ಮುಂಬಯಿ: ಸೋಮವಾರದಂದು ಮುಂಬಯಿಯಲ್ಲಿ ಬೀಸಿದ ಬಿರುಗಾಳಿ ಮತ್ತು ಅದರ ಜೊತೆ ಸುರಿದ ಮುಂಗಾರು ಪೂರ್ವ ಮಳೆಯಿಂದಾಗಿ ಘಾಟ್ಕೊಪರ್ ಉಪನಗರದಲ್ಲಿ ಬೃಹತ್ ಬಿಲ್ ಬೋರ್ಡ್ ಉರುಳಿಬಿದ್ದು ಕನಿಷ್ಟ ಹದಿನಾಲ್ಕು ಮಂದಿ ಮೃತಪಟ್ಟಿದ್ದಾರೆ ಹಾಗು ಇತರ ಕನಿಷ್ಠ ಎಪ್ಪತ್ತು ಮಂದಿ ಹಾಯಗೊಂಡಿದ್ದಾರೆ.

ಪಾಲಿಕೆ ಅಧಿಕಾರಿಗಳು ಈ ಬಿಲ್ ಬೋರ್ಡನ್ನು ಅಕ್ರಮವಾಗಿ ಅಳವಡಿಸಲಾಗಿತ್ತು ಎಂದು ಹೇಳಿದ್ದಾರೆ. ಪೆಟ್ರೋಲ್ ಪಂಪ್ ಬಳಿ ಈ ದುರ್ಘಟನೆ ಸಂಭವಿದ್ದರಿಂದ ನೂರು ಅಡಿಗೂ ಹೆಚ್ಚು ಎತ್ತರದ ಬಿಲ್ ಬೋರ್ಡ್ ಮಗುಚಿಕೊಂಡ ಘಟನೆಯಲ್ಲಿ ಅದರಡಿಗೆ ಸಿಲುಕಿದವರನ್ನು ರಕ್ಷಿಸುವ ಕಾರ್ಯ ನಿಧಾನಗತಿಯಿಂದ ಸಾಗಿದೆ. ಗಾಯಗೊಂಡವರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.



