ಜನ ಮನದ ನಾಡಿ ಮಿಡಿತ

Advertisement

ಅಖಿಲ ಭಾರತ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಅಥ್ಲೆಟಿಕ್ಸ್ ಕೂಟ ಎಲ್‌ಐಸಿ ತಂಡ ಚಾಂಪಿಯನ್‌

ಮೂಡುಬಿದಿರೆ : ಉತ್ತರಾಖಂಡ್‌ ರಾಜಧಾನಿ ಡೆಹ್ರಾಡೂನ್‌ನಲ್ಲಿ ಇತ್ತೀಚೆಗೆ ನಡೆದ ಅಖಿಲ ಭಾರತ ಸರ್ಕಾರಿ ಸ್ವಾಮ್ಯದ ಅಥ್ಲೆಟಿಕ್ಸ್ ಚಾಂಪಿಯನ್ ಷಿಪ್ ಕ್ರೀಡಾಕೂಟದಲ್ಲಿ ಎಲ್‌ಐಸಿ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ತಂಡದ ಸದಸ್ಯೆ, ಆಳ್ವಾಸ್ ಕಾಲೇಜಿನ ಹಳೆ ವಿದ್ಯಾರ್ಥಿನಿ ಶಿರ್ತಾಡಿಯ ಜಾಯ್ಲಿನ್ ಲೋಬೊ ಅವರು ಲಾಂಗ್ ಜಂಪ್‌ ಮತ್ತು ಟ್ರಿಬ್ಬಲ್ ಜಂಪ್ ಕ್ರೀಡೆಯಲ್ಲಿ ಗಮನಾರ್ಹ ಸಾಧನೆ ಮೂಲಕ ಚಿನ್ನದ ಪದಕ ಹಾಗೂ 4×100 ಮತ್ತು 4×400 ರಿಲೇ ಓಟದಲ್ಲಿ ಬೆಳ್ಳಿ ಪದಕ‌ ಗಳಿಸಿ ಗಮನ ಸೆಳೆದರು. ಹೈಜಂಪ್‌ನಲ್ಲಿ ಸುಪ್ರೀತ್ ರಾಜ್ ಗೆ ಚಿನ್ನ, ಜಾವೆಲಿನ್‌ ಮತ್ತು ಶಾಟ್‌ಪುಟ್‌ ಕ್ರೀಡೆಯಲ್ಲಿ ಶಹೆಜಹಾನಿ ರವರು ಚಿನ್ನದ ಪದಕ ಮತ್ತು 4×100 ರಿಲೇ ಓಟದಲ್ಲಿ ಬೆಳ್ಳಿ ಪದಕ ಗೆದ್ದ ಹಿರಿಮೆಗೆ ಪಾತ್ರರಾದರು.

ಇತರ ಕ್ರೀಡಾಪಟುಗಳಾದ ಹರ್ಷಿಣಿ ಅವರು ಹೈಜಂಪ್‌ನಲ್ಲಿ ಚಿನ್ನ, ಟ್ರಿಪ್ಪಲ್ ಜಂಪ್ ಹಾಗು 4×400 ರಿಲೇ ಓಟದಲ್ಲಿ ಬೆಳ್ಳಿ ಪದಕ‌ವನ್ನು ಗೆಲ್ಲುವ ಮೂಲಕ ತಂಡದ ಸಾಧನೆಗೆ ಗಣನೀಯ ಕೊಡುಗೆ ನೀಡಿದರು. ಈ ಮೂಲಕ ಎಲ್ ಐಸಿ ತಂಡ ಐದು ವಿಭಾಗಳಲ್ಲಿ ಚಾಂಪಿಯನ್ ಅಗಿ ಹೊರಹೊಮ್ಮಿತು.

ಎಲ್ ಐ ಸಿ ತಂಡವು ಪುರುಷರ ಹಾಗೂ ಮಹಿಳಾ ವಿಭಾಗದಲ್ಲಿ ಸಮಗ್ರ ಚಾಂಪಿಯನ್ ಆಗುವುದರ ಜೊತೆಗೆ ಪುರುಷರ ಫೀಲ್ಡ್ ಮತ್ತು ಟ್ರಾಕ್ ಚಾಂಪಿಯನ್, ಮಹಿಳಾ ಫೀಲ್ಡ್ ಚಾಂಪಿಯನ್ ಪ್ರಶಸ್ತಿಗೂ ಪಾತ್ರವಾಯಿತು.

ಕ್ರೀಡಾಕೂಟದಲ್ಲಿ ಗಣನೀಯ ಸಾಧನೆ ಮಾಡಿದ ತಂಡದ ಸದಸ್ಯರಿಗೆ ಎಲ್‌ಐಸಿ ಸಂಸ್ಥೆಯು ಅಭಿನಂದಿಸಿದೆ.

Leave a Reply

Your email address will not be published. Required fields are marked *

ಮಂಗಳೂರು: ಕ್ರೀಡಾಪಟು ಎಂ.ಆರ್. ಪೂವಮ್ಮಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಆತ್ಮೀಯ ಸ್ವಾಗತ

ಮಂಗಳೂರು: 2026ನೇ ಸಾಲಿನ ಕಾರಂತ ಪ್ರಶಸ್ತಿಗೆ ಹಿರಿಯ ಸಾಹಿತಿ ವೈದೇಹಿ ಆಯ್ಕೆ..!

ಕಡಬ: ಗುಂಡ್ಯ-ಸುಬ್ರಹ್ಮಣ್ಯ ಹೆದ್ದಾರಿಯಲ್ಲಿ ಕಾರಿಗೆ ಕಡವೆ ಡಿಕ್ಕಿ: ಸ್ಥಳದಲ್ಲೇ ಸಾವು

ಮಂಗಳೂರು: ಕರ್ನಾಟಕದ ಕ್ರೀಡಾಪಟುಗಳಿಗೆ ಪ್ರೋತ್ಸಾಹಧನ ಹೆಚ್ಚಿಸಿ: ಎಂ.ಆರ್. ಪೂವಮ್ಮ ಆಗ್ರಹ

ಬಂಟ್ವಾಳ: ಬಂಟ್ವಾಳದಲ್ಲಿ ಎರಡು ಕಡೆ ಚಿರತೆ ಸೆರೆಗೆ ಬೋನು; ಆತಂಕದಲ್ಲಿ ಸ್ಥಳೀಯರು…!

ಮಂಗಳೂರು: ಮಾಡೂರು ಯೂಸುಫ್ ಹತ್ಯೆ ಪ್ರಕರಣ: ಐವರಿಗೆ ಜೀವಾವಧಿ ಶಿಕ್ಷೆ…!

ತಿರುವನಂತಪುರಂ: ಪತಿಯ ಸ್ನೇಹಿತೆಯ ಮೇಲೆ ಅತ್ಯಾಚಾರಕ್ಕೆ ಸುಪಾರಿ ಆರೋಪ: ಮಹಿಳೆ ಸೇರಿ ಐವರ ಬಂಧನ

ಉಡುಪಿ: ಕೊಲ್ಲೂರಿನಲ್ಲಿ ದನವನ್ನು ಕಾರಿನಲ್ಲಿ ಎಳೆದುಕೊಂಡು ಹೋದ ಪ್ರಕರಣ: ಪ್ರಮುಖ ಆರೋಪಿ ಬಂಧನ

ಸುಳ್ಯ: ಸುಳ್ಯದಲ್ಲಿ ಅ.5ರಂದು ಗಾಂಧಿ ಸ್ಮೃತಿ ಹಾಗೂ ಬೃಹತ್ ಜನಜಾಗೃತಿ ಸಮಾವೇಶ

error: Content is protected !!