ವಾಮಂಜೂರಿನ ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ ಬೆಳ್ಳಿ ಮಹೋತ್ಸವದ ಅಂಗವಾಗಿ ಡಿಸೆಂಬರ್ 3ರಂದು ಕಾಲೇಜಿನ ಕ್ಯಾಂಪಸ್‌ನಲ್ಲಿ ಕೈಗಾರಿಕಾ ಸಮಾವೇಶ ಆಯೋಜಿಸಲಾಗಿದೆ.

‘ಸಿನರ್ಜೈಸಿಂಗ್ ಇಂಡಸ್ಟ್ರಿ, ಅಕಾಡೆಮಿ ಮತ್ತು ಪ್ರಾದೇಶಿಕ ಸ್ಟಾರ್ಟ್ಅಪ್‌ಗಳು’ ಎಂಬ ವಿಷಯದಡಿ ನಡೆಯುವ ಸಮಾವೇಶದಲ್ಲಿ ಕೈಗಾರಿಕೆ, ಶಿಕ್ಷಣ ಕ್ಷೇತ್ರ ಹಾಗೂ ಪ್ರಾದೇಶಿಕ ಸ್ಟಾರ್ಟ್ಅಪ್‌ಗಳ ನಡುವಿನ ಸಹಯೋಗ, ನಾವೀನ್ಯತೆ ಮತ್ತು ಉದ್ಯಮಶೀಲತೆಗೆ ಉತ್ತೇಜನ ನೀಡುವ ಕುರಿತು ಚರ್ಚೆಗಳು ನಡೆಯಲಿವೆ.
ಜ್ಯೋತಿ ಲ್ಯಾಬ್ಸ್‌ನ ಮಾಜಿ ಜಂಟಿ ವ್ಯವಸ್ಥಾಪಕ ನಿರ್ದೇಶಕ ಕೆ. ಉಲ್ಲಾಸ್ ಕಾಮತ್ ಮುಖ್ಯ ಅತಿಥಿಯಾಗಿ ಹಾಗೂ ಕ್ರಿಂಟರ್ಸ್ ಗ್ರೂಪ್‌ನ ಸ್ಥಾಪಕ ನೀಲೇಶ್ ಚೌಗುಲೆ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಪ್ರಾದೇಶಿಕ ನಾವೀನ್ಯತೆ, ನೂತನ ತಂತ್ರಜ್ಞಾನ, ಸೈಬರ್ ಅರಿವು ಸೇರಿದಂತೆ ವಿವಿಧ ವಿಷಯಗಳ ಕುರಿತು ಭಾಷಣ ಹಾಗೂ ಚರ್ಚಾ ಕಾರ್ಯಕ್ರಮಗಳು ನಡೆಯಲಿವೆ.
ಸಮಾವೇಶದಲ್ಲಿ ಸ್ಟಾರ್ಟ್ಅಪ್‌ಗಳ ಉತ್ಪನ್ನಗಳು, ತಂತ್ರಜ್ಞಾನಗಳು ಹಾಗೂ ಉದ್ಯಮ ಕಲ್ಪನೆಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, ಎಲಿವೇಟರ್ ಪಿಚ್ ಸ್ಪರ್ಧೆಯಲ್ಲಿ ಉದ್ಯಮಿಗಳು ತಮ್ಮ ನವೀನ ಆಲೋಚನೆಗಳನ್ನು ಮಂಡಿಸಲಿದ್ದು, ವಿಜೇತರಿಗೆ ನಗದು ಬಹುಮಾನ ನೀಡಲಾಗುತ್ತದೆ. ಸ್ಟಾರ್ಟ್ಅಪ್‌ಗಳಿಗೆ ಉಚಿತ ಮಳಿಗೆಗಳ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ರಿಯೊ ಡಿಸೋಜಾ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಡಾ. ವಿಜಯ್ ವಿ.ಎಸ್., ನೋಯಲ್ ದೀಪಕ್ ಶಿರಿ, ಜಾನ್ ಡಿಸಿಲ್ವಾ, ಶ್ರೀರಂಗ ಭಟ್ ಹಾಗೂ ಅಜಿತ್ ಉಪಸ್ಥಿತರಿದ್ದರು.



