ಜನ ಮನದ ನಾಡಿ ಮಿಡಿತ

Advertisement

ತೊಕ್ಕೊಟ್ಟು: ಬಾರ್ ಬಳಿ ತಲವಾರು ಬೀಸಿ ಆತಂಕ ಸೃಷ್ಟಿಸಿದ ರೌಡಿಶೀಟರ್ ಬಂಧನ…!

ತೊಕ್ಕೊಟ್ಟು ವಿನಮ್ರ ಬಾರ್ ಬಳಿ ತಲವಾರು ಬೀಸಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ ಆರೋಪದ ಮೇಲೆ ರೌಡಿಶೀಟರ್‌ವೊಬ್ಬನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಉಳ್ಳಾಲದ ಮರ್ಗತಲೆ ನಿವಾಸಿ ಮೊಹಮ್ಮದ್ ಶಾಕಿರ್ ಎಂದು ಗುರುತಿಸಲಾಗಿದೆ. ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಶಾಕಿರ್ ರೌಡಿಶೀಟರ್ ಆಗಿದ್ದಾನೆ ಎನ್ನಲಾಗಿದೆ. ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮದ್ಯಪಾನ ಮಾಡಿದ್ದ ಶಾಕಿರ್ ತಲವಾರು ಹಿಡಿದು ಬಾರ್ ಬಳಿ ಬಂದು ಸಾರ್ವಜನಿಕರಿಗೆ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾರ್ ಬಳಿ ತಲವಾರು ಬೀಸುತ್ತಾ, “ನಿನಗೆ ಇಷ್ಟು ಹೊತ್ತು ಓಪನ್ ಇಡಲು ಪರ್ಮಿಷನ್ ಕೊಟ್ಟದ್ದು ಯಾರು? ಬಂದ್ ಮಾಡು” ಎಂದು ತುಳು ಭಾಷೆಯಲ್ಲಿ ಹೇಳಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ತಲವಾರು ಬೀಸಿದ ಪರಿಣಾಮ ಬಾರ್‌ನಲ್ಲಿದ್ದವರು ಭಯಭೀತರಾಗಿ ಆಚೀಚೆ ಓಡಿದ್ದು, ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಶಾಕಿರ್‌ನನ್ನು ಬಂಧಿಸಿರುವ ಪೊಲೀಸರು, ಕೃತ್ಯಕ್ಕೆ ಬಳಸಿದ್ದ ತಲವಾರನ್ನೂ ವಶಪಡಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಮತ್ತೋರ್ವ ಆರೋಪಿ ಮಂಚಿಲ ನಿವಾಸಿ ಅಶ್ಪಾಕ್ ಎಂಬಾತನನ್ನೂ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಶಸ್ತ್ರಾಸ್ತ್ರ ಕಾಯ್ದೆ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಉಳ್ಳಾಲ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *

ಉಡುಪಿ: ಅಪಾರ್ಟ್‌ಮೆಂಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆ

ಮಂಗಳೂರು: ಮಂಗಳೂರಿನಲ್ಲಿ ಆ.13ರಂದು ಡೋಲ್ಚೆ ಎಸ್ಥೆಟಿಕಾ ಸಂಸ್ಥೆಯ ಮೊದಲ ಶಾಖೆ ಆರಂಭ

ಮಂಗಳೂರು: ಕದ್ರಿ ಬಂಜನ್‌ ಕ್ಷೇತ್ರದಲ್ಲಿ ನಿವೃತ್ತ ವೀರ ಯೋಧರು, ವೀರನಾರಿಯರಿಗೆ ಸನ್ಮಾನ…!

ಮಂಗಳೂರು: ಡಿಸಿ ಮನ್ನಾ ಭೂಮಿ ಹಂಚಿಕೆಗೆ ಆಗ್ರಹ: ಒಂದು ತಿಂಗಳಲ್ಲಿ ಸಮಸ್ಯೆ ಬಗೆಹರಿಸದಿದ್ದರೆ ಉಗ್ರ ಹೋರಾಟ…!

ವಿಟ್ಲ: ಗ್ಯಾಸ್ ಸಿಲಿಂಡರ್ ಸ್ಫೋಟ, ಮನೆ ಸಂಪೂರ್ಣ ಜಖಂ; ಲಕ್ಷಾಂತರ ರೂ. ನಷ್ಟ

ಟೆಹ್ರಾನ್: ಖಮೇನಿ ಭೇಟಿಯಲ್ಲೇ ಹೊಸ ರಹಸ್ಯ! ‘ನೀವೇ ಖಮೇನಿಯೇ?’ ಎಂದು ಪ್ರಶ್ನಿಸಿದ ಇರಾನ್ ಅಧ್ಯಕ್ಷ…!

ಬ್ಯಾಂಕಾಕ್: ಥೈಲ್ಯಾಂಡ್ ಶಾಲೆಯಲ್ಲಿ ಗುಂಡಿನ ದಾಳಿ: ಶಿಕ್ಷಕ ಸಾವು, 15 ಮಂದಿಗೆ ಗಾಯ…!

ಬಂಟ್ವಾಳ: ಆಳ್ವಾಸ್ ಪ್ರಗತಿ-2026 ಉದ್ಯೋಗ ಮೇಳಕ್ಕೆ ಬಂಟ್ವಾಳದಿಂದ ಉಚಿತ ಬಸ್…!

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕಾರು ಅಪಘಾತ: ಒಂದೇ ಕುಟುಂಬದ ಆರು ಮಂದಿಗೆ ಗಾಯ…!

error: Content is protected !!