ಪುತ್ತೂರಿನ ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವದ ಅಂಗವಾಗಿ ನ.24ರಂದು ರಾತ್ರಿ ಕಾರ್ತಿಕ ದೀಪೋತ್ಸವ, ಲಕ್ಷದೀಪೋತ್ಸವ ಹಾಗೂ ಕುರಿಂದೋತ್ಸವವು ವಿಜೃಂಭಣೆಯಿಂದ ನಡೆಯಿತು.

ಬೆಳಿಗ್ಗೆ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಶ್ರೀ ದೇವರು ವನಭೋಜನ ಕಟ್ಟೆಗೆ ಚಿತ್ತೈಸಿದರು. ಅಲ್ಲಿ ಧಾತ್ರಿ ಹೋಮ ನೆರವೇರಿತು. ಮಧ್ಯಾಹ್ನ ವನದಲ್ಲಿ ಶ್ರೀ ದೇವರಿಗೆ ಮಹಾಪೂಜೆ ನಡೆಯಿತು. ಸಂಜೆ 7 ಗಂಟೆಗೆ ದೀಪ ನಮಸ್ಕಾರ ಹಾಗೂ ರಾತ್ರಿ ಪೂಜೆ ನೆರವೇರಿತು.
ಬಳಿಕ ಶ್ರೀ ದೇವರು ವನಭೋಜನ ಕಟ್ಟೆಯಲ್ಲಿ ಆಸೀನರಾದ ನಂತರ ಸುಮಾರು ಒಂದೂವರೆ ಗಂಟೆಗಳ ಕಾಲ ಆಕರ್ಷಕ ಸುಡುಮದ್ದು ಪ್ರದರ್ಶನ ನಡೆಯಿತು. ನಂತರ ಶ್ರೀ ದೇವರ ಪೇಟೆ ಸವಾರಿ ಉತ್ಸವ, ಕಟ್ಟೆಪೂಜೆಗಳು ನೆರವೇರಿದವು. ದರ್ಬೆ ವೃತ್ತದಲ್ಲಿ ಕುರಿಂದೋತ್ಸವ ನಡೆದ ಬಳಿಕ ಪರ್ಲಡ್ಕ ರಸ್ತೆಯ ಮೂಲಕ ಉತ್ಸವವು ದೇವಸ್ಥಾನದಲ್ಲಿ ಸಮಾಪನಗೊಂಡಿತು.
ಇದೇ ಸಂದರ್ಭದಲ್ಲಿ ದರ್ಬೆಯಲ್ಲಿ ಭಜನಾ ಕಾರ್ಯಕ್ರಮ ನಡೆಯಿತು. ದೇವಸ್ಥಾನದ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.



