವಪ್ರಸಾದ್, ನಾಗರಾಜ್, ನಿತಿನ್, ವಿದ್ಯಾರ್ಥಿ ಸಂಘದ ದೀಪಕ್, ಕೃಷ್ಣರಾಜ ಐತಾಳ್, ಪುಷ್ಪರಾಜ ಶೆಟ್ಟಿ, ಬಿ. ನಿಶಾ, ಆಶಿಕ್, ಜಯಲಕ್ಷ್ಮೀ ಮತ್ತಿತರರಿದ್ದರು.

Leave a Reply

Your email address will not be published. Required fields are marked *

ಉಡುಪಿ : ಕಾಪುವಿನಲ್ಲಿ ಭೀಕರ ಅಪಘಾತ…!

ಬಂಟ್ವಾಳ : ಸಜಿಪದಲ್ಲಿ ಭೀಕರ ಅಪಘಾತ…!

ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ….!

ಬಂಟ್ವಾಳ: ಬಡಗಬೆಳ್ಳೂರಿನಲ್ಲಿ ಕುಸಿದು ಬಿದ್ದ ಸೇತುವೆ; ಜನ ಸಂಚಾರಕ್ಕೆ ಭಾರೀ ಸಂಕಷ್ಟ…..!

ಬಂಟ್ವಾಳ: ಜ್ವರದಿಂದ ಬಳಲುತ್ತಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ನಿಧನ….!

ಬಂಟ್ವಾಳ: ಮಿನಿ ವಿಧಾನಸೌಧ ಮುಂಭಾಗದ ಕ್ಯಾಂಟೀನ್‌ನಲ್ಲಿ ಅನಿಲ ಸೋರಿಕೆ ಆತಂಕ….!

ಕಾಸರಗೋಡು: ಸಮುದ್ರದಲ್ಲಿ ಕೊಚ್ಚಿಹೋದ ಇಬ್ಬರು ಕಾಲೇಜು ವಿದ್ಯಾರ್ಥಿಗಳು..!

ಕಡಬ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕಪ್ ಪಲ್ಟಿ..!

ಕಡಬ: ಗೋಳಿತ್ತಡಿ-ಏಣಿತ್ತಡ್ಕ-ಕುದುಲೂರು ಸಂಪರ್ಕಿತ ರಸ್ತೆ; ರಸ್ತೆಯುದ್ದಕ್ಕೂ ಹೊಂಡಮಯ..!

error: Content is protected !!