ಮೋಟಾರ್ಸೈಕಲ್ಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಸಹಸವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಅಕ್ಟೋಬರ್ 30ರಂದು ರಾತ್ರಿ ಬಂಟ್ವಾಳದ ಚೆಂಡ್ತಿಮಾರ್ ಸಮೀಪದ ಮಣ್ಣಾಪು ಎಂಬಲ್ಲಿ ನಡೆದಿದೆ.

ಮೃತರನ್ನು ಗೋಪಾಲ ಎಂದು ಗುರುತಿಸಲಾಗಿದೆ. ಮಂಗಳೂರಿನ ಗಂಜಿಮಠದಲ್ಲಿ ಕೆಲಸ ಮುಗಿಸಿ ಝಕಾರಿಯಾ ಅವರು ಗೋಪಾಲ ಅವರನ್ನು ಸಹಸವಾರರನ್ನಾಗಿ ಕೂರಿಸಿಕೊಂಡು ಮೋಟಾರ್ಸೈಕಲ್ನಲ್ಲಿ ಬಿ.ಸಿ.ರೋಡು ಮಾರ್ಗವಾಗಿ ಬೆಳ್ತಂಗಡಿ ರಸ್ತೆಯಲ್ಲಿರುವ ಕನಪಾದೆ ಮನೆ ಕಡೆಗೆ ತೆರಳುತ್ತಿದ್ದರು.

ರಾತ್ರಿ ಸುಮಾರು 7 ಗಂಟೆಗೆ ಚೆಂಡ್ತಿಮಾರ್ನ ಮಣ್ಣಾಪು ತಲುಪಿದಾಗ ಹಿಂದಿನಿಂದ ಬಂದ ಕಾರೊಂದು ಬೈಕ್ನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ನಲ್ಲಿದ್ದ ಇಬ್ಬರೂ ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡಿದ್ದರು.
ಗೋಪಾಲ ಅವರ ತಲೆ, ಎದೆ, ಕೈ, ಕಾಲು ಹಾಗೂ ಮೂಗಿಗೆ ಗಂಭೀರ ಗಾಯಗಳಾಗಿದ್ದರೆ, ಝಕಾರಿಯಾ ಅವರ ಮುಖ ಮತ್ತು ಬೆನ್ನಿಗೆ ಗಾಯಗಳಾಗಿದ್ದವು. ತಕ್ಷಣ ಸ್ಥಳೀಯರಾದ ಕಿರಣ್ ಮತ್ತು ಸಂದೀಪ್ ಅವರು ಗಾಯಾಳುಗಳನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದರು. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಗೋಪಾಲ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.



