ಜನ ಮನದ ನಾಡಿ ಮಿಡಿತ

Advertisement

ಬಿಸಿರೋಡ್ : ಗ್ಯಾಸ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ…!

 

ಗ್ಯಾಸ್ ಸಿಲಿಂಡರ್‌ಗಳ ನಿರಂತರ ಬೆಲೆ ಏರಿಕೆ ಹಾಗೂ ವಿತರಣೆಯಲ್ಲಿ ಉಂಟಾಗುತ್ತಿರುವ ವಿಳಂಬ ನೀತಿಯನ್ನು ಖಂಡಿಸಿ, ವಿಮೆನ್ ಇಂಡಿಯಾ ಮೂವ್‌ಮೆಂಟ್ ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿಯು ಬಿಸಿರೋಡ್ ಫ್ಲೈಓವರ್ ಕೆಳಭಾಗದಲ್ಲಿ ಪ್ರತಿಭಟನೆ ಹಮ್ಮಿಕೊಂಡಿತ್ತು.

 

ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಯ ವಿರುದ್ಧ ಘೋಷಣೆಗಳನ್ನು ಕೂಗಿ, ಗೃಹಬಳಕೆಯ ಗ್ಯಾಸ್ ದರವನ್ನು ಕಡಿಮೆಗೊಳಿಸುವಂತೆ ಹಾಗೂ ಗ್ರಾಹಕರಿಗೆ ಸಮಯಕ್ಕೆ ಸರಿಯಾಗಿ ಸಿಲಿಂಡರ್ ವಿತರಣೆ ಮಾಡುವಂತೆ ಆಗ್ರಹಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ವಿಮೆನ್ ಇಂಡಿಯಾ ಮೂವ್ಮೆಂಟ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಾಹಿದಾ ತಸ್ನೀಂ ಮಾತನಾಡಿ ,
ಕೇಂದ್ರ ಬಿಜೆಪಿ ಸರ್ಕಾರವು ಮಹಿಳೆಯರ ,ಬಡವರ ಶೋಷಣೆಯೇ ದೇಶದ ಅಭಿವೃದ್ದಿ ಎಂದು ಪರಿಗಣಿಸಿದೆ. ನಿರಂತರವಾದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ತತ್ತರಿಸಿ ಹೋಗಿದ್ದಾರೆ. ಜನವಿರೋಧಿ ಆಡಳಿತ ನಡೆಸುತ್ತಿರುವ ಮೋದಿ ಸರ್ಕಾರಕ್ಕೆ ಅಧಿಕಾರದಲ್ಲಿರಲು ಯಾವ ಅರ್ಹತೆಯೂ ಇಲ್ಲ
ಎಂದು ಆಕ್ರೋಶ ವ್ಯಕ್ತಪಡಿಸಿದರು.

ಝೀನತ್ ಗೂಡಿನಬಳಿ ಮಾತನಾಡಿ , ವಿಶ್ವ ಗುರುವಿನ ಟೈಟಲ್ ನಲ್ಲಿ ಮೋದಿ ಸರ್ಕಾರವು ಕಾರ್ಪೋರೇಟ್ ಕುಲಗಳನ್ನು ಅಭಿವೃದ್ದಿಗೊಳಿಸಿ ಬಡವರನ್ನು ಮತ್ತಷ್ಟು ಬಡತನಕ್ಕೆ ತಳ್ಳುವ ವಂಚನೆಯ ಆಡಳಿತ ನಡೆಸುತ್ತಿದೆ ಎಂದು ಆರೋಪಿಸಿದರು .

ಮಹಿಳೆಯರು ಬ್ಯಾನರ್ ಹಾಗೂ ಫಲಕಗಳನ್ನು ಪ್ರದರ್ಶಿಸಿ, ಗ್ಯಾಸ್ ಬೆಲೆ ಏರಿಕೆಯಿಂದ ಸಾಮಾನ್ಯ ಜನರ ಬದುಕಿನ ಮೇಲೆ ಭಾರೀ ಹೊರೆ ಬೀಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ ಬೆಲೆ ನಿಯಂತ್ರಣ ಮತ್ತು ಸುಗಮ ವಿತರಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

Leave a Reply

Your email address will not be published. Required fields are marked *

ಆಂಧ್ರಪದೇಶದಲ್ಲಿ ಫ್ಲೋರ್ ಮಾಸ್ಟರ್ಸ್ ಮೊದಲ ಫ್ಲಾಟ್ ಬ್ರೆಡ್ ಸ್ಥಾವರ; ರೂ. 100 ಕೋಟಿ ಹೂಡಿಕೆ, ರಫ್ತು ಆಧಾರಿತ ಉದ್ಯಮ..!

ಮುಲ್ಕಿ: ಮುಲ್ಕಿ ಬಸ್ ನಿಲ್ದಾಣದ ಬಳಿ ಬಸ್-ಕಾರು ಡಿಕ್ಕಿ; ಮಕ್ಕಳಿದ್ದ ಕಾರು ಅಪಾಯದಿಂದ ಪಾರು

ನ್ಯೂಯಾರ್ಕ್: ಅಮೆರಿಕ-ಇರಾನ್ ಮಿಲಿಟರಿ ವಿರಾಮದ ಪರಿಣಾಮ; ಕಚ್ಚಾ ತೈಲ ಬೆಲೆ ಇಳಿಕೆ, ಹಣದುಬ್ಬರಕ್ಕೂ ಬ್ರೇಕ್?

ನವದೆಹಲಿ: ಜಿರಳೆ ಹೋರಾಟಕ್ಕೆ ಕೊನೆಗೂ ಮಣಿದ ಕೇಂದ್ರ ಸರಕಾರ; ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜಿನಾಮೆ…!

ಮಂಗಳೂರು: ರೌಡಿಶೀಟರ್ ಮೇಲೆ ಮಾರಕಾಸ್ತ್ರದಿಂದ ಭೀಕರ ದಾಳಿ…!

ಬಂಟ್ವಾಳ: ಲಾವಣ್ಯ ಹತ್ಯೆ ಪ್ರಕರಣದ ಆರೋಪಿ ಚೇತನ್ ಆರೋಗ್ಯದಲ್ಲಿ ಸುಧಾರಣೆ..!

ಬಂಟ್ವಾಳ: ತ್ಯಾಜ್ಯ ನಿರ್ವಹಣೆ ಸಂಪೂರ್ಣ ಹದಗೆಟ್ಟು ಸಾರ್ವಜನಿಕರಲ್ಲಿ ಆತಂಕ..!

ಮಂಗಳೂರು: ಮಂತ್ರಾಲಯದ ಬಳಿ ಭೀಕರ ಅಪಘಾತ; ಯಕ್ಷಧ್ರುವ ಪಟ್ಲ ಫೌಂಡೇಷನ್ ಕಾರ್ಯದರ್ಶಿ ರವಿ ಶೆಟ್ಟಿ ನಿಧನ…!

ಬಂಟ್ವಾಳ: ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದಲ್ಲಿ ಅಗ್ನಿ ಅವಘಡ…..!

error: Content is protected !!