ಜನ ಮನದ ನಾಡಿ ಮಿಡಿತ

Advertisement

ಉಳ್ಳಾಲ: ಮಾದಕ ವಸ್ತುವಿನ ಮಾರಾಟದಲ್ಲಿ ತೊಡಗಿದ್ದ ಆರೋಪಿಯ ಬಂಧನ..!

ತಲಪಾಡಿ ಗ್ರಾಮದ ಕೆ.ಸಿ ರೋಡ್ ಫಲಾಹ್ ಶಾಲಾ ಬಸ್ಸು ನಿಲ್ದಾಣದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಎಮ್‌ಡಿಎಮ್‌ಎ ಕ್ರಿಸ್ಟಲ್ ಎಂಬ ಮಾದಕ ವಸ್ತುವನ್ನು ಮಾರಾಟದಲ್ಲಿ ತೊಡಗಿದ್ದ ಕೇರಳದ ಉಪ್ಪಳ, ಮಂಗಲ್ಪಾಡಿ ನಿವಾಸಿ ಶೇಖ್ ಮೊಹಮ್ಮದ್ ಕೈಫ್ ಎಂಬಾತನನ್ನು ಉಳ್ಳಾಲ ಪೊಲೀಸರು ಸೋಮವಾರದಂದು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದು ,ಕೃತ್ಯದಲ್ಲಿ ತೊಡಗಿದ್ದ ಮತ್ತಿಬ್ಬರು ಪೆಡ್ಲರ್‌ಗಳು ಪರಾರಿಯಾಗಿದ್ದಾರೆ.

ಬಂಧಿತ ಆರೋಪಿ ಮೊಹಮ್ಮದ್ ಕೈಫ್ ನಿಂದ 55,000/- ರೂಪಾಯಿ ಬೆಲೆ ಬಾಳುವ ನಿಷೇಧಿತ 11 ಗ್ರಾಂ ಎಮ್‌ಡಿಎಮ್‌ಎ ಕ್ರಿಸ್ಟಲ್ ಮತ್ತು ಕೃತ್ಯಕ್ಕೆ ಬಳಸಿದ್ದ 1 ತೂಕ ಮಾಪನ, 500 ರೂ.ನಗದು ಮತ್ತು 1 ಮೊಬೈಲ್ ಫೋನನ್ನು ಪೊಲೀಸರು ಜಪ್ತಿಗೊಳಿಸಿದ್ದಾರೆ. ಸ್ಥಳದಲ್ಲಿದ್ದ ಮತ್ತಿಬ್ಬರು ಡ್ರಗ್ ಪೆಡ್ಲರ್‌ಗಳಾದ ಶಮೀರ್ ಕಾಂಬ್ಳೆ ಮತ್ತು ಜಾವೀದ್ ಎಂಬವರು ಪರಾರಿಯಾಗಿದ್ದಾರೆ. ಮೊಹಮ್ಮದ್ ಕೈಫ್ ಎಂಬಾತನು ವಿಲಾಸಿ ಜೀವನ ನಡೆಸಲು ಉಪ್ಪಳದ ಶಮೀರ್ ಕಾಂಬ್ಳೆ ಮತ್ತು ಜಾವೀದ್ ಎಂಬವರೊAದಿಗೆ ಸೇರಿ ಕೆ.ಸಿ ರೋಡ್ ಫಲಾಹ್ ಶಾಲಾ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಪರಿಚಯಸ್ಥ ಗಿರಾಕಿಗಳಿಗೆ ಎಮ್‌ಡಿಎಮ್‌ಎ ಕ್ರಿಸ್ಟಲನ್ನು ಪೂರೈಸುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿದಾಗ ಶಮೀರ್ ಕಾಂಬ್ಳೆ ಮತ್ತು ಜಾವೀದ್ ಬೈಕಲ್ಲಿ ತಲೆಮರೆಸಿಕೊಂಡಿದ್ದಾರೆ. ಪೊಲೀಸರು ಶೇಖ್ ಮೊಹಮ್ಮದ್ ಕೈಫ್‌ನನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Leave a Reply

Your email address will not be published. Required fields are marked *

ಬೆಂಗಳೂರು: ಸೇಫ್ ಫುಟ್‌ಪಾತ್ ಅಭಿಯಾನ ಯಶಸ್ಸು; ಪೀಣ್ಯದಲ್ಲಿ ರಾತ್ರಿ ಟ್ರಾಫಿಕ್ ಡೈವರ್ಷನ್…!

18 ಸೈನಿಕರ ಸಾವಿನ ಬಳಿಕ ಇರಾನ್ ವಿರುದ್ಧ ಹೊಸ ಯುದ್ಧ ತಂತ್ರಕ್ಕೆ ಮೊರೆ ಹೋದ ಟ್ರಂಪ್ ಆಡಳಿತ

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಮಂಜುನಾಥ್ ಶೆಟ್ಟಿ ದಂಪತಿಗೆ ಸನ್ಮಾನ

ಉಡುಪಿ: ಕರಾವಳಿ ನಿವಾಸಿಗಳ ಸಂಕಷ್ಟಕ್ಕೆ ಸ್ಪಂದಿಸಿದ ಜಿಲ್ಲಾಡಳಿತ…!

ಬಂಟ್ವಾಳ: ಮಾಣಿ ಸಮೀಪ ಜೋಗಿಬೆಟ್ಟು ರಸ್ತೆ ಕೆರೆಯಂತಾದ ದೃಶ್ಯ….!

ವಾಷಿಂಗ್ಟನ್: ಉತ್ತರ ಅಮೆರಿಕಾ ಬಂಟರ ಸಂಘದ `ದಿಬ್ಬಣ’ ಮಹಾ ಅಧಿವೇಶನ..!

ಮಂಗಳೂರು: ಮಂಗಳೂರಿನಲ್ಲಿ ಎಐ ಸಿ.ಸಿ ಕ್ಯಾಮರಾಗಳ ಅಳವಡಿಕೆ….!

ಬಂಟ್ವಾಳ: ಮಳೆ ಅನಾಹುತ: ರಾಯಿಯ ಜೀವನ್ ಪಿಂಟೋ ಮೃತದೇಹ ಪ*ತ್ತೆ…..!

ಬಂಟ್ವಾಳದಲ್ಲಿ ಮಳೆ ಅವಾಂತರ; ಮರ ಬಿದ್ದು ಸ್ಥಳೀಯರ ಪರದಾಟ

error: Content is protected !!