ಜನ ಮನದ ನಾಡಿ ಮಿಡಿತ

Advertisement

ಮಂಗಳೂರು: ಮಂಗಳೂರಿನ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ರೋಹನ್ ಕಾರ್ಪೊರೇಷನ್ ಸಂಸ್ಥೆಯ 32 ವರ್ಷಗಳ ಸಂಭ್ರಮ.

ಮಂಗಳೂರಿನ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ರೋಹನ್ ಕಾರ್ಪೊರೇಷನ್ 32 ವರ್ಷಗಳ ಸಂಭ್ರಮ ಆಚರಿಸುತ್ತಿದೆ.

1994ರಲ್ಲಿ ರೋಹನ್ ಮೊಂತೆರೊ ಅವರು ಸ್ಥಾಪಿಸಿದ ಈ ಸಂಸ್ಥೆ, ಇಂದು ಮಂಗಳೂರಿನ ಅತ್ಯಂತ ವಿಶ್ವಾಸಾರ್ಹ ಮತ್ತು ಗೌರವಾನ್ವಿತ ರಿಯಲ್ ಎಸ್ಟೇಟ್ ಕಂಪನಿಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಕಳೆದ ಮೂರು ದಶಕಗಳಲ್ಲಿ ರೋಹನ್ ಕಾರ್ಪೊರೇಷನ್ ಒಟ್ಟು 25 ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಪ್ರಸ್ತುತ 12 ಯೋಜನೆಗಳು ವಿವಿಧ ಹಂತಗಳಲ್ಲಿವೆ. ಅಲ್ಲದೆ, 16 ಹೊಸ ಯೋಜನೆಗಳು ಪ್ರಸ್ತುತ ನಿರ್ಮಾಣದ ಹಂತದಲ್ಲಿವೆ. ವಸತಿ ಹಾಗೂ ವಾಣಿಜ್ಯ ಕ್ಷೇತ್ರಗಳನ್ನು ಒಳಗೊಂಡ ಈ ಯೋಜನೆಗಳು ಮಂಗಳೂರಿನ ನಗರಾಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿವೆ. ಈ ಸಂದರ್ಭದಲ್ಲಿ ಮಾತನಾಡಿದ ವ್ಯವಸ್ಥಾಪಕ ನಿರ್ದೇಶಕ ರೋಹನ್ ಮೊಂತೆರೊ ರವರು, ಮಂಗಳೂರಿನ ಬೆಳವಣಿಗೆಯಲ್ಲಿ ಸಾಧ್ಯವಾದಷ್ಟು ಕೊಡುಗೆ ನೀಡಲು ನಮಗೆ ಅವಕಾಶ ದೊರೆತಿರುವುದು ಅಪಾರ ಹೆಮ್ಮೆಯ ವಿಷಯ.

ಈ 32 ವರ್ಷದ ಪಯಣ ಅತ್ಯಂತ ತೃಪ್ತಿದಾಯಕವಾಗಿದೆ. ವರ್ಷಗಳ ಕಾಲ ನಮ್ಮೊಂದಿಗೆ ನಿಂತು ಬೆಂಬಲಿಸಿದ ಗ್ರಾಹಕರು, ಪಾಲುದಾರರು ಮತ್ತು ಸಿಬ್ಬಂದಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು. ನಿರ್ದೇಶಕ ಡಿಯಾನ್ ಮೊಂತೆರೊ ಅವರು ಮಾತನಾಡಿ, 32 ವರ್ಷಗಳನ್ನು ಪೂರೈಸಿರುವುದು ಕೇವಲ ಒಂದು ಸಂಸ್ಥೆಯ ಸಾಧನೆಯಷ್ಟೇ ಅಲ್ಲ; ಇದು ನಮ್ಮ ಗ್ರಾಹಕರು, ಪಾಲುದಾರರು ಹಾಗೂ ಸಿಬ್ಬಂದಿಯ ಮೇಲಿಟ್ಟ ವಿಶ್ವಾಸದ ಪ್ರತಿಬಿಂಬವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೊಣೆಗಾರಿಕೆ, ಗುಣಮಟ್ಟ ಮತ್ತು ಮೌಲ್ಯಗಳೊಂದಿಗೆ ಕಾರ್ಯನಿರ್ವಹಿಸುವ ಸಂಕಲ್ಪ ನಮ್ಮದು ಎಂದರು.

Leave a Reply

Your email address will not be published. Required fields are marked *

ಬಂಟ್ವಾಳ: ಶಾಲಾ ಬಸ್ ನಿಯಮ ಪರಿಶೀಲನೆ ; ಶಾಲಾ ಬಸ್‌ಗಳನ್ನು ಪರಿಶೀಲಿಸಿದ ಟ್ರಾಫಿಕ್ ಪೋಲಿಸ್ ಎಸ್.ಐ.ಆದರ್ಶ್…!

ಬಂಟ್ವಾಳ: ಪಾಣೆಮಂಗಳೂರು ಫ್ಲೈಓವರ್ ಪಕ್ಕದ ಕಲ್ಲುರ್ಟಿ ಸನ್ನಿಧಿಯ ಬಳಿ ಕೃತಕ ನೆರೆ…..!

ಉಡುಪಿ: ಹೆಬ್ರಿಯಲ್ಲಿ ಅಂದರ್ ಬಾಹರ್ ಇಸ್ಪೀಟ್ ಜೂಜು ಅಡ್ಡೆಗೆ ಪೊಲೀಸರ ದಾಳಿ; 7 ಮಂದಿಯ ಬಂಧನ..!

ಬೆಳ್ತಂಗಡಿ: ಪಿಕಪ್ ವಾಹನ ಡಿಕ್ಕಿಯಾಗಿ ಸ್ಕೂಟರ್ ಸವಾರರಿಬ್ಬರು ಸಾ*ವು..!

ಉಡುಪಿ: ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಿ: ಮುಸ್ಲಿಂ ಬಾಂಧವ್ಯ ವೇದಿಕೆ ಆಗ್ರಹ

ಕುಂದಾಪುರ: ಕಂಟೇನರ್ ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಮೃತ್ಯು..!

ಬಂಟ್ವಾಳ: ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯ ಮನೆಯಲ್ಲಿ ನಡೆದ ಕಳವು ಪ್ರಕರಣದ ಆರೋಪಿಗಳು ಸರೆ..!

ಬೆಂಗಳೂರು: ಮುಖ್ಯಮಂತ್ರಿ ಡಿ. ಕೆ. ಶಿಯವರ ಅವರ ಮುಖ್ಯ ಸಲಹೆಗಾರರನ್ನಾಗಿ ಸುನಿಲ್ ಕಾನುಗೋಲು ನೇಮಕ…!

ಮಂಗಳೂರು: ಕಲ್ಲುಗುಡ್ಡೆ ನಿವಾಸಿ ಅರ್. ಪೈನ್ ಮೆಹತಾಬ್ (18) ನಾಪತ್ತೆ..!

error: Content is protected !!