ಜನ ಮನದ ನಾಡಿ ಮಿಡಿತ

Advertisement

ಉಡುಪಿ: ಬಾಲಕನ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್- ಇಬ್ಬರ ಬಂಧನ….!

ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಂಡೂರು ಪೇಟೆಯಲ್ಲಿ ಕಟಿಂಗ್ ಶಾಪ್‌ನಲ್ಲಿ ನಡೆದ ಘಟನೆಯನ್ನು ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿ ಪ್ರಚೋದನೆಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಶಶಾಂಕ ಭಂಡಾರಿ ಮತ್ತು ಪ್ರಮೋದ ಡಿಸೋಜ ಬಂಧಿತ ಆರೋಪಿಗಳು. ಬಿಹಾರ ಮೂಲದ ಕಾನೂನು ಸಂಘರ್ಷಕ್ಕೊಳಗಾದ ಬಾಲಕನು ಕಂಡೂರು ಪೇಟೆಯಲ್ಲಿರುವ ಕಟಿಂಗ್ ಶಾಪ್‌ನಲ್ಲಿ ಹೇಳಿದ ವಿಷಯವನ್ನು ಕೆಲವರು ವಿಡಿಯೋ ಮಾಡಿ, ಸಾರ್ವಜನಿಕರನ್ನು ಪ್ರಚೋದನೆಗೊಳಿಸಿ ಗಲಾಟೆ ಸೃಷ್ಟಿಸುವ ಉದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ ಎಂದು ಬಾಲಕನ ತಂದೆ ನೀಡಿದ ದೂರಿನಲ್ಲಿ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನೊಂದೆಡೆ, ಈ ವಿಚಾರಕ್ಕೆ ಸಂಬಂಧಿಸಿ ಕಟಿಂಗ್ ಶಾಪ್ ಎದುರು 20-30 ಜನರು ಗುಂಪುಗೂಡಿ ಬೆದರಿಕೆ ಹಾಕಿರುವ ಬಗ್ಗೆ ಶಾಪ್ ಮಾಲೀಕ ಶಶಾಂಕ ಭಂಡಾರಿ ನೀಡಿದ ದೂರಿನ ಮೇರೆಗೆ ಮತ್ತೊಂದು ಪ್ರಕರಣವೂ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ 20-30 ಜನರನ್ನು ಗುರುತಿಸಲಾಗಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Leave a Reply

Your email address will not be published. Required fields are marked *

ಮಂಗಳೂರು: ಮಂಗಳೂರಿನಲ್ಲಿ ಸಾರ್ವಜನಿಕ ಭೇಟಿ ನಡೆಸಿದ ಚೌಟ…!

ಬಂಟ್ವಾಳ: ಕಚೇರಿ ಪ್ರವೇಶ ದಾರಿಯಲ್ಲಿ ತ್ಯಾಜ್ಯ: ಅಧಿಕಾರಿಗಳ ಮೌನಕ್ಕೆ ಟೀಕೆ…!

ಬಂಟ್ವಾಳ: ಸಂಚರಿಸುತ್ತಿದ್ದ ಲಾರಿಯಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆ*ಂಕಿ…!

ಬಂಟ್ವಾಳ: ಹಗ್ಗ ಕಡಿದು ಬಾವಿಗೆ ಬಿದ್ದ ಇಬ್ಬರು ಕಾರ್ಮಿಕರು ಪಾರು….!

ಕಡೇಶಿವಾಲಯ: ನೆತ್ತರ ಬಾಬು ಪೂಜಾರಿಯವರ ಮನೆಗೆ ಸಿಡಿಲು ಬಡಿದು ಹಾನಿ….!

ಬಂಟ್ವಾಳ: ಸಿಡಿಲು ಬಡಿದ ಇಳಿಯೂರು ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ಭೇಟಿ ನೀಡಿದ ಬಿಜೆಪಿ ಮುಖಂಡ ಸಂದೇಶ್ ಶೆಟ್ಟಿ ಅರೆಬೆಟ್ಟು..!

ಬಂಟ್ವಾಳ: ಕರಾವಳಿಯ ಕಾರಣೀಕ ದೈವ ಕೊರಗಜ್ಜನಿಗೆ ಕೋಲ ಸೇವೆ ಸಲ್ಲಿಸಿದ ಖ್ಯಾತ ಚಲನಚಿತ್ರ ನಟಿಯಾಗಿರುವ ರಚಿತರಾಮ್..!

ಬಂಟ್ವಾಳ: ಬಂಟ್ವಾಳ ತಾಲೂಕಿನ ಮಹತೋಬಾರ ಶ್ರೀ ಕಾರಿಂಜೇಶ್ವರ ದೇವಸ್ಥಾನಕ್ಕೆ ಬಡಿದ ಸಿಡಿಲು..!

ಬಂಟ್ವಾಳ: ಬಂಟ್ವಾಳ ತಾಲೂಕಿನಲ್ಲಿ ಕೆಲ ಮನೆಗಳಿಗೆ ಸಿಡಿಲು ಬಡಿದು ಹಾನಿ..!

error: Content is protected !!