ಜನ ಮನದ ನಾಡಿ ಮಿಡಿತ

Advertisement

ತ್ಯಾಜ್ಯ ಎಸೆದವನ ಗುರುತು ಸಿಸಿಟಿವಿಯಲ್ಲಿ ಸೆರೆ

ಮಂಜನಾಡಿ:ರಸ್ತೆ ಬದಿಯ ತ್ಯಾಜ್ಯ ಸಮಸ್ಯೆಯಿಂದ ಬೇಸತ್ತ ಗ್ರಾ.ಪಂ ಆಡಳಿತ ಸಿ.ಸಿ ಟಿವಿ ಅಳವಡಿಸಿದ ದಿನದಂದೇ ಕೇರಳ ನೋಂದಾಯಿಸಲ್ಪಟ್ಟ ಕಾರಿನಲ್ಲಿ ತ್ಯಾಜ್ಯವನ್ನು ತಂದು ರಸ್ತೆಬದಿಯಲ್ಲೇ ಎಸೆದು ಹೋಗಿರುವ ಘಟನೆ ಮಂಜನಾಡಿ ಗ್ರಾಮದ ಬಟ್ಯಡ್ಕ ನಿವೇಶನದ ಬಳಿ ಸೆರೆಯಾಗಿದೆ. ಕರ್ನಾಟಕ- ಕೇರಳ ಸಂಪರ್ಕಿಸುವ ರಸ್ತೆ ಇದಾಗಿರುವುದರಿಂದ ಕೇರಳ ಭಾಗದಿಂದ ತ್ಯಾಜ್ಯ ತಂದು ಇಲ್ಲಿ ಎಸೆಯಲಾಗುತ್ತಿದೆಯೇ ಅನ್ನುವ ಅನುಮಾನ ವ್ಯಕ್ತವಾಗಿದೆ.

ಕೇರಳ ನೋಂದಾಯಿತ Kl 14AB3823 ಟಾಟಾ‌ ಆಲ್ಟ್ರೋಝ್ ಕಾರಿನಲ್ಲಿ ತ್ಯಾಜ್ಯ ತಂದ ಆರೋಪಿ ಬಟ್ಯಡ್ಕ ನಿವೇಶನಗಳಿರುವ ಸಮೀಪ ಕಾರು ನಿಲ್ಲಿಸಿ ತ್ಯಾಜ್ಯ ಎಸೆದು ಪರಾರಿಯಾಗಿದ್ದಾನೆ. ಈ ಭಾಗದಲ್ಲಿ ರಸ್ತೆಬದಿಯಲ್ಲಿ ತ್ಯಾಜ್ಯ ಎಸೆಯುವ ಪರಿಣಾಮ ಮಾಲಿನ್ಯ ಉಂಟಾಗಿ ಸ್ಥಳೀಯರು ಗ್ರಾ.ಪಂ.ಗೆ ವ್ಯಾಪಕವಾಗಿ ದೂರುಗಳನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ಮೇ.19 ರಂದು ಸಿಸಿಟಿವಿಯನ್ನು ಗ್ರಾ.ಪಂ ಅಳವಡಿಸಿತ್ತು. ಅಂದೇ ತ್ಯಾಜ್ಯ ಎಸೆಯುವವರ ಕೃತ್ಯ ಬಯಲಾಗಿದೆ. ಈ ಕುರಿತು ಮಂಜನಾಡಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಿದ್ದಾರೆ.

Leave a Reply

Your email address will not be published. Required fields are marked *

ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ….!

ಬಂಟ್ವಾಳ: ಬಡಗಬೆಳ್ಳೂರಿನಲ್ಲಿ ಕುಸಿದು ಬಿದ್ದ ಸೇತುವೆ; ಜನ ಸಂಚಾರಕ್ಕೆ ಭಾರೀ ಸಂಕಷ್ಟ…..!

ಬಂಟ್ವಾಳ: ಜ್ವರದಿಂದ ಬಳಲುತ್ತಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ನಿಧನ….!

ಬಂಟ್ವಾಳ: ಮಿನಿ ವಿಧಾನಸೌಧ ಮುಂಭಾಗದ ಕ್ಯಾಂಟೀನ್‌ನಲ್ಲಿ ಅನಿಲ ಸೋರಿಕೆ ಆತಂಕ….!

ಕಾಸರಗೋಡು: ಸಮುದ್ರದಲ್ಲಿ ಕೊಚ್ಚಿಹೋದ ಇಬ್ಬರು ಕಾಲೇಜು ವಿದ್ಯಾರ್ಥಿಗಳು..!

ಕಡಬ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕಪ್ ಪಲ್ಟಿ..!

ಕಡಬ: ಗೋಳಿತ್ತಡಿ-ಏಣಿತ್ತಡ್ಕ-ಕುದುಲೂರು ಸಂಪರ್ಕಿತ ರಸ್ತೆ; ರಸ್ತೆಯುದ್ದಕ್ಕೂ ಹೊಂಡಮಯ..!

ಬಂಟ್ವಾಳ: ಪಾಣೆಮಂಗಳೂರು ಕಲ್ಲುರ್ಟಿ ದೈವಸ್ಥಾನದ ಮುಂಭಾಗದ ಸರ್ವೀಸ್ ರಸ್ತೆಯಲ್ಲಿ ಹೊಂಡಗುಂಡಿ…!

ಉಡುಪಿ: ಮಾದಕ ದ್ರವ್ಯ ಸಾಗಾಟ- ಮಾರಾಟ ಪ್ರಕರಣ: ಪಿಐಟಿ- ಎನ್‌ಡಿಪಿಎಸ್ ಕಾಯ್ದೆಯಡಿ ಆರೋಪಿಯ ಬಂಧನ…!

error: Content is protected !!