ಅಂತರರಾಷ್ಟ್ರೀಯ ಮಟ್ಟದಲ್ಲಿ ಆರೋಗ್ಯ ಸೇವೆ ನೀಡುತ್ತಿರುವ ಡೋಲ್ಚೆ ಎಸ್ಥೆಟಿಕಾ ಸಂಸ್ಥೆಯ ಕರ್ನಾಟಕದ ಮೊದಲ ಶಾಖೆ ಆಗಸ್ಟ್ 13ರಂದು ಮಂಗಳೂರಿನಲ್ಲಿ ಕಾರ್ಯಾರಂಭಗೊಳ್ಳಲಿದೆ.

ಸಂಸ್ಥೆಯ ಸಂಸ್ಥಾಪಕ ಡಾ. ಜೋಸೆಫ್ ಥಾಮಸ್ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು. ಆರೋಗ್ಯ ಸಮಸ್ಯೆಗಳು ಎದುರಾಗುವ ಮುನ್ನವೇ ಅವುಗಳನ್ನು ಪತ್ತೆಹಚ್ಚಿ ತಡೆಗಟ್ಟುವ ಮೂಲಕ ಜನರು ಆರೋಗ್ಯಕರ ಹಾಗೂ ಆತ್ಮವಿಶ್ವಾಸದ ಜೀವನ ನಡೆಸಲು ನೆರವಾಗುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ ಎಂದು ಅವರು ಹೇಳಿದರು.

ಕೇಂದ್ರದಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಆರೋಗ್ಯ ಮೌಲ್ಯಮಾಪನ, ಡಿಜಿಟಲ್ ಆರೋಗ್ಯ ದಾಖಲೆಗಳು ಹಾಗೂ ಅತ್ಯಾಧುನಿಕ ರೋಗನಿರ್ಣಯ ಸೇವೆಗಳು ಲಭ್ಯವಿರಲಿವೆ ಎಂದು ಮುಖ್ಯ ವೈದ್ಯ ಡಾ. ಅಕ್ಷತ್ ಆಚಾರ್ಯ ತಿಳಿಸಿದರು.

ಅಗತ್ಯವಿದ್ದಲ್ಲಿ ಜಿನೋಮಿಕ್ ವೈದ್ಯಕೀಯ ಸೇವೆಗಳನ್ನೂ ಒದಗಿಸಲಾಗುವುದು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ವ್ಯವಹಾರ ಅಭಿವೃದ್ಧಿ ಮುಖ್ಯಸ್ಥ ಜಿಜೋ ಮ್ಯಾಥ್ಯೂ ಹಾಗೂ ಕ್ಲಿನಿಕ್ ಮುಖ್ಯಸ್ಥ ಭರತ್ ಉಪಸ್ಥಿತರಿದ್ದರು.



