ಜನ ಮನದ ನಾಡಿ ಮಿಡಿತ

Advertisement

ಮಂಗಳೂರು: ಸಂಕೀರ್ಣ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಗೆ ಹೊಸ ಜೀವನ ನೀಡಿದ ಫಾದರ್ ಮುಲ್ಲರ್ ವೈದ್ಯರ ತಂಡ…!

ಸಂಕೀರ್ಣ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಗೆ ಹೊಸ ಜೀವನ ನೀಡಿದ ಫಾದರ್ ಮುಲ್ಲರ್ ವೈದ್ಯರ ತಂಡ

ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯ ಹೃದಯ ರೋಗ ಚಿಕಿತ್ಸಾ ವಿಭಾಗದ ಡಾ. ಎಚ್. ಪ್ರಭಾಕರ್ ನೇತೃತ್ವದ ತಜ್ಞ್ ವೈದ್ಯರ ತಂಡ ಮಿಡಿತ ಇಲ್ಲದ ಖಾಯಿಲೆ ಎಂದು ಕರೆಯಲ್ಪಡುವ ಅಪರೂಪದ ಖಾಯಿಲೆ ಬಾಧಿತ ಮಹಿಳೆಗೆ ತುರ್ತು ಚಿಕಿತ್ಸೆ ನಡೆಸಿ ಜೀವ ಉಳಿಸಿದೆ. ಸಾಮಾನ್ಯವಾಗಿ ನಲವತ್ತರ ಆಸುಪಾಸಿನ ಮಹಿಳೆಯರಲ್ಲಿ ಕಂಡು ಬರುವ ಟಕಾಯಸು ಖಾಯಿಲೆ ಹೃದಯದ ಸ್ನಾಯುಗಳಿಗೆ ರಕ್ತ ಪೂರೈಕೆಯನ್ನು ತಡೆಯುತ್ತದೆ. ಇದರಿಂದ ರೋಗಿಗಳಲ್ಲಿ ಉಸಿರಾಟದ ಸಮಸ್ಯೆ ಉಂಟಾಗುತ್ತದೆ.

ಫಾದರ್ ಮುಲ್ಲರ್ ವೈದ್ಯರ ತಂಡ ಆಧುನಿಕ ತಂತ್ರಜ್ಞಾನ ಬಳಸಿ ಕನಿಷ್ಠ ಗಾಯಗಳೊಂದಿಗೆ ರಕ್ತ ನಾಳಗಳನ್ನು ತೆರೆದು ಹೃದಯಕ್ಕೆ ರಕ್ತ ಪೂರೈಕೆಯನ್ನು ಸುಗಮಗೊಳಿಸುವ ಮೂಲಕ ಕಾಸರಗೋಡು ಜಿಲ್ಲೆಯ ೪೬ರ ಹರೆಯದ ಮಹಿಳೆಯ ಜೀವ ಉಳಿಸಿದೆ. ಇದು ಅತ್ಯಂತ ಅಪರೂಪದ ಮತ್ತು ವಿಶಿಷ್ಟವಾದ ಕೊರೋನರಿ ಆಂಜಿಯೋಪ್ಲ್ಯಾಸ್ಟಿ ಚಿಕಿತ್ಸೆಯಾಗಿದ್ದು, ವೈದ್ಯರ ತಂಡ ತ್ರುರ್ತಾಗಿ ಕೈಗೊಂಡಿದೆ.

ಈ ರೋಗ ಬಾಧಿತರಲ್ಲಿ ಉಸಿರಾಟದ ಸಮಸ್ಯೆಯ ಜೊತೆ ಆಯಾಸ, ಚಲನೆಗೆ ಸಂಬಂಧಿಸಿದ ಸಮಸ್ಯೆಗಳು ಕಂಡು ಬರುತ್ತವೆ. ಫಾದರ್ ಮುಲ್ಲರ್ ಆಸ್ಪತ್ರೆಗೆ ಬಂದ ರೋಗಿಯಲ್ಲಿ ಅಪರೂಪದ ಖಾಯಿಲೆಗಳ ಲಕ್ಷಣಗಳನ್ನು ವಿವರವಾದ ಕ್ಲಿನಿಕಲ್ ಪರೀಕ್ಷೆಯಲ್ಲಿ ಗಮನಿಸಿದ ಡಾ. ಪ್ರಭಾಕರ್ ಅವರು ಹೃದಯದ ಸ್ನಾಯುಗಳಿಗೆ ರಕ್ತ ಪೂರೈಕೆಯಾಗುವ ಎರಡೂ ಅಪಧಮನಿಗಳಲ್ಲಿ ಅಡೆತಡೆಗಳು ಇರುವುದನ್ನು ಪತ್ತೆ ಹಚ್ಚಿದರು. ಚಿಕಿತ್ಸೆಗಾಗಿ ಅಂತರಶಿಸ್ತೀಯ ತಜ್ಞ್ ವೈದ್ಯರ ತಂಡವನ್ನು ರೂಪಿಸಿ ಚಿಕಿತ್ಸೆ ನೀಡಿದರು. ಡಾ. ಅಶೋಕ, ಡಾ. ಪ್ರದೀಪ ಪಿರೇರಾ, ಡಾ. ಜೋಸ್ಟಲ್ ಪಿಂಟೋ ಅವರನ್ನು ಒಳಗೊಂಡ ನುರಿತ ವೈದ್ಯರ ತಂಡ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಕೈಗೊಂಡು ರೋಗಿಯ ಜೀವ ರಕ್ಷಣೆ ಮಾಡಿದೆ.

ಇಮೇಜಿಂಗ್ ತಂತ್ರಜ್ಞಾನ ಮತ್ತು ವಿಶೇಷ ಬಲೂನ್ ತಂತ್ರಜ್ಞಾನ ಬಳಸಿ ಕೊರೊನರಿ ಆಂಜಿಯೋಪ್ಲಾಸ್ಟಿ ನಡೆಸಲಾಗಿದೆ ಎರಡು ಹಂತಗಳಲ್ಲಿ ಚಿಕಿತ್ಸೆ ನೀಡಲಾಗಿದ್ದು, ರೋಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಆರೋಗ್ಯದ ಜೀವನ ನಡೆಸುತ್ತಿದ್ದಾರೆ ಎಂದು ಆಸ್ಪತ್ರೆ ಪ್ರಕಟಣೆ ಹೇಳಿದೆ. ವೈದ್ಯರ ತಂಡದ ಪರಿಶ್ರಮ ಯಶಸ್ವಿಯಾಗಿರುವುದಕ್ಕೆ ಫಾದರ್ ಮುಲ್ಲರ್ ಸಂಸ್ಥೆಗಳ ನಿರ್ದೇಶಕ ರೆವೆರೆಂಡ್ ಫಾದರ್ ಫೌಸಿನ್ ಲೂಕಸ್ ಲೋಬೋ ವೈದ್ಯರನ್ನು ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *

ಉಡುಪಿ: ಕೊಲೆ ಯತ್ನ ಪ್ರಕರಣದ ಇಬ್ಬರು ಆರೋಪಿಗಳ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ…!

ಉಡುಪಿ: ಉಡುಪಿಯಲ್ಲಿ ನಿಲ್ಲಿಸಿದ್ದ ಶ್ರೀ ದುರ್ಗಾಂಬ ಬಸ್ ಕಳವು: ಮುದ್ದಾಡಿ ಹಾಡಿಯಲ್ಲಿ ಪತ್ತೆ…!

ಮಂಗಳೂರು: ವಿದ್ಯಾರ್ಥಿಗಳ ಕೊರತೆಯಿಂದ ಮಂಗಳೂರು ವಿವಿಯ 16 ಪಿಜಿ ಕೋರ್ಸ್‌ಗಳು ಸ್ಥಗಿತ.

ಮಂಗಳೂರು: ಮಂಗಳೂರು-ಉಡುಪಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಹೊಸ ಆಶಾಕಿರಣ

ಮಂಗಳೂರು: ನ್ಯಾಯಾಧೀಶರ ಕಾರಿಗೆ ಗೂಡ್ಸ್ ಆಟೋ ಡಿಕ್ಕಿ: ಗಾಯಗೊಂಡಿದ್ದ ಚಾಲಕ ಸಾವು

ಕಠ್ಮಂಡು: ನೇಪಾಳದಲ್ಲಿ ಭಾರೀ ಮಳೆ, ಪ್ರವಾಹ-ಭೂಕುಸಿತಕ್ಕೆ 27 ಮಂದಿ ಬಲಿ; ನಾಲ್ವರು ನಾಪತ್ತೆ…!

ಕಾರ್ಕಳ: ಸುವರ್ಣ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ಮುಳುಗಿ ಮೃತ್ಯು…!

ಬಂಟ್ವಾಳ: ಮಾಣಿ ಭಾಗದಲ್ಲಿ ಮಾರ್ಗಸೂಚಿ ಫಲಕಗಳ ಕೊರತೆ: ವಾಹನ ಸವಾರರಿಗೆ ಗೊಂದಲ, ಅಪಘಾತದ ಆತಂಕ

ಬಂಟ್ವಾಳ: ಕಲ್ಲಡ್ಕ ಫ್ಲೈಓವರ್‌ನಲ್ಲಿ ದನ ಸಾಗಿಸುತ್ತಿದ್ದ ಲಾರಿ ತಡೆ: ಪೊಲೀಸರಿಂದ ವಾಹನ ವಶಕ್ಕೆ

error: Content is protected !!