ಜನ ಮನದ ನಾಡಿ ಮಿಡಿತ

Advertisement

ಬಂಟ್ವಾಳ: ಬೈಕ್‌ಗೆ ಹಿಂಬದಿಯಿಂದ ಕಾರು ಡಿಕ್ಕಿ; ಗಂಭೀರ ಗಾಯಗೊಂಡಿದ್ದ ಸಹಸವಾರ ಸಾವು

ಮೋಟಾರ್‌ಸೈಕಲ್‌ಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಸಹಸವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಅಕ್ಟೋಬರ್ 30ರಂದು ರಾತ್ರಿ ಬಂಟ್ವಾಳದ ಚೆಂಡ್ತಿಮಾರ್ ಸಮೀಪದ ಮಣ್ಣಾಪು ಎಂಬಲ್ಲಿ ನಡೆದಿದೆ.

ಮೃತರನ್ನು ಗೋಪಾಲ ಎಂದು ಗುರುತಿಸಲಾಗಿದೆ. ಮಂಗಳೂರಿನ ಗಂಜಿಮಠದಲ್ಲಿ ಕೆಲಸ ಮುಗಿಸಿ ಝಕಾರಿಯಾ ಅವರು ಗೋಪಾಲ ಅವರನ್ನು ಸಹಸವಾರರನ್ನಾಗಿ ಕೂರಿಸಿಕೊಂಡು ಮೋಟಾರ್‌ಸೈಕಲ್‌ನಲ್ಲಿ ಬಿ.ಸಿ.ರೋಡು ಮಾರ್ಗವಾಗಿ ಬೆಳ್ತಂಗಡಿ ರಸ್ತೆಯಲ್ಲಿರುವ ಕನಪಾದೆ ಮನೆ ಕಡೆಗೆ ತೆರಳುತ್ತಿದ್ದರು.

ರಾತ್ರಿ ಸುಮಾರು 7 ಗಂಟೆಗೆ ಚೆಂಡ್ತಿಮಾರ್‌ನ ಮಣ್ಣಾಪು ತಲುಪಿದಾಗ ಹಿಂದಿನಿಂದ ಬಂದ ಕಾರೊಂದು ಬೈಕ್‌ನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್‌ನಲ್ಲಿದ್ದ ಇಬ್ಬರೂ ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡಿದ್ದರು.

ಗೋಪಾಲ ಅವರ ತಲೆ, ಎದೆ, ಕೈ, ಕಾಲು ಹಾಗೂ ಮೂಗಿಗೆ ಗಂಭೀರ ಗಾಯಗಳಾಗಿದ್ದರೆ, ಝಕಾರಿಯಾ ಅವರ ಮುಖ ಮತ್ತು ಬೆನ್ನಿಗೆ ಗಾಯಗಳಾಗಿದ್ದವು. ತಕ್ಷಣ ಸ್ಥಳೀಯರಾದ ಕಿರಣ್ ಮತ್ತು ಸಂದೀಪ್ ಅವರು ಗಾಯಾಳುಗಳನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದರು. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಗೋಪಾಲ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

Leave a Reply

Your email address will not be published. Required fields are marked *

ಉಡುಪಿ: ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯಿಂದ ಡಾ. ಚಂದ್ರಶೇಖರ್ ಹೆಸರು ಕೈಬಿಟ್ಟಿರುವುದು ಖಂಡನೀಯ: ಸುನಿಲ್ ಕುಮಾರ್

ದಕ್ಷಿಣ ಕನ್ನಡ: ಮಿಜಾರ್‌ನಲ್ಲಿ ಅಭಿಮಾನಿ ಬಸ್–ಸ್ಕೂಟರ್ ನಡುವೆ ಭೀಕರ ಅಪಘಾತ; ಸವಾರ ಗಂಭೀರ

ಬಂಟ್ವಾಳ: ಬಂಟ್ವಾಳ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟಕ್ಕೆ ಚಾಲನೆ

ಮಂಗಳೂರು: ಮಂಗಳೂರಿನ ಕೊಟ್ಟಾರ ಇನ್ಫೋಸಿಸ್ ಕ್ಯಾಂಪಸ್ ಮಾರಾಟ: ಮುಕುಂದ್ ಎಂ.ಜಿ.ಎಂ. ರಿಯಾಲಿಟಿ ಖರೀದಿ

ಮಂಗಳೂರು: ಮಂಗಳೂರಿನಲ್ಲಿ ಪುಣೆ ಗ್ಯಾಸ್‌ನ 10ನೇ ಎಕ್ಸ್‌ಪೀರಿಯನ್ಸ್ ಸೆಂಟರ್ ಆರಂಭ…!

ಮಂಗಳೂರು: ರಾಜ್ಯೋತ್ಸವ ಪ್ರಶಸ್ತಿ: ದಕ್ಷಿಣ ಕನ್ನಡದ ಮೂವರು ಸಾಧಕರಿಗೆ ಗೌರವ

ಉತ್ತರ ಕನ್ನಡ: ಕಾರವಾರದ ಮುದಗಾ ಬಂದರಿನಲ್ಲಿ ಮೀನಿನ ವಿಷಾನಿಲಕ್ಕೆ ಇಬ್ಬರು ಮೀನುಗಾರರು ಬಲಿ…!

ಉಡುಪಿ: ಸುಪ್ರೀಂ ಕೋರ್ಟ್‌ಗೆ ಮುತ್ತಿಗೆ ಹಾಕುವ ಪ್ರಯತ್ನಕ್ಕೆ ರಾಹುಲ್ ಗಾಂಧಿ ಪ್ರಚೋದನೆ: ಕೆ.ಎಸ್. ನವೀನ್ ಆರೋಪ

ಉಡುಪಿ: ನ.15ರೊಳಗೆ ಉಡುಪಿ ಜಿಲ್ಲಾಸ್ಪತ್ರೆಗೆ ಆರೋಗ್ಯ ಸಚಿವರು ಭೇಟಿ ನೀಡಿ ಪರಿಶೀಲಿಸಲಿ: ಯಶ್ಪಾಲ್ ಸುವರ್ಣ ಆಗ್ರಹ

error: Content is protected !!