ಜನ ಮನದ ನಾಡಿ ಮಿಡಿತ

Advertisement

ಹುಣಸೂರು: ಪ್ರತಿರ್ಷವೂ ಉತ್ತಮ ಫಸಲಿನ `ಡ್ರ‍್ಯಾಗನ್ ಫ್ರೂಟ್’

ಹುಣಸೂರು ತಾಲ್ಲೂಕಿನ ಕುಪ್ಪೆ ಕೊಳಗಟ್ಟದ ಪ್ರಗತಿಪರ ರೈತ ಕೆ.ಎಂ.ಮೂರ್ತಿ, ‘ಡ್ರ‍್ಯಾಗನ್ ಫ್ರೂಟ್’ ಕೃಷಿಯ ಮೂಲಕ ಪ್ರತಿರ್ಷವೂ ಉತ್ತಮ ಫಸಲಿನ ಜತೆಗೆ ಆದಾಯದ ‘ಸಿಹಿ’ ಕಾಣುತ್ತಿದ್ದಾರೆ.

ಟ್ಯಾಕ್ಸಿ ಚಾಲಕರಾಗಿದ್ದ ಅವರು, 10 ವರ್ಷದ ಬಳಿಕ ಎರಡು ಎಕರೆ ಕೃಷಿ ಭೂಮಿಯಲ್ಲಿ 3 ವರ್ಷದಿಂದ ಬೇಸಾಯದಲ್ಲಿ ತೊಡಗಿದ್ದಾರೆ. 2 ಎಕರೆಯಲ್ಲಿ ಡ್ರ‍್ಯಾಗನ್ ಫ್ರೂಟ್ ಬೆಳೆ ಬೆಳೆಯುತ್ತಿದ್ದಾರೆ. ಬೆಳೆದ ಹಣ್ಣು ತಾವೇ ಮಾರುತ್ತಿದ್ದಾರೆ. ಕೊಳವೆಬಾವಿ ಕೊರೆಸಲು ಸರ್ಕಾರದಿಂದ ಆರ್ಥಿಕ ನೆರವು ಪಡೆದಿದ್ದಾರೆ. 650 ಅಡಿ ಕೊರೆದರೂ ನಿರೀಕ್ಷೆಯಷ್ಟು ನೀರು ಬಾರಲಿಲ್ಲ. ಇದರಿಂದ ಬೇಸರಗೊಳ್ಳದೇ, ಕೋಲಾರ ಜಿಲ್ಲೆಯ ರೈತರು ಕಡಿಮೆ ನೀರಿನಲ್ಲಿ ಬೇಸಾಯ ಮಾಡುವ ಬಗ್ಗೆ ಮಾಹಿತಿ ಹೊಂದಿದ್ದ ಮೂರ್ತಿ, ಕಡಿಮೆ ನೀರಿನಲ್ಲಿ ಬೆಳೆಯಬಹುದಾದ ತೋಟಗಾರಿಕೆ ಬೆಳೆ ಮಾಡುವ ಆಸಕ್ತಿ ತೋರಿದರು. ಹೊಲಕ್ಕೆ ಹೊಂದಿಕೊಂಡಂತೆ ಪ್ರಾದೇಶಿಕ ಅರಣ್ಯ ಇಲಾಖೆಗೆ ಸೇರಿದ ಅರಬ್ಬಿ ತಿಟ್ಟು ಅರಣ್ಯವಿದ್ದು, ವನ್ಯಪ್ರಾಣಿಗಳ ಉಪಟಳವಿದ್ದು ಬೇಸಾಯ ಕಷ್ಟ ಸಾಧ್ಯವೆಂದು, ಬಹು ಬೇಡಿಕೆಯ ‘ಡ್ರ‍್ಯಾಗನ್ ಫ್ರೂಟ್” ಬೇಸಾಯದಿಂದ ವನ್ಯಪ್ರಾಣಿ ಹಾವಳಿ ಇಲ್ಲದೆ ಕಡಿಮೆ ನೀರು ಬಳಸಿ ಬೆಳೆಯಬಹುದು ಎಂಬ ಮಾಹಿತಿ ಸಂಗ್ರಹಿಸಿದರು.

ಬೆಂಗಳೂರಿನ ಯಲಹಂಕದ ನರ್ಸರಿಯಿಂದ ಖರೀದಿಸಿ ತಂದ ಡ್ರ‍್ಯಾಗನ್ ಫ್ರೂಟ್ ಸಸಿಗಳನ್ನು ಅರ್ಧ ಎಕರೆಯಲ್ಲಿ 2021ರಲ್ಲಿ ನಾಟಿ ಮಾಡಿದ್ದರು. ಅದು 2022ರಲ್ಲಿ ಅಲ್ಲಲ್ಲಿ ಫಸಲು ಬಿಡಲಾರಂಭಿಸಿತು. 2023-24ನೇ ಸಾಲಿನಲ್ಲಿ 1.50 ಲಕ್ಷ ಆದಾಯ ಸಿಕ್ಕಿದ್ದು, ಈ ಸಾಲಿನಲ್ಲಿ ಹಣ್ಣು ಮಾರಾಟ ಮಾಡಿ 50ಸಾವಿರ ಗಳಿಸಿದ್ದಾರೆ. ಚಾಲಕ ವೃತ್ತಿಗಿಂತಲೂ ನೆಮ್ಮದಿಯ ಜೀವನ ಕೃಷಿಕನಾಗಿ ಸಾಗಿಸುತ್ತಿದ್ದೇನೆ. ಆರಂಭದಲ್ಲಿ ಕಷ್ಟ ಎನಿಸಿತ್ತು. ಕೆಲವು ರೈತರ ಪ್ರೋತ್ಸಾಹದಿಂದ ಸ್ಫೂರ್ತಿ ಪಡೆದು ಎದೆಗುಂದದೆ ಕೃಷಿಯಲ್ಲಿ ತೊಡಗಿದ್ದೇನೆ. ಬೇಸಾಯಕ್ಕೆ ಆರ್ಥಿಕ ಸಹಾಯ ಬೇಕಾಗಿತ್ತು. ಕಾರು ಮಾರಾಟ ಮಾಡಿ ಆ ಹಣದಿಂದ ಟ್ರ‍್ಯಾಕ್ಟರ್ ಖರೀದಿಸಿ ಯಾಂತ್ರಿಕೃತ ಬೇಸಾಯ ಮಾಡುತ್ತಿರುವೆ. ಬಿಡುವಿನ ಸಮಯದಲ್ಲಿ ಇತರೆ ಹೊಲಕ್ಕೂ ಉಳುಮೆಗೆ ಬಾಡಿಗೆಗೆ ಹೋಗುವೆ’ ಎನ್ನುತ್ತಾರೆ ಅವರು. ಉದ್ಯೋಗ ಖಾತ್ರಿ ಯೋಜನೆಯಲ್ಲಿ 60ಸಾವಿರ ಆರ್ಥಿಕ ಸಹಾಯ ಪಡೆದು ಡ್ರ‍್ಯಾಗನ್ ಫ್ರೂಟ್ ಬೆಳೆಯಲು ಅಗತ್ಯ ಬೇಕಾದ ಸಿಮೆಂಟ್ ಕಂಬಗಳನ್ನು ಸ್ವತಃ ನಿರ್ಮಿಸಿಕೊಂಡಿದ್ದೇನೆ. ಅರ್ಧ ಎಕರೆಯಲ್ಲಿ 150 ಗಿಡ ಬೆಳೆಸಿದ್ದು, ಈ ಸಾಲಿನಲ್ಲಿ 100 ಸಸಿ ಹಾಕುವ ಇಚ್ಛೆ ಇದೆ ಎಂದು ತಿಳಿಸಿದರು.

350 ರಿಂದ 500 ಗ್ರಾಂ. ತೂಕದ ಹಣ್ಣಿಗೆ ಕೆ.ಜಿಗೆ 70ರಿಂದ 200ವರೆಗೂ ಮೈಸೂರಿನ ದಲ್ಲಾಳಿಗೆ ಮಾರುತ್ತಿದ್ದೇನೆ. ಈ ಸಾಲಿನಿಂದ ಸ್ವತಃ ಕುಟುಂಬದವರೇ ರಾಷ್ಟ್ರೀಯ ಹೆದ್ದಾರಿ 275ರ ಬದಿಯಲ್ಲಿ ಅಂಗಡಿ ಹಾಕಿ ಹಣ್ಣು ಮಾರಾಟ ಮಾಡುತ್ತಿದ್ದೇವೆ ಎಂದರು. ಹುಣಸೂರು ತಾಲ್ಲೂಕಿನ ಕುಪ್ಪೆ ಕೊಳಗಟ್ಟ ಗ್ರಾಮದ ಪ್ರಗತಿಪರ ರೈತ ಕೆ.ಎಂ.ಮೂರ್ತಿ ತನ್ನ ಹೊಲದಲ್ಲಿ ಬೆಳೆದ ಡ್ರ‍್ಯಾಗನ್ ಫ್ರೂಟ್ ಫಸಲಿನೊಂದಿಗೆ ಮೂರ್ತಿ ತನ್ನ ಹೊಲದಲ್ಲಿ ಬೆಳೆದ ಹಣ್ಣು ಕಟಾವಾಗಿ ಮಾರುಕಟ್ಟೆಗೆ ಸಿದ್ದಗೊಂಡಿರುವ ಡ್ರ‍್ಯಾಗನ್ ಫ್ರೂಟ್ ಹುಣಸೂರಿನ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಪ್ರಗತಿಪರ ರೈತ ಮೂರ್ತಿ ಬೆಳೆದ ಹಣ್ಣನ್ನು ನೇರವಾಗಿ ಗ್ರಾಹಕರಿಗೆ ಮಾರಾಟದಲ್ಲಿ ತೊಡಗಿರುವುದು ಟ್ಯಾಕ್ಸಿ ಚಾಲಕ ವೃತ್ತಿಯಿಂದ ರೈತನಾಗಿ ಪರಿವರ್ತನೆ ಬೇಸಾಯದಲ್ಲಿ ತೃಪ್ತಿ ಜೀವನ ಕಟ್ಟಿಕೊಂಡ ರೈತ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿದೆ ಎಂದು ಮೂರ್ತಿ ತಿಳಿಸಿದರು.

Leave a Reply

Your email address will not be published. Required fields are marked *

ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ….!

ಬಂಟ್ವಾಳ: ಬಡಗಬೆಳ್ಳೂರಿನಲ್ಲಿ ಕುಸಿದು ಬಿದ್ದ ಸೇತುವೆ; ಜನ ಸಂಚಾರಕ್ಕೆ ಭಾರೀ ಸಂಕಷ್ಟ…..!

ಬಂಟ್ವಾಳ: ಜ್ವರದಿಂದ ಬಳಲುತ್ತಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ನಿಧನ….!

ಬಂಟ್ವಾಳ: ಮಿನಿ ವಿಧಾನಸೌಧ ಮುಂಭಾಗದ ಕ್ಯಾಂಟೀನ್‌ನಲ್ಲಿ ಅನಿಲ ಸೋರಿಕೆ ಆತಂಕ….!

ಕಾಸರಗೋಡು: ಸಮುದ್ರದಲ್ಲಿ ಕೊಚ್ಚಿಹೋದ ಇಬ್ಬರು ಕಾಲೇಜು ವಿದ್ಯಾರ್ಥಿಗಳು..!

ಕಡಬ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕಪ್ ಪಲ್ಟಿ..!

ಕಡಬ: ಗೋಳಿತ್ತಡಿ-ಏಣಿತ್ತಡ್ಕ-ಕುದುಲೂರು ಸಂಪರ್ಕಿತ ರಸ್ತೆ; ರಸ್ತೆಯುದ್ದಕ್ಕೂ ಹೊಂಡಮಯ..!

ಬಂಟ್ವಾಳ: ಪಾಣೆಮಂಗಳೂರು ಕಲ್ಲುರ್ಟಿ ದೈವಸ್ಥಾನದ ಮುಂಭಾಗದ ಸರ್ವೀಸ್ ರಸ್ತೆಯಲ್ಲಿ ಹೊಂಡಗುಂಡಿ…!

ಉಡುಪಿ: ಮಾದಕ ದ್ರವ್ಯ ಸಾಗಾಟ- ಮಾರಾಟ ಪ್ರಕರಣ: ಪಿಐಟಿ- ಎನ್‌ಡಿಪಿಎಸ್ ಕಾಯ್ದೆಯಡಿ ಆರೋಪಿಯ ಬಂಧನ…!

error: Content is protected !!