ಜನ ಮನದ ನಾಡಿ ಮಿಡಿತ

Advertisement

ಚೆನ್ನೈ:ಹಿಂದಿಗಿಂತ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಆರ್‌ಸಿಬಿ ಈ ಬಾರಿ 10 ಪಟ್ಟು ಉತ್ತಮ – ಎಬಿಡಿ

ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಆರ್‌ಸಿಬಿಯನ್ನು ದಕ್ಷಿಣ ಆಫ್ರಿಕಾ ಕ್ರಿಕೆಟಿಗ, ಆರ್‌ಸಿಬಿ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್‌ ಕೊಂಡಾಡಿದ್ದು, ‘ಈ ಹಿಂದಿನ ಆವೃತ್ತಿಗಳಿಗೆ ಹೋಲಿಸಿದರೆ ಆರ್‌ಸಿಬಿ ಈ ಬಾರಿ 10 ಪಟ್ಟು ಹೆಚ್ಚು ಸಮತೋಲನದಿಂದ ಕೂಡಿದೆ. ಇದು ಆರ್‌ಸಿಬಿ ಮುಂದಿನ ಹಾದಿಯನ್ನು ಸುಲಭಗೊಳಿಸಿದೆ’ ಎಂದಿದ್ದಾರೆ.

ಚೆಪಾಕ್‌ನಲ್ಲಿ ಚೆನ್ನೈ ಸೂಪರ್‌ಕಿಂಗ್ಸ್‌ ವಿರುದ್ಧ ಆರ್‌ಸಿಬಿ ಭರ್ಜರಿ ಜಯ ಸಾಧಿಸಿದ ಬೆನ್ನಲ್ಲೇ ಪಾಡ್‌ಕಾಸ್ಟ್‌ನಲ್ಲಿ ಎಬಿಡಿ ಅರ್‌ಸಿಬಿಯನ್ನು ಹೊಗಳಿದ್ದಾರೆ. ‘ ಕಳೆದ ವರ್ಷ ಹರಾಜಿನಲ್ಲಿ ಆರ್‌ಸಿಬಿಗೆ ಸಮತೋಲನದ ಅಗತ್ಯವಿದೆ ಎಂದು ನಾನು ಮಾತನಾಡಿದ್ದೆ. ಇದು ಬೌಲರ್‌ಗಳು, ಬ್ಯಾಟರ್‌ಗಳು ಅಥವಾ ಫೀಲ್ಡರ್‌ಗಳ ಬಗ್ಗೆ ಅಲ್ಲ. ಐಪಿಎಲ್ ತಂಡಗಳು ಮತ್ತು ಆಯ್ಕೆಗಳ ಬಗ್ಗೆ. ಆರ್‌ಸಿಬಿ ಉತ್ತಮ ಆರಂಭ ಮಾಡಿದೆ.

ಈ ಋತುವಿನಲ್ಲಿ ಎರಡು ಪಂದ್ಯಗಳನ್ನೂ ಎದುರಾಳಿಗಳ ತವರಿನಲ್ಲಿಯೇ ಸೋಲಿಸಿರುವುದು ಉತ್ತಮ ಆರಂಭ. ಇಲ್ಲಿಂದ ಪಾಯಿಂಟ್ ಟೇಬಲ್ ನೋಡಿದರೆ, ಆರ್‌ಸಿಬಿ ಅಗ್ರಸ್ಥಾನದಲ್ಲಿದೆ. ಎರಡು ಗೆಲುವುಗಳು ಮತ್ತು ಅದ್ಭುತ ರನ್ ರೇಟ್‌ ಹೊಂದಿರುವ ಏಕೈಕ ತಂಡ. ಆರ್‌ಸಿಬಿಗೆ ದಾರಿ ಸುಲಭವಾಗುತ್ತದೆ’ ಎಂದಿದ್ದಾರೆ.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರಿನ ನಾಯಕನ ಬಗ್ಗೆಯೂ ಎಬಿಡಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ‘ ರಜತ್‌ ಪಾಟಿದಾರ್‌ ಕೂಡ ಉತ್ತಮವಾಗಿ ಆಡುತ್ತಿದ್ದು, ವಿರಾಟ್‌ ಕೊಹ್ಲಿ ಸ್ಥಾನವನ್ನು ತುಂಬುತ್ತಿರುವ ನಾಯಕ. ಅವರು ಉತ್ತಮವಾಗಿ ಆಡುತ್ತಿದ್ದಾರೆ. ಸ್ಪಷ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ’ ಎಂದಿದ್ದಾರೆ.

Leave a Reply

Your email address will not be published. Required fields are marked *

ನವದೆಹಲಿ: ಅರಬ್ಬಿ ಸಮುದ್ರದಲ್ಲಿ ಭರ್ಜರಿ ಡ್ರಗ್ಸ್ ಬೇಟೆ: ₹3 ಸಾವಿರ ಕೋಟಿ ಮೌಲ್ಯದ ಮಾದಕವಸ್ತು ವಶ..!

ಮಂಗಳೂರು: MRPL ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಭೇಟಿ; ಪರಿಸ್ಥಿತಿ ಪರಿಶೀಲನೆ..!

ಬಂಟ್ವಾಳ: ಮಂಗಳೂರು ರೈಲು ಪ್ರದೇಶ ಮೈಸೂರು ವಿಭಾಗಕ್ಕೆ: ಪ್ರಮುಖ ನಿಲ್ದಾಣಗಳಿಗೆ ಅಧಿಕಾರಿಗಳ ಭೇಟಿ.

ಬೆಂಗಳೂರು: ಬೆಂಗಳೂರಿನಲ್ಲಿ ಟ್ರಾಫಿಕ್ ನಿಯಂತ್ರಣಕ್ಕೆ ಶಾಲಾ ಸಮಯ ಬದಲಾವಣೆಗೆ ಚಿಂತನೆ.

ಉಡುಪಿ: ಶಂಕರಪುರ ಮಠದಲ್ಲಿ ಅ.3, 4ರಂದು ಸಾಯಿ ಈಶ್ವರ್ ಗುರೂಜಿ ಪಂಚಾಶತ್ ಜನ್ಮ ವೈಭವ…!

ಪುತ್ತೂರು: ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಅವಧಿ ಮೀರಿದ ಮಾತ್ರೆ ವಿತರಣೆ ಆರೋಪ; ಅಧಿಕಾರಿಗಳಿಂದ ವಿಚಾರಣೆ

ನವದೆಹಲಿ: ಮೋದಿ–ಟ್ರಂಪ್ ದೂರವಾಣಿ ಮಾತುಕತೆ: ವ್ಯಾಪಾರ, ರಕ್ಷಣೆ, ಇಂಧನ ಸಹಕಾರದ ಕುರಿತು ಚರ್ಚೆ

ಮಂಗಳೂರು: ಮಂಗಳೂರು ರೈಲು ಪ್ರದೇಶ ಇಂದಿನಿಂದ ಮೈಸೂರು ವಿಭಾಗದ ಅಧೀನಕ್ಕೆ…!

ದುಬೈ: ಫ್ಲೈದುಬೈ ವಿಮಾನದಲ್ಲಿ ಕಾಕ್‌ಪಿಟ್ ಘಟನೆ: ಸಹ ಪೈಲಟ್‌ನ ಯತ್ನ ತಡೆದ ಭಾರತೀಯ ಪೈಲಟ್…!

error: Content is protected !!