ಜನತಾಪ್ರಭ ಪತ್ರಿಕೆಯ ವತಿಯಿಂದ ನವೆಂಬರ್ 29ರಂದು ಬೆಂಗಳೂರಿನಲ್ಲಿ ನಡೆಯಲಿರುವ ‘ಕರ್ನಾಟಕ ರಾಜ್ಯೋತ್ಸವ ಸಂಭ್ರಮ–ಸಾಧಕರ ಸಮಾಗಮ’ ಕಾರ್ಯಕ್ರಮದ ಅಧ್ಯಕ್ಷರಾಗಿ ಕನ್ನಡ ಭವನದ ರೂವಾರಿ, ಹಿರಿಯ ಕನ್ನಡಪರ ಹೋರಾಟಗಾರ ಡಾ. ವಾಮನ್ ರಾವ್ ಬೇಕಲ್ ಆಯ್ಕೆಯಾಗಿದ್ದಾರೆ.

ಗಂಧದ ಗುಡಿ ಕನ್ನಡ ಸಂಘ, ನ್ಯಾಷನಲ್ ಮೀಡಿಯಾ ಮಾಸ್ಟರ್ಸ್ ಅಸೋಸಿಯೇಷನ್, ಚೇತನ ಫೌಂಡೇಶನ್ ಧಾರವಾಡ ಹಾಗೂ ಕನಕಶ್ರೀ ಕನ್ನಡ ಸಂಘಟನೆಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕನ್ನಡ ನಾಡು, ನುಡಿ, ಭಾಷೆ, ಸಂಸ್ಕೃತಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಸಾಧಕರ ಸಮಾಗಮದೊಂದಿಗೆ ಕೆಂಪೇಗೌಡ ಪ್ರಶಸ್ತಿ, ಧೀಮಂತ ಕನ್ನಡಿಗ ಮತ್ತು ಕನ್ನಡತಿ ಪ್ರಶಸ್ತಿ, ಶಿಕ್ಷಕರತ್ನ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ವಿವಿಧ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ.
ನವೆಂಬರ್ 29ರಂದು ಮಧ್ಯಾಹ್ನ 2.30ಕ್ಕೆ ಬೆಂಗಳೂರಿನ ಜಯನಗರ 8ನೇ ಬ್ಲಾಕ್‌ನ ಜೆಎಸ್‌ಎಸ್ ಕ್ಯಾಂಪಸ್‌ನ ಚಂದ್ರಶೇಖರ ಚಿಂತನ ಮಂಟಪದಲ್ಲಿ ಸಮಾರಂಭ ನಡೆಯಲಿದೆ.



