ಜನ ಮನದ ನಾಡಿ ಮಿಡಿತ

Advertisement

ಮಂಗಳೂರು: ಫಾರ್ಚೂನರ್ ಕಾರಿನಲ್ಲಿ ಹಿಂಸಾತ್ಮಕವಾಗಿ ದನಗಳ ಸಾಗಾಟ; ಇಬ್ಬರ ಬಂಧನ..!

ಫಾರ್ಚೂನರ್ ಕಾರಿನಲ್ಲಿ ನಾಲ್ಕು ದನಗಳನ್ನು ಕಾಲು ಕಟ್ಟಿ ಹಿಂಸಾತ್ಮಕವಾಗಿ ಸಾಗಾಟ ಮಾಡಿದ ಪ್ರಕರಣದಲ್ಲಿ ಇಬ್ಬರ ಬಂಧನವಾಗಿದೆ.

ಮಂಗಳೂರಿನ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಜಾನುವಾರು ಸಾಗಾಟ ಪ್ರಕರಣವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಒಟ್ಟು 8 ಲಕ್ಷ 42 ಸಾವಿರ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಡಗ ಎಡಪದವು ಗ್ರಾಮದ ಶಾಸ್ತಾವು ಪ್ರದೇಶದಲ್ಲಿ ಫಾರ್ಚೂನರ್ ಕಾರಿನಲ್ಲಿ ನಾಲ್ಕು ದನಗಳನ್ನು ಕಾಲು ಕಟ್ಟಿ ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಎ.ಸಿ.ಪಿ ಶ್ರೀಕಾಂತ್ ಮತ್ತು ಪಿ.ಐ ಬಾಲಕೃಷ್ಣ ಅವರ ಮಾರ್ಗದರ್ಶನದಲ್ಲಿ, ಪಿ.ಎಸ್.ಐ ಲತಾ ಮತ್ತು ತಂಡ ದಾಳಿ ನಡೆಸಿ ವಾಹನವನ್ನು ವಶಕ್ಕೆ ಪಡೆದಿದೆ. ಪೊಲೀಸರು ನಾಲ್ಕು ದನಗಳು, ಫಾರ್ಚೂನರ್ ಕಾರು, ಒಂದು ತಲವಾರ್ ಮತ್ತು ಕಬ್ಬಿಣದ ರಾಡ್ ವಶಪಡಿಸಿಕೊಂಡಿದ್ದಾರೆ. ಒಟ್ಟು 8.42 ಲಕ್ಷ ಮೌಲ್ಯದ ಸೊತ್ತುಗಳನ್ನು ಜಪ್ತಿ ಮಾಡಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಸಾರ್ ಮತ್ತು ಮೊಹಮ್ಮದ್ ಜಮಾಲುದ್ದೀನ್ ಎಂಬ ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಇನ್ನೂ ಕೆಲವು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ. ಅಕ್ರಮ ಜಾನುವಾರು ಸಾಗಾಟ ಕುರಿತು ಮಾಹಿತಿ ಇದ್ದರೆ ತಕ್ಷಣ ಪೊಲೀಸರಿಗೆ ತಿಳಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

ಉಡುಪಿ: ಕೊಲೆ ಯತ್ನ ಪ್ರಕರಣದ ಇಬ್ಬರು ಆರೋಪಿಗಳ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ…!

ಉಡುಪಿ: ಉಡುಪಿಯಲ್ಲಿ ನಿಲ್ಲಿಸಿದ್ದ ಶ್ರೀ ದುರ್ಗಾಂಬ ಬಸ್ ಕಳವು: ಮುದ್ದಾಡಿ ಹಾಡಿಯಲ್ಲಿ ಪತ್ತೆ…!

ಮಂಗಳೂರು: ವಿದ್ಯಾರ್ಥಿಗಳ ಕೊರತೆಯಿಂದ ಮಂಗಳೂರು ವಿವಿಯ 16 ಪಿಜಿ ಕೋರ್ಸ್‌ಗಳು ಸ್ಥಗಿತ.

ಮಂಗಳೂರು: ಮಂಗಳೂರು-ಉಡುಪಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಹೊಸ ಆಶಾಕಿರಣ

ಮಂಗಳೂರು: ನ್ಯಾಯಾಧೀಶರ ಕಾರಿಗೆ ಗೂಡ್ಸ್ ಆಟೋ ಡಿಕ್ಕಿ: ಗಾಯಗೊಂಡಿದ್ದ ಚಾಲಕ ಸಾವು

ಕಠ್ಮಂಡು: ನೇಪಾಳದಲ್ಲಿ ಭಾರೀ ಮಳೆ, ಪ್ರವಾಹ-ಭೂಕುಸಿತಕ್ಕೆ 27 ಮಂದಿ ಬಲಿ; ನಾಲ್ವರು ನಾಪತ್ತೆ…!

ಕಾರ್ಕಳ: ಸುವರ್ಣ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ಮುಳುಗಿ ಮೃತ್ಯು…!

ಬಂಟ್ವಾಳ: ಮಾಣಿ ಭಾಗದಲ್ಲಿ ಮಾರ್ಗಸೂಚಿ ಫಲಕಗಳ ಕೊರತೆ: ವಾಹನ ಸವಾರರಿಗೆ ಗೊಂದಲ, ಅಪಘಾತದ ಆತಂಕ

ಬಂಟ್ವಾಳ: ಕಲ್ಲಡ್ಕ ಫ್ಲೈಓವರ್‌ನಲ್ಲಿ ದನ ಸಾಗಿಸುತ್ತಿದ್ದ ಲಾರಿ ತಡೆ: ಪೊಲೀಸರಿಂದ ವಾಹನ ವಶಕ್ಕೆ

error: Content is protected !!