ಜನ ಮನದ ನಾಡಿ ಮಿಡಿತ

Advertisement

ಮಂಗಳೂರು: ಡ್ರಗ್ ಪೆಡ್ಡಿಂಗ್‌ನಲ್ಲಿ ತೊಡಗಿದ್ದ ವೈದ್ಯಕೀಯ ವಿದ್ಯಾರ್ಥಿ ಸೇರಿದಂತೆ ಮೂವರ ಬಂಧನ!

ಉಳ್ಳಾಲದ ಕೋಟೆಕಾರು ಗ್ರಾಮದ ಬಗಂಬಿಲ ಗ್ರೌಂಡ್ ಮತ್ತು ಪೆರ್ಮನ್ನೂರು ಗ್ರಾಮದ ಗಂಡಿ ಎಂಬಲ್ಲಿ ಡ್ರಗ್ ಪೆಡ್ಡಿಂಗ್‌ನಲ್ಲಿ ತೊಡಗಿದ್ದ ವೈದ್ಯಕೀಯ ವಿದ್ಯಾರ್ಥಿ ಸೇರಿದಂತೆ ಮೂವರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಿಂದ 59,300. ರೂ. ಬೆಲೆಬಾಳುವ 1.511 ಕೆಜಿ ತೂಕದ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ 2 ತೂಕ ಮಾಪಕ, 2 ಮೊಬೈಲ್, 1 ಸ್ಕೂಟರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಖಾಸಗಿ ಆಯುರ್ವೇದ ಕಾಲೇಜಿನಲ್ಲಿ ಬಿಎಎಂಎಸ್ ವಿದ್ಯಾರ್ಥಿ ಆಗಿರುವ ಮಹಾರಾಷ್ಟ್ರದ ಧುಲೆ ನಿವಾಸಿ ಮೊಹಮ್ಮದ್ ನಿಗಾರೀಸ್ ವಿಲಾಸಿ ಜೀವನಕ್ಕಾಗಿ ತನ್ನ ಊರಿನಿಂದ ಗಾಂಜಾ ತಂದು ಮಾರಾಟ ಮಾಡುತ್ತಿದ್ದನು. ಇನ್ನೊಂದು ಪ್ರಕರಣದಲ್ಲಿ ನಾಟೆಕಲ್ ಉರುಮಣೆ ನಿವಾಸಿ ಅಬ್ದುಲ್ ಶಕೀಬ್ ಯಾನೆ ಶಾಕಿ ಮತ್ತು ಪೆರ್ಮನ್ನೂರು ಗಂಡಿ ನಿವಾಸಿ ಸಬೀರ್ ಅಹಮ್ಮದ್ ಎಂಬವರನ್ನು ಬಂಧಿಸಲಾಗಿದೆ. ಅಬ್ದುಲ್ ಶಕೀಬ್ ಹಾಗೂ ಸಬೀರ್ ಅಹಮ್ಮದ್, ಡ್ರೈವರ್ ಮತ್ತು ಪೈಂಟರ್ ಆಗಿದ್ದು, ಅವರು ಸ್ನೇಹಿತರಾಗಿದ್ದರು. ಶಕೀಬನು ಬಿ.ಸಿ.ರೋಡ್‌ನ ಫ್ಯಾಬೀನ್ ಎಂಬಾತನಿಂದ ಗಾಂಜಾ ಪಡೆದುಕೊಂಡು ಮಾರಾಟ ಮಾಡುತ್ತಿರುವಾಗ ಗಂಡಿ ಪ್ರದೇಶದಿಂದ ಬಂಧಿಸಲಾಗಿದೆ. 420 ಗ್ರಾಂ ಗಾಂಜಾ, 6,000 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಉಳ್ಳಾಲ ಠಾಣಾಧಿಕಾರಿ ವಿರೂಪಾಕ್ಷ ಸ್ವಾಮಿ ನಿರ್ದೇಶನದಂತೆ ಎಸ್‌ಐ ಸಿದ್ದಪ್ಪ ನರನೂರ್ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದೆ.

Leave a Reply

Your email address will not be published. Required fields are marked *

ಮಂಗಳೂರು: ಮಂಗಳೂರಿನಲ್ಲಿ ಸಾರ್ವಜನಿಕ ಭೇಟಿ ನಡೆಸಿದ ಚೌಟ…!

ಬಂಟ್ವಾಳ: ಕಚೇರಿ ಪ್ರವೇಶ ದಾರಿಯಲ್ಲಿ ತ್ಯಾಜ್ಯ: ಅಧಿಕಾರಿಗಳ ಮೌನಕ್ಕೆ ಟೀಕೆ…!

ಬಂಟ್ವಾಳ: ಸಂಚರಿಸುತ್ತಿದ್ದ ಲಾರಿಯಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆ*ಂಕಿ…!

ಬಂಟ್ವಾಳ: ಹಗ್ಗ ಕಡಿದು ಬಾವಿಗೆ ಬಿದ್ದ ಇಬ್ಬರು ಕಾರ್ಮಿಕರು ಪಾರು….!

ಕಡೇಶಿವಾಲಯ: ನೆತ್ತರ ಬಾಬು ಪೂಜಾರಿಯವರ ಮನೆಗೆ ಸಿಡಿಲು ಬಡಿದು ಹಾನಿ….!

ಬಂಟ್ವಾಳ: ಸಿಡಿಲು ಬಡಿದ ಇಳಿಯೂರು ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ಭೇಟಿ ನೀಡಿದ ಬಿಜೆಪಿ ಮುಖಂಡ ಸಂದೇಶ್ ಶೆಟ್ಟಿ ಅರೆಬೆಟ್ಟು..!

ಬಂಟ್ವಾಳ: ಕರಾವಳಿಯ ಕಾರಣೀಕ ದೈವ ಕೊರಗಜ್ಜನಿಗೆ ಕೋಲ ಸೇವೆ ಸಲ್ಲಿಸಿದ ಖ್ಯಾತ ಚಲನಚಿತ್ರ ನಟಿಯಾಗಿರುವ ರಚಿತರಾಮ್..!

ಬಂಟ್ವಾಳ: ಬಂಟ್ವಾಳ ತಾಲೂಕಿನ ಮಹತೋಬಾರ ಶ್ರೀ ಕಾರಿಂಜೇಶ್ವರ ದೇವಸ್ಥಾನಕ್ಕೆ ಬಡಿದ ಸಿಡಿಲು..!

ಬಂಟ್ವಾಳ: ಬಂಟ್ವಾಳ ತಾಲೂಕಿನಲ್ಲಿ ಕೆಲ ಮನೆಗಳಿಗೆ ಸಿಡಿಲು ಬಡಿದು ಹಾನಿ..!

error: Content is protected !!