ಜನ ಮನದ ನಾಡಿ ಮಿಡಿತ

Advertisement

ಬಂಟ್ವಾಳ: ಪಾಕೃತಿಕ ವಿಕೋಪ; ಲಕ್ಷಾಂತರ ರೂ. ನಷ್ಟ

ಬಂಟ್ವಾಳ: ಮಳೆಗಾಲ ಆರಂಭವಾದ ಬಳಿಕ ನಿತ್ಯ ತಾಲೂಕಿನಲ್ಲಿ ಪಾಕೃತಿಕ ವಿಕೋಪಕ್ಕೆ ತುತ್ತಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸುತ್ತಿದ್ದು, ಜುಲೈ 26 ರ ಶುಕ್ರವಾರ ಅನೇಕ ಮನೆಗಳಿಗೆ ಹಾನಿಯಾಗಿದೆ.
ನರಿಕೊಂಬು ಗ್ರಾಮದ ಮಿತ್ತಿಲಕೋಡಿ ನಾರಾಯಣ ಸಪಲ್ಯ ಅವರ ಮನೆಗೆ ಮರಬಿದ್ದು ಭಾಗಶ: ಹಾನಿಯಾದ ಘಟನೆ ಸಂಭವಿಸಿದೆ.

ಘಟನಾ ಸ್ಥಳಕ್ಕೆ ನರಿಕೊಂಬು ಗ್ರಾ.ಪಂ.ಅಧ್ಯಕ್ಷ ಸಂತೋಷ್ ಕುಮಾರ್, ಸದಸ್ಯ ರಾದ ರಂಜಿತ್ ಕೆದ್ದೆಲ್, ರವಿ ಅಂಚನ್, ಅಬೆರೊಟ್ಟು, ಗ್ರಾಮ ಸಹಾಯಕ ಲಕ್ಷ್ಮಣ್ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನು ಅನೇಕ ಮನೆಗಳಿಗೆ ಹಾನಿಯಾಗಿದ್ದು, ಬಾಳ್ತಿಲ ಗ್ರಾಮದ ದಾಸಕೋಡಿ ನಿವಾಸಿ ದಾಮೋದರ ಪೂಜಾರಿ ಅವರ ಮನೆಗೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಪುದು ಗ್ರಾಮದ ಜುಮಾದಿಗುಡ್ಡೆ ಎಂಬಲ್ಲಿ ಸೆಲಿಮ್ ರವರ ಮನಗೆ ಮರಬಿದ್ದು ಹಾನಿಯಾಗಿದೆ.ತುಂಬೆ ಗ್ರಾಮದ ಸಾರಮ್ಮ ಎಂಬವರ ಮನೆಗೆ ಪಕ್ಕದ ಮನೆಯ ಶೀಟ್ ಬಿದ್ದು ಹಂಚು ಪುಡಿಯಾಗಿ ರಿಯಾಜ್ ಎಂಬವರಿಗೆ ಗಾಯವಾಗಿದೆ.
ಪುದು ಗ್ರಾಮದ ಹಸನಬ್ಬ ಅವರ ಮನೆಯ ಹಂಚು ಗಾಳಿಗೆ ಹಾರಿಹೋಗಿದೆ, ಪುದು ಗ್ರಾಮದ ಮಾರಿಪಳ್ಳ ಎಂಬಲ್ಲಿ ಇಬ್ರಾಹಿಂ ಅವರ ಮನೆಗೆ ಹಾಗೂ ಗೋಡೆಗೆ ಹಾನಿಯಾಗಿದೆ.ಪುದು ಗ್ರಾಮದ ಮಾರಿಪಳ್ಳ ಚಂದ್ರಕಲಾ ಅವರ ಮನೆಯ ಹಂಚು ಗಾಳಿಗೆ ಹಾರಿಹೋಗಿದೆ. ಪುದು ಗ್ರಾಮದ ಮಾರಿಪಳ್ಳ ಎಂಬಲ್ಲಿ ಮೊಯಿದ್ದೀನ್ ಅವರ ಮನೆಯ ಹಂಚು ಹಾಗು ಗೋಡೆಗೆ ಹಾನಿಯಾಗಿದೆ.ಮಾಣಿ ಗ್ರಾಮದ ಸೂರಿಕುಮೇರು ನಿವಾಸಿ ಚೆನ್ನಮ್ಮ ಅವರ ಮನೆಗೆ ಮರ ಬಿದ್ದು ಭಾಗಶಃ ಹಾನಿಯಾಗಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ.

 

Leave a Reply

Your email address will not be published. Required fields are marked *

ಮಂಗಳೂರು: ಕ್ರೀಡಾಪಟು ಎಂ.ಆರ್. ಪೂವಮ್ಮಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಆತ್ಮೀಯ ಸ್ವಾಗತ

ಮಂಗಳೂರು: 2026ನೇ ಸಾಲಿನ ಕಾರಂತ ಪ್ರಶಸ್ತಿಗೆ ಹಿರಿಯ ಸಾಹಿತಿ ವೈದೇಹಿ ಆಯ್ಕೆ..!

ಕಡಬ: ಗುಂಡ್ಯ-ಸುಬ್ರಹ್ಮಣ್ಯ ಹೆದ್ದಾರಿಯಲ್ಲಿ ಕಾರಿಗೆ ಕಡವೆ ಡಿಕ್ಕಿ: ಸ್ಥಳದಲ್ಲೇ ಸಾವು

ಮಂಗಳೂರು: ಕರ್ನಾಟಕದ ಕ್ರೀಡಾಪಟುಗಳಿಗೆ ಪ್ರೋತ್ಸಾಹಧನ ಹೆಚ್ಚಿಸಿ: ಎಂ.ಆರ್. ಪೂವಮ್ಮ ಆಗ್ರಹ

ಬಂಟ್ವಾಳ: ಬಂಟ್ವಾಳದಲ್ಲಿ ಎರಡು ಕಡೆ ಚಿರತೆ ಸೆರೆಗೆ ಬೋನು; ಆತಂಕದಲ್ಲಿ ಸ್ಥಳೀಯರು…!

ಮಂಗಳೂರು: ಮಾಡೂರು ಯೂಸುಫ್ ಹತ್ಯೆ ಪ್ರಕರಣ: ಐವರಿಗೆ ಜೀವಾವಧಿ ಶಿಕ್ಷೆ…!

ತಿರುವನಂತಪುರಂ: ಪತಿಯ ಸ್ನೇಹಿತೆಯ ಮೇಲೆ ಅತ್ಯಾಚಾರಕ್ಕೆ ಸುಪಾರಿ ಆರೋಪ: ಮಹಿಳೆ ಸೇರಿ ಐವರ ಬಂಧನ

ಉಡುಪಿ: ಕೊಲ್ಲೂರಿನಲ್ಲಿ ದನವನ್ನು ಕಾರಿನಲ್ಲಿ ಎಳೆದುಕೊಂಡು ಹೋದ ಪ್ರಕರಣ: ಪ್ರಮುಖ ಆರೋಪಿ ಬಂಧನ

ಸುಳ್ಯ: ಸುಳ್ಯದಲ್ಲಿ ಅ.5ರಂದು ಗಾಂಧಿ ಸ್ಮೃತಿ ಹಾಗೂ ಬೃಹತ್ ಜನಜಾಗೃತಿ ಸಮಾವೇಶ

error: Content is protected !!