ಜನ ಮನದ ನಾಡಿ ಮಿಡಿತ

Advertisement

ಮಂಗಳೂರು: ಸಾಮಾಜಿಕ ಸೇವೆ ಗುರುತಿಸಿ ಐಕಳ ಹರೀಶ್ ಶೆಟ್ಟಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಗೌರವ

ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಕಿನ್ನಿಗೋಳಿಯ ಐಕಳ ಹರೀಶ್ ಶೆಟ್ಟಿ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿರುವ ಅವರಿಗೆ ಸಾಮಾಜಿಕ ಸೇವಾ ವಿಭಾಗದಲ್ಲಿ ಈ ಪ್ರಶಸ್ತಿ ಲಭಿಸಿದೆ.

ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಯು.ಟಿ. ಖಾದರ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಐಕಳ ಹರೀಶ್ ಶೆಟ್ಟಿ ಅವರು ಬಂಟ್ಸ್ ಫೆಡರೇಷನ್ ಮುಂಬೈನ ಉಪಾಧ್ಯಕ್ಷರಾಗಿ, ವರ್ಲ್ಡ್ ಸನೈನ್ ಹೋಟೆಲಿನ ನಿರ್ದೇಶಕರಾಗಿ ಹಾಗೂ ಸಂಧ್ಯಾ ಆರ್ಟ್ಸ್ ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಶಾಲಾ-ಕಾಲೇಜು ದಿನಗಳಿಂದಲೇ ಕ್ರೀಡೆ ಹಾಗೂ ವಿವಿಧ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿದ್ದ ಅವರು, ಮಿಸ್ಟರ್ ಮಂಗಳೂರು ಯೂನಿವರ್ಸಿಟಿ, ಮಿಸ್ಟರ್ ಸೌತ್ ಕೆನರಾ ಹಾಗೂ ಮಿಸ್ಟರ್ ಕರ್ನಾಟಕ ಕಿಶೋರ್ ಸೇರಿದಂತೆ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅವರು, ವಿವಿಧ ಸಂಘ-ಸಂಸ್ಥೆಗಳ ಮೂಲಕ ಅನೇಕ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿದ್ದಾರೆ. ದೇವಸ್ಥಾನಗಳ ಅಭಿವೃದ್ಧಿಗೆ ದೇಣಿಗೆ, ಬಡ ಮಕ್ಕಳ ವಿವಾಹಕ್ಕೆ ನೆರವು, ಶೈಕ್ಷಣಿಕ ಪ್ರಗತಿಗೆ ಪ್ರೋತ್ಸಾಹ ಹಾಗೂ ವೈದ್ಯಕೀಯ ನೆರವು ಸೇರಿದಂತೆ ಹಲವು ಸೇವಾ ಕಾರ್ಯಗಳ ಮೂಲಕ ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ.

ಅವರ ನಿರಂತರ ಸಾಮಾಜಿಕ ಸೇವೆಯನ್ನು ಪರಿಗಣಿಸಿ ರಾಜ್ಯ ಸರ್ಕಾರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.

Leave a Reply

Your email address will not be published. Required fields are marked *

ಮಂಗಳೂರು: ಮೀನು ಸಂರಕ್ಷಣೆಗೆ ಬಳಸುವ ಮಂಜುಗಡ್ಡೆ ತಯಾರಿಕಾ ಘಟಕಗಳಿಗೆ ಆಹಾರ ಸುರಕ್ಷತಾ ಅಧಿಕಾರಿಗಳ ಭೇಟಿ

ಮಂಗಳೂರು: ಲಕ್ಷಾಂತರ ಬಾಂಗ್ಲಾದೇಶಿಗರಿದ್ದಾರೆ ಎಂದವರು ಈಗ ಎಲ್ಲಿದ್ದಾರೆ ತೋರಿಸಿ: ಪ್ರಕಾಶ್ ರಾಜ್ ಸವಾಲು

ಮಂಗಳೂರು: ಬೇಸಿಗೆಯಲ್ಲಿ ಕುಡಿಯುವ ನೀರಿನ ಕೊರತೆ ತಪ್ಪಿಸಲು ಮುನ್ನೆಚ್ಚರಿಕೆ ವಹಿಸಿ: ಯು.ಟಿ. ಖಾದರ್ ಸೂಚನೆ

ಬಂಟ್ವಾಳ: ಓವರ್‌ಟೇಕ್ ಮಾಡುವ ಭರದಲ್ಲಿ ಬೈಕ್‌ಗೆ ಡಿಕ್ಕಿ; ಗಂಭೀರ ಗಾಯಗೊಂಡಿದ್ದ ಸವಾರ ಸಾವು

ಉಡುಪಿ: ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯಿಂದ ಡಾ. ಚಂದ್ರಶೇಖರ್ ಹೆಸರು ಕೈಬಿಟ್ಟಿರುವುದು ಖಂಡನೀಯ: ಸುನಿಲ್ ಕುಮಾರ್

ದಕ್ಷಿಣ ಕನ್ನಡ: ಮಿಜಾರ್‌ನಲ್ಲಿ ಅಭಿಮಾನಿ ಬಸ್–ಸ್ಕೂಟರ್ ನಡುವೆ ಭೀಕರ ಅಪಘಾತ; ಸವಾರ ಗಂಭೀರ

ಬಂಟ್ವಾಳ: ಬಂಟ್ವಾಳ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟಕ್ಕೆ ಚಾಲನೆ

ಬಂಟ್ವಾಳ: ಬೈಕ್‌ಗೆ ಹಿಂಬದಿಯಿಂದ ಕಾರು ಡಿಕ್ಕಿ; ಗಂಭೀರ ಗಾಯಗೊಂಡಿದ್ದ ಸಹಸವಾರ ಸಾವು

ಮಂಗಳೂರು: ಮಂಗಳೂರಿನ ಕೊಟ್ಟಾರ ಇನ್ಫೋಸಿಸ್ ಕ್ಯಾಂಪಸ್ ಮಾರಾಟ: ಮುಕುಂದ್ ಎಂ.ಜಿ.ಎಂ. ರಿಯಾಲಿಟಿ ಖರೀದಿ

error: Content is protected !!