ಜನ ಮನದ ನಾಡಿ ಮಿಡಿತ

Advertisement

ಘನ‌ ಮತ್ತು ದ್ರವ ಸಂಪನ್ಮೂಲ ನಿರ್ವಹಣೆಯ ಕುರಿತು ತರಬೇತಿ ಕಾರ್ಯಗಾರ

ಬಂಟ್ವಾಳ: ಘನ‌ ಮತ್ತು ದ್ರವ ಸಂಪನ್ಮೂಲ ನಿರ್ವಹಣೆಯ ಕುರಿತು ಗ್ರಾ.ಪಂ.ಅಧ್ಯಕ್ಷರು ,ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಜಿ.ಪಿ.ಎಲ್.ಎಫ್ ಅಧ್ಯಕ್ಷರು ,ಎಂ.ಬಿ‌.ಕೆ.ಮತ್ತು ಎಲ್.ಸಿ.ಆರ್.ಪಿ.ರವರುಗಳಿಗೆ ತರಬೇತಿ ಕಾರ್ಯಗಾರ ತಾ.ಪಂ.ನ ಎಸ್.ಜಿ.ಎಸ್.ವೈ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಜಯರಾಮ್ ಮಾತನಾಡಿ, ತ್ಯಾಜ್ಯ ಮುಕ್ತ ಗ್ರಾಮವಾಗಿ ಪರಿವರ್ತನೆ ಮಾಡಲು ಜವಾಬ್ದಾರಿಯುತ ಸ್ಥಾನದಲ್ಲಿರುವ ಪ್ರತಿಯೊಬ್ಬರು ಪ್ರತಿಜ್ಞೆ ಮಾಡಬೇಕಾಗಿದೆ.


ಪ್ಲಾಸ್ಟಿಕ್ ಬಳಕೆಯನ್ನು ಮಾಡುವುದು ಪೂರ್ಣವಾಗಿ ನಿಷಿದ್ಧ ಮಾಡುತ್ತೇವೆ, ಮನೆಗೆ ಕಡ್ಡಾಯವಾಗಿ ಪ್ಲಾಸ್ಟಿಕ್ ಚೀಲ ಸಹಿತ ಯಾವುದೇ ವಸ್ತುಗಳನ್ನು ತರುವುದಿಲ್ಲ ಎಂಬುದನ್ನು ಪ್ರತಿಯೊಬ್ಬ ವ್ಯಕ್ತಿಯು ಕಟ್ಟುನಿಟ್ಟಾಗಿ ಪಾಲನೆ ಮಾಡಿದರೆ ಪ್ಲಾಸ್ಟಿಕ್ ಮುಕ್ತ ಮನೆಯಾಗಿ ಬದಲಾವಣೆ ಮಾಡಬಹುದು.


ಯಾವುದೇ ವಸ್ತುಗಳ ಬಳಕೆ ನಿಷೇಧ ಮಾಡಲು ಒತ್ತಾಯ ಪೂರ್ವಕವಾಗಿ ಮಾಡಲು ಅಸಾಧ್ಯ. ಬದಲಾಗಿ ಮನಪರಿವರ್ತನೆ ಮೂಲಕ ಇಂತಹ ನಿಷೇಧಗಳು ಯಶಸ್ವಿಯಾಗಲು ಸಾಧ್ಯ ಎಂದು ಅವರು ತಿಳಿಸಿದರು.
ತ್ಯಾಜ್ಯ ಮತ್ತು ಪ್ಲಾಸ್ಟಿಕ್ ಬಳಕೆಯಿಂದ ಭಯಾನಕ ರೋಗಗಳ ಹೆಚ್ಚಾಗುವ ಸಾಧ್ಯತೆ ಇರುವ ಬಗ್ಗೆ ಸ್ಪಷ್ಟವಾದ ಮಾಹಿತಿ ನೀಡುವ ಕೆಲಸಗಳು ಆಗಬೇಕಾಗಿದೆ.


ಈ ನಿಟ್ಟಿನಲ್ಲಿ ಜನರಿಗೆ ಸರಿಯಾದ ಮಾಹಿತಿ ನೀಡಿ ಆರೋಗ್ಯ ರಕ್ಷಣೆಯ ಜವಬ್ದಾರಿಯ ಬಗ್ಗೆ ತಿಳಿಸುವ ,ಚಿಂತನೆಯ ಕಾರ್ಯಕ್ರಮಗಳು ನಡೆಯಬೇಕು ಎಂದು ಅವರು ತಿಳಿಸಿದರು.
ಗ್ರಾಮ ಪಂಚಾಯತ್ ನ ಜವಬ್ದಾರಿ ಸ್ಥಾನದಲ್ಲಿರುವ ವ್ಯಕ್ತಿಗಳು ತ್ಯಾಜ್ಯ ಮುಕ್ತ,ಪ್ಲಾಸ್ಟಿಕ್ ಮುಕ್ತ ಗ್ರಾಮ ನಿರ್ಮಾಣದ ಗುರಿಯನ್ನು ಸಾಧಿಸಲು ಅಧಿಕಾರಿಗಳ ಜೊತೆಯಾಗಿ ಕೆಲಸ ಮಾಡಿ ಎಂದು ಅವರು ತಿಳಿಸಿದರು.

ತಾ.ಪಂ. ಆಡಳಿತಾಧಿಕಾರಿ ಎಚ್.ಆರ್.ನಾಯಕ್, ಪ್ರಭಾರ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ , ಸಹಾಯಕ ನಿರ್ದೇಶಕ ( ಗ್ರಾಮೀಣ ಉದ್ಯೋಗ) ದಿನೇಶ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಬಂಟ್ವಾಳ: ಕಾರು ಮತ್ತು ಆಕ್ಟಿವಾ ಸ್ಕೂಟರ್ ನಡುವೆ ಭೀಕರ ರಸ್ತೆ ಅಪ*ಘಾತ….!

ಮಂಗಳೂರು: ಎಂ.ಆರ್.ಜಿ.ಗ್ರೂಪ್ ಗೆ ಹಾರುವ ಹಕ್ಕಿ ಸೇರ್ಪಡೆ..!

ಉಡುಪಿ : ಕಾಪುವಿನಲ್ಲಿ ಭೀಕರ ಅಪಘಾತ…!

ಬಂಟ್ವಾಳ : ಸಜಿಪದಲ್ಲಿ ಭೀಕರ ಅಪಘಾತ…!

ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ….!

ಬಂಟ್ವಾಳ: ಬಡಗಬೆಳ್ಳೂರಿನಲ್ಲಿ ಕುಸಿದು ಬಿದ್ದ ಸೇತುವೆ; ಜನ ಸಂಚಾರಕ್ಕೆ ಭಾರೀ ಸಂಕಷ್ಟ…..!

ಬಂಟ್ವಾಳ: ಜ್ವರದಿಂದ ಬಳಲುತ್ತಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ನಿಧನ….!

ಬಂಟ್ವಾಳ: ಮಿನಿ ವಿಧಾನಸೌಧ ಮುಂಭಾಗದ ಕ್ಯಾಂಟೀನ್‌ನಲ್ಲಿ ಅನಿಲ ಸೋರಿಕೆ ಆತಂಕ….!

ಕಾಸರಗೋಡು: ಸಮುದ್ರದಲ್ಲಿ ಕೊಚ್ಚಿಹೋದ ಇಬ್ಬರು ಕಾಲೇಜು ವಿದ್ಯಾರ್ಥಿಗಳು..!

error: Content is protected !!