ಜನ ಮನದ ನಾಡಿ ಮಿಡಿತ

Advertisement

ಮಹಿಳೆಯ ಹೊಟ್ಟೆಯಲ್ಲಿದ್ದ ಬರೋಬ್ಬರಿ 15 ಕೆ.ಜಿ ಗಡ್ಡೆ; ಡಾಕ್ಟರ್ಸ್ ಶಾಕ್..!

ಮಹಿಳೆಯ ಹೊಟ್ಟೆಯಲ್ಲಿದ್ದ 15 ಕೆ.ಜಿ ಗಡ್ಡೆಯನ್ನ ಯಶಸ್ವಿಯಾಗಿ ಹೊರ ತೆಗೆದು ವೈದ್ಯರು ಅವರಿಗೆ ಮರುಜನ್ಮ ನೀಡಿರೋ ಅಪರೂಪದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.


41 ವರ್ಷದ ಮಹಿಳೆಯೊಬ್ಬರು ಹೊಟ್ಟೆನೋವು ಎಂದು ಇಂದೋರ್ ನಗರದ ಇಂಡೆಕ್ಸ್ ಆಸ್ಪತ್ರೆಗೆ ಭೇಟಿ ನೀಡಿದ್ದರು. ಅತೀವ ನೋವಿನಿಂದ ಬಳಲುತ್ತಿದ್ದ ಮಹಿಳೆಯ ಹೊಟ್ಟೆಯನ್ನು ವೈದ್ಯರು ಸ್ಕ್ಯಾನ್ ಮಾಡಿದ್ದಾರೆ. ಈ ವೇಳೆ ಸ್ಕ್ಯಾನಿಂಗ್ ಮಾಡಿಸಿದಾಗ ಅವರ ಹೊಟ್ಟೆಯಲ್ಲಿ ಬರೋಬ್ಬರಿ 15 ಕೆ.ಜಿ ಗಡ್ಡೆ ಇರುವುದು ಪತ್ತೆಯಾಗಿದೆ.
ಇದನ್ನು ನೋಡಿದ ವೈದ್ಯರಿಗೆ ನಿಜವಾಗಿಯೂ ಶಾಕ್ ಆಗಿದೆ.

ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆ 49 ಕೆಜಿ ತೂಕವನ್ನು ಹೊಂದಿದ್ದರು. ಅವರ ದೇಹದಲ್ಲಿ ಸರಿ ಸುಮಾರು 15 ಕೆಜಿ ತೂಕದ ಗಡ್ಡೆ ಬೆಳೆದಿರೋದು ಬೆಳಕಿಗೆ ಬಂದಿದೆ. ಇದು ಮಹಿಳೆಯ ಹೊಟ್ಟೆಯಲ್ಲಿದ್ದು ಪ್ರಾಣಕ್ಕೆ ಅಪಾಯ ತಂದಿತ್ತು. ಈ ಗಡ್ಡೆಯು ದಿನ ಕಳೆದಂತೆ ಸಿಡಿಯುವ ಹಂತಕ್ಕೆ ಬಂದು ತಲುಪಿತ್ತು. ಈ ಊತವು ರೋಗಿಯ ಜೀವಕ್ಕೆ ಅಪಾಯಕಾರಿ ಎಂದು ತಿಳಿದ ಕೂಡಲೇ ಆಪರೇಷನ್‌ಗೆ ಮುಂದಾದ ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ ಗಡ್ಡೆಯನ್ನು ಹೊರತೆಗೆದಿದ್ದಾರೆ.

ಸದ್ಯ ಮಹಿಳೆ ಚೇತರಿಸಿಕೊಳ್ಳುತ್ತಿದ್ದು ಹೊಟ್ಟೆ ನೋವಿನಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಇಂತಹ ದೊಡ್ಡ ಗಡ್ಡೆಯನ್ನು ಶಸ್ತ್ರಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಹೊರತೆಗೆದಿರುವ ಇಂಡೆಕ್ಸ್ ಆಸ್ಪತ್ರೆಯ ಅಧ್ಯಕ್ಷ ಸುರೇಶ್‌ಸಿಂಗ್ ಬದೌರಿಯಾ ಹಾಗೂ ಉಪಾಧ್ಯಕ್ಷ ಮಯಾಂಕ್‌ರಾಜ್ ಸಿಂಗ್ ಭದೌರಿಯಾ ಮತ್ತು ಅವರ ತಂಡದ ಪ್ರಯತ್ನ ನಿಜವಾಗಿಯೂ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತವಾಗುತ್ತಿದೆ.

Leave a Reply

Your email address will not be published. Required fields are marked *

ಬಂಟ್ವಾಳ: ಭಾರೀ ಮಳೆ ಹಾಗೂ ಬಿರುಗಾಳಿಯ ಅಬ್ಬರಕ್ಕೆ ಕುಸಿತಗೊಂಡ ಮನೆಯ ಚಾವಣಿ…!

ಬಂಟ್ವಾಳ: ಸಜೀಪಮೂಡದಲ್ಲಿ ವಿದ್ಯುತ್ ಅವಘಡ; ಪೀಠೋಪಕರಣಗಳು ಸೇರಿ ದಿನನಿತ್ಯದ ವಸ್ತುಗಳು ಸುಟ್ಟು ಭಸ್ಮ…!

ವಾಷಿಂಗ್ಟನ್: ಅಮೆರಿಕ ಕಾಂಗ್ರೆಸ್‌ನಿಂದ ಡಾ. ಯು.ಟಿ. ಖಾದರ್‌ಗೆ ಪ್ರತಿಷ್ಠಿತ ಗೌರವ…!

ವಿಶ್ವಕಪ್ ಗಲಾಟೆ: ಅರ್ಜೆಂಟೀನಾ ವಿರುದ್ಧ ಫಿಫಾ ಕಠಿಣ ಶಿಸ್ತು ಕ್ರಮ!

ನವದೆಹಲಿ: ‘ಪಾಕಿಸ್ತಾನಿ ಕಾಶ್ಮೀರ’ ಅಲ್ಲ, ಅದು PoK ಮಾತ್ರ: ನ್ಯೂಯಾರ್ಕ್ ಟೈಮ್ಸ್‌ಗೆ ಭಾರತದ ತಿರುಗೇಟು…!

ವಾಷಿಂಗ್ಟನ್: ಚೀನಾ-ಪಾಕ್ ಮೂಲಕ ಇರಾನ್‌ಗೆ 400 ರಾಕೆಟ್ ಲಾಂಚರ್? ಟ್ರಂಪ್ ಆತಂಕ…!

ಮೂಡುಬಿದಿರೆ: ಒಮಾನ್‌ನಲ್ಲಿ ಸಂಭವಿಸಿದ ವಾಹನ ಅಪ*ಘಾತದಲ್ಲಿ ಯುವಕ ಸಾ*ವು….!

ಬಂಟ್ವಾಳ: ಅಮ್ಮುಂಜೆ ವೃದ್ಧೆ ಕೊಲೆ ಪ್ರಕರಣ: ಮೂವರು ಆರೋಪಿಗಳಿಗೆ ಜೀವಾವಧಿ…!

ನವದೆಹಲಿ: ಚಿನ್ನದ ಬೆಲೆ ಇಳಿಯುತ್ತಾ? ವಿಶ್ವ ಚಿನ್ನ ಮಂಡಳಿಯ ಭವಿಷ್ಯ…!

error: Content is protected !!