ಜನ ಮನದ ನಾಡಿ ಮಿಡಿತ

Advertisement

ಮೂಡುಬಿದಿರೆ: ಜುಮಾದಿ ದೈವಸ್ಥಾನದ ಬಳಿ ಕ್ಷಣ ಕಾಲ ನಿಂತು ನದಿಗೆ ಹಾರಿದ ಕಂಬಳ ಕೋಣ ‘ದೂಜ’ ಇನ್ನಿಲ್ಲ..!

ತಿರುವೈಲು ಗುತ್ತುವಿನ ‘ದೂಜ’ ಹೆಸರಿನ ಕಂಬಳ ಕೋಣ ಶಾಂಭವಿ ನದಿಗೆ ಹಾರಿ ಪ್ರಾಣ ಕಳೆದುಕೊಂಡ ಘಟನೆ ನಡೆದಿದೆ.

ಹಲವಾರು ಬಹುಮಾನಗಳನ್ನು ಗೆದ್ದಿದ್ದ ಈ ಕೋಣದ ಅಕಾಲಿಕ ಸಾವು ಸ್ಥಳೀಯರಲ್ಲಿ ಆಘಾತ ಉಂಟುಮಾಡಿದೆ. ಬಳ್ಕುಂಜೆ ಕಂಬಳದ ರೂವಾರಿ ಮಲ್ಲಿಕಾ ಯಶವಂತ ಶೆಟ್ಟಿ ಆಯೋಜಿಸಿದ್ದ ಕುದಿ ಕಂಬಳದ ವೇಳೆ ಈ ದುರಂತ ಸಂಭವಿಸಿದೆ. ಓಟದ ಮಧ್ಯೆ ನಿಯಂತ್ರಣ ತಪ್ಪಿದ ಕೋಣಗಳು ತೋಟದ ನಡುವೆ ಏರ್ರಾಬಿರ್ರಿಯಾಗಿ ಓಡಿ, ಜುಮಾದಿ ದೈವಸ್ಥಾನದ ಬಳಿ ಕ್ಷಣಕಾಲ ನಿಂತು ಬಳಿಕ ಶಾಂಭವಿ ನದಿಗೆ ಹಾರಿದವು. ಈ ವೇಳೆ ‘ದೂಜ’ ಪ್ರಾಣ ಕಳೆದುಕೊಂಡರೆ, ಜೊತೆಯಲ್ಲಿದ್ದ ಇನ್ನೊಂದು ಕೋಣ ಪಾರಾಗಿದೆ. ಈ ಘಟನೆಗೆ ಸಂಬಂಧಿಸಿ ಸ್ಥಳೀಯರಲ್ಲಿ ವಿಭಿನ್ನ ಅಭಿಪ್ರಾಯಗಳು ಕೇಳಿಬರುತ್ತಿವೆ. ಪ್ರಕರಣಕ್ಕೆ ಸಂಬಂಧಿಸಿ ದೈವದ ಮುನಿಸು ಕುರಿತ ಮಾತುಗಳು ಕೂಡ ಹರಿದಾಡುತ್ತಿವೆ. ಕಂಬಳ ಪ್ರೇಮಿಗಳು ‘ದೂಜ’ನನ್ನು ಕಳೆದುಕೊಂಡ ನೋವಿನಲ್ಲಿ ಮುಳುಗಿದ್ದಾರೆ.

Leave a Reply

Your email address will not be published. Required fields are marked *

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿ ಗುಡುಗು ಸಹಿತ ಭಾರೀ ಮಳೆ…!

ಮಂಗಳೂರು: ಸಂಕೀರ್ಣ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಗೆ ಹೊಸ ಜೀವನ ನೀಡಿದ ಫಾದರ್ ಮುಲ್ಲರ್ ವೈದ್ಯರ ತಂಡ…!

ಬಂಟ್ವಾಳ: ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ..!

ಮಂಗಳೂರು: ಖಾಸಗಿ ಬಸ್- ಆಟೋ ನಡುವೆ ಮುಖಾಮುಖಿ ಡಿಕ್ಕಿ; ಮೂವರಿಗೆ ಗಾಯ..!

ಚಿಕ್ಕಬಳ್ಳಾಪುರ: ಹಣ ಮತ್ತು ಚಿನ್ನಾಭರಣಕ್ಕಾಗಿ ಚಿಕ್ಕಮ್ಮನ ಕೊಲೆ…!

ವಿಶಾಖಪಟ್ಟಣ: ಪಾರ್ಟಿಗೆ ತೆರಳಿದ್ದ ಯುವತಿ ಲಾಡ್ಜ್ ನಲ್ಲಿ ಶ*ವವಾಗಿ ಪತ್ತೆ..!

ಮಂಗಳೂರು: ಎ.20ರಂದು ಐಸಿಡಿಎಸ್ 50ರ ಸುವರ್ಣ ಸಂಭ್ರಮ ಮತ್ತು ಜಿಲ್ಲಾ ಸಮಾವೇಶ….!

ಮಂಗಳೂರು: ಶಕ್ತಿನಗರದ ಹೇಮಂತ್ ಚಮಗಾರರಿಗೆ ಸೇರಿದ ಮನೆಯಲ್ಲಿ ಬೆಂಕಿ ಅವಘಡ..!

ಬಂಟ್ವಾಳ: ಕೆಎಸ್.ಆರ್.ಟಿ.ಸಿ. ಬಸ್ ,ಬೈಕ್ ಮತ್ತು ಗೂಡ್ಸ್ ರಿಕ್ಷಾಗಳ ನಡುವೆ ಸರಣಿ ಅಪ*ಘಾತ….!

error: Content is protected !!