ಜನ ಮನದ ನಾಡಿ ಮಿಡಿತ

Advertisement

ಮಾಡೆಲ್ ಧ್ರುವ ಎಂಬಾತನ ಮೇಲೆ ಎರಗಿದ ಬಸ್ ಸಿಬ್ಬಂದಿ

ಆತ ಮಾಡೆಲ್ ಆತನಿಗೆ ತನ್ನ ದೇಹ ಮತ್ತು ಮುಖವೇ ಆಸ್ತಿ. ಅದನ್ನ ಕಾಪಾಡಿಕೊಳ್ಳಲು ಹರಸಾಹಸವನ್ನೆ ಮಾಡುತ್ತಾರೆ.

ಆದರೆ ಅದೊಂದು ಸಣ್ಣ ಕಾರಣಕ್ಕೆ ಬಸ್ ಸಿಬ್ಬಂದಿಗಳು ಈತನ ಮೇಲೆ ಎರಗಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿ, ದೇಹದ ಭಾಗಗಳಿಗೆ ಪರಚಿ ಬಾಸುಂಡೆ ಬರುವಂತೆ ರಾಡು, ದೊಣ್ಣೆಯಿಂದ ಥಳಿಸಿದ್ದು, ಬೆಲೆ ಬಾಳುವ ವಸ್ತು ದೋಚಿರುವ ಆರೋಪ ಕೇಳಿ ಬಂದಿದೆ. ಮಾಡೆಲ್ ಆಗಿರುವ ಧ್ರುವ್ ನಾಯ್ಕ್, ಥಾಯ್ ಲ್ಯಾಂಡ್‌ಗೆ ಹೋಗಿ ಜುಲೈ 1ರಂದು ಬೆಳಗ್ಗೆ ಬೆಂಗಳೂರಿಗೆ ಬಂದಿದ್ರು. ಹೀಗೆ ಬಂದವರು ಖಾಸಗಿ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದು, ರಾತ್ರಿ 11.30ಕ್ಕೆ ಬೆಂಗಳೂರಿನಿ0ದ ತಮ್ಮೂರು ಹುಬ್ಬಳ್ಳಿಗೆ ಹೋಗಲು ಸೀ ಬರ್ಡ್ ಬಸ್ ಬುಕ್ ಮಾಡಿದ್ದಾರೆ. ರಾತ್ರಿ ಬಸ್ ಏರಲು ಬಂದವರು ನರಕ ಕಾಣುವಂತಾಗಿದೆ. ಹೌದು,ರಾತ್ರಿ 1 ಗಂಟೆಗೆ ತನ್ನ ಸ್ನೇಹಿತರ ಜೊತೆಗೆ ಊರಿಗೆ ತೆರಳಲು ಆನಂದ್ ರಾವ್ ಸರ್ಕಲ್ ಬಳಿಗೆ ಧ್ರುವ್ ನಾಯ್ಕ್ ಬಂದಿದ್ರು. ಹೀಗೆ ಬಂದವರು ಓರ್ವ ಸ್ನೇಹಿತನ ಜೊತೆಗೆ ಕೆಳ ನಿಂತು ಸಿಗರೇಟ್ ಸೇದುತ್ತಿದ್ದರಂತೆ ಈ ವೇಳೆ ಬಸ್ ಬಾಗಿಲು ಬಂದ್ ಮಾಡಿದ ಚಾಲಕ ಬಸ್ ನಿಧಾನವಾಗಿ ಮೂವ್ ಮಾಡಿದ್ದ, ಈ ವೇಳೆ ಧ್ರುವ್ ಕೈ ಅಡ್ಡಗಟ್ಟಿ ನಾನು ಬರೋದಿದೆ ಬಸ್ ನಿಲ್ಲಿಸಿ ಎಂದಿದ್ದಾರೆ. ಈ ವೇಳೆ ಸೀ ಬರ್ಡ್ ಸಿಬ್ಬಂದಿ ಮತ್ತು ಧ್ರುವ್ ನಾಯ್ಕ್ ಮಧ್ಯೆ ಗಲಾಟೆ ಉಂಟಾಗಿದೆ.

Leave a Reply

Your email address will not be published. Required fields are marked *

ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ….!

ಬಂಟ್ವಾಳ: ಬಡಗಬೆಳ್ಳೂರಿನಲ್ಲಿ ಕುಸಿದು ಬಿದ್ದ ಸೇತುವೆ; ಜನ ಸಂಚಾರಕ್ಕೆ ಭಾರೀ ಸಂಕಷ್ಟ…..!

ಬಂಟ್ವಾಳ: ಜ್ವರದಿಂದ ಬಳಲುತ್ತಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ನಿಧನ….!

ಬಂಟ್ವಾಳ: ಮಿನಿ ವಿಧಾನಸೌಧ ಮುಂಭಾಗದ ಕ್ಯಾಂಟೀನ್‌ನಲ್ಲಿ ಅನಿಲ ಸೋರಿಕೆ ಆತಂಕ….!

ಕಾಸರಗೋಡು: ಸಮುದ್ರದಲ್ಲಿ ಕೊಚ್ಚಿಹೋದ ಇಬ್ಬರು ಕಾಲೇಜು ವಿದ್ಯಾರ್ಥಿಗಳು..!

ಕಡಬ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕಪ್ ಪಲ್ಟಿ..!

ಕಡಬ: ಗೋಳಿತ್ತಡಿ-ಏಣಿತ್ತಡ್ಕ-ಕುದುಲೂರು ಸಂಪರ್ಕಿತ ರಸ್ತೆ; ರಸ್ತೆಯುದ್ದಕ್ಕೂ ಹೊಂಡಮಯ..!

ಬಂಟ್ವಾಳ: ಪಾಣೆಮಂಗಳೂರು ಕಲ್ಲುರ್ಟಿ ದೈವಸ್ಥಾನದ ಮುಂಭಾಗದ ಸರ್ವೀಸ್ ರಸ್ತೆಯಲ್ಲಿ ಹೊಂಡಗುಂಡಿ…!

ಉಡುಪಿ: ಮಾದಕ ದ್ರವ್ಯ ಸಾಗಾಟ- ಮಾರಾಟ ಪ್ರಕರಣ: ಪಿಐಟಿ- ಎನ್‌ಡಿಪಿಎಸ್ ಕಾಯ್ದೆಯಡಿ ಆರೋಪಿಯ ಬಂಧನ…!

error: Content is protected !!