ಜನ ಮನದ ನಾಡಿ ಮಿಡಿತ

Advertisement

ಮಗು ಸಹಿತ ಒಂದೇ ಕುಟುಂಬದ ಮೂವರು ಕಾಣೆ…!

 

ಬಂಟ್ವಾಳ : ಮಗು ಸಹಿತ ಒಂದೇ ಕುಟುಂಬದ ಮೂವರು ಕಾಣೆಯಾದ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಮೂಡುನಡುಗೋಡು ಗ್ರಾಮದಲ್ಲಿ ನಡೆದಿದೆ.

ಮೂಲತಃ ನಾವೂರ ಗ್ರಾಮದ ನಿವಾಸಿಗಳಾದ ಸದಾಶಿವ ಮತ್ತು ಅವರ ಪತ್ನಿ ಪ್ರತಿಭಾ ಹಾಗೂ ಇವರ ಮಗ 9 ವರ್ಷದ ರಿತ್ವಿಕ್ ಕಾಣೆಯಾಗಿರುವ ವ್ಯಕ್ತಿಗಳಾಗಿದ್ದಾರೆ. ಡಿ.17 ರಂದು ಮೂವರು ಕಾಣೆಯಾಗಿದ್ದು, ಡಿ.25 ರಂದು ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೂ ಈವರೆಗೆ ಕುಟುಂಬದ ಪತ್ತೆಯಾಗಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಸದಾಶಿವ ಮತ್ತು ಪ್ರತಿಭಾ ಅವರಿಗೆ ಒಂದು ಹೆಣ್ಣು ಮತ್ತು ಒಂದು ಗಂಡು ಮಗುವಿದ್ದು, ಇವರು ನಾಲ್ಕು ಮಂದಿ ಡಿ.16 ರಂದು ನಾವೂರ ಮನೆಯಿಂದ ಇವರು ಪ್ರತಿಭಾ ಅವರ ತಂಗಿಯ ಗಂಡನ ಮನೆಯಾದ ಮೂಡುನಡುಗೋಡು ಗ್ರಾಮದ ಶಾಂತಿಗುರಿಯಲ್ಲಿರುವ ಧರ್ಣಪ್ಪ ಪೂಜಾರಿ ಅವರ ಮನೆಗೆ ಬಂದಿದ್ರು, ಅ ದಿನ ಅಲ್ಲೇ ಉಳಿದುಕೊಂಡಿದ್ದ ಇವರು ಮುಂಜಾನೆ ವೇಳೆಗೆ ಮಗಳನ್ನು ತಂಗಿ ಮನೆಯಲ್ಲಿ ಬಿಟ್ಟು ಸದಾಶಿವ ಮತ್ತು ಪತ್ನಿ ಪ್ರತಿಭಾ ಹಾಗೂ ಮಗ ರಿತ್ವಿಕ್ ಮೂವರು ಕಾಣೆಯಾಗಿದ್ದಾರೆ. ಮಗಳನ್ನು ಬಿಟ್ಟು ಕಾಣೆಯಾದ ಈ ಕುಟುಂಬದ ಬಗ್ಗೆ ಸಾಕಷ್ಟು ಅನುಮಾನಗಳು ಮೂಡತೊಡಗಿದ್ದು, ಇವರ ಪತ್ತೆ ಮಾಡಿಕೊಡುವಂತೆ ಧರ್ಣಪ್ಪ ಪೂಜಾರಿ ಅವರು ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಂದೆ ತಾಯಿ ಮತ್ತು ತಮ್ಮನನ್ನು ಕಳೆದುಕೊಂಡು ಹೆಣ್ಮಗಳು ಕೊರಗುತ್ತಿರುವ ಬಗ್ಗೆ ಮನೆಯವರು ಚಿಂತಿತರಾಗಿದ್ದಾರೆ. ಕಾಣೆಯಾದ ಮೂವರು ತುಳು ಕನ್ನಡ ಭಾಷೆ ತಿಳಿದಿದ್ದು, ಇವರ ಗುರುತು ಪತ್ತೆಯಾದಲ್ಲಿ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಗೆ ಸಂಪರ್ಕ ಮಾಡುವಂತೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಸಬ್ ಇನ್ಸ್ ಪೆಕ್ಟರ್ ಮಂಜುನಾಥ್ ಅವರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

ಬಂಟ್ವಾಳ: ಬಸ್‌ನಿಂದ ಇಳಿದು ರಸ್ತೆ ಬದಿಗೆ ತೆರಳುತ್ತಿದ್ದ ಕೂಲಿ ಕಾರ್ಮಿಕನಿಗೆ ಕಾರು ಡಿಕ್ಕಿ; ಸ್ಥಳದಲ್ಲೇ ಸಾವು

ಉಡುಪಿ: ಕೊಲೆ ಯತ್ನ ಪ್ರಕರಣದ ಇಬ್ಬರು ಆರೋಪಿಗಳ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ…!

ಉಡುಪಿ: ಉಡುಪಿಯಲ್ಲಿ ನಿಲ್ಲಿಸಿದ್ದ ಶ್ರೀ ದುರ್ಗಾಂಬ ಬಸ್ ಕಳವು: ಮುದ್ದಾಡಿ ಹಾಡಿಯಲ್ಲಿ ಪತ್ತೆ…!

ಮಂಗಳೂರು: ವಿದ್ಯಾರ್ಥಿಗಳ ಕೊರತೆಯಿಂದ ಮಂಗಳೂರು ವಿವಿಯ 16 ಪಿಜಿ ಕೋರ್ಸ್‌ಗಳು ಸ್ಥಗಿತ.

ಮಂಗಳೂರು: ಮಂಗಳೂರು-ಉಡುಪಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಹೊಸ ಆಶಾಕಿರಣ

ಮಂಗಳೂರು: ನ್ಯಾಯಾಧೀಶರ ಕಾರಿಗೆ ಗೂಡ್ಸ್ ಆಟೋ ಡಿಕ್ಕಿ: ಗಾಯಗೊಂಡಿದ್ದ ಚಾಲಕ ಸಾವು

ಕಠ್ಮಂಡು: ನೇಪಾಳದಲ್ಲಿ ಭಾರೀ ಮಳೆ, ಪ್ರವಾಹ-ಭೂಕುಸಿತಕ್ಕೆ 27 ಮಂದಿ ಬಲಿ; ನಾಲ್ವರು ನಾಪತ್ತೆ…!

ಕಾರ್ಕಳ: ಸುವರ್ಣ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ಮುಳುಗಿ ಮೃತ್ಯು…!

ಬಂಟ್ವಾಳ: ಮಾಣಿ ಭಾಗದಲ್ಲಿ ಮಾರ್ಗಸೂಚಿ ಫಲಕಗಳ ಕೊರತೆ: ವಾಹನ ಸವಾರರಿಗೆ ಗೊಂದಲ, ಅಪಘಾತದ ಆತಂಕ

error: Content is protected !!