ಜನ ಮನದ ನಾಡಿ ಮಿಡಿತ

Advertisement

ಅಮ್ಟಾಡಿ ಗ್ರಾಮ ಪಂಚಾಯತ್ ಗ್ರೇಡ್ 1 ಕಾರ್ಯದರ್ಶಿ ನಾಪತ್ತೆ..!!

ಬಂಟ್ವಾಳ: ಅಮ್ಟಾಡಿ ಗ್ರಾಮಪಂಚಾಯತ್ ಗ್ರೇಡ್ 1 ಕಾರ್ಯದರ್ಶಿ ನಾಪತ್ತೆಯಾಗಿರುವ ಬಗ್ಗೆ ಪುಂಜಾಲಕಟ್ಟೆ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಆಚಾರ್ಯ (75) ಎಂಬವರು ನಾಪತ್ತೆಯಾಗಿದ್ದು, ಅವರ ಮೊಬೈಲ್ ವಾಲ್ಪಾಡಿಯ ಕೊಯಕ್ಕುಡೆ ಚಡಾವ್ ಎಂಬಲ್ಲಿ ಪತ್ತೆಯಾಗಿದೆ. ಪಂಚಾಯತ್ ಕಾರ್ಯದರ್ಶಿಯಾಗಿರುವ ಲಕ್ಷ್ಮೀನಾರಾಯಣ ಅವರ ನಾಪತ್ತೆ ಬಗ್ಗೆ ಅವರ ಪತ್ನಿ ವಂದನಾ ಪುಂಜಾಲಕಟ್ಟೆ ಪೋಲೀಸ್ ಠಾಣೆಯಲ್ಲಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ಅದರಂತೆ ಅವರ ಮೊಬೈಲ್ ಲೊಕೇಶನ್ ಹಾಕಿದಾಗ ವಾಲ್ಪಾಡಿ ಕೊಯಕುಡೆ ಚಡಾವ್ ತೋರಿಸುತ್ತಿದ್ದುದರಿಂದ ಪುಂಜಾಲಕಟ್ಟೆ ಪೊಲೀಸರು ಮತ್ತು ಸಂಬಂಧಿಕರು ಹುಡುಕಾಡಿಕೊಂಡು ಬಂದಿದ್ದರು. ಅದರೆ ಅವರ ಮೊಬೈಲ್ ಮಾತ್ರ ರಸ್ತೆ ಬದಿ ಪತ್ತೆಯಾಗಿದ್ದು ಬೈಕ್ ನಲ್ಲಿ ಬಂದಿದ್ದ ಲಕ್ಷ್ಮೀನಾರಾಯಣ ಪತ್ತೆಯಾಗಿಲ್ಲ.


ಕೆ.ಎ.-21 , EC 5599 ನಂಬರ್ ನ ಹೀರೊ ನೀಲಿ ಬಣ್ಣದ ಬೈಕ್ ನಲ್ಲಿ ಅವರು ಬಂದಿದ್ದರೆನ್ನಲಾಗಿದೆ‌ .ಮೊಬೈಲ್ ನ್ನು ವಾಲ್ಪಾಡಿಯಲ್ಲಿ ಎಸೆದು ಬೈಕ್ ನಲ್ಲಿ ಹೋಗಿರಬಹುದೆಂದು ಹೇಳಲಾಗುತ್ತಿದೆ. ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಸೆ. 8 ರಂದು ಅಮ್ಟಾಡಿ ಗ್ರಾ.ಪಂ‌‌.ನಲ್ಲಿ ಗ್ರಾಮ ಸಭೆನಡೆದ ಬಳಿಕ ಇವರು ತುಂಬಾ ಒತ್ತಡದಲ್ಲಿದ್ದರು ಎಂದು ಹೇಳಲಾಗಿದ್ದು, ಮಾನಸಿಕವಾಗಿ ನೊಂದುಕೊಂಡಿದ್ದ ಅವರು ಇತ್ತೀಚೆಗೆ ಬಹಳಷ್ಟು ಕುಗ್ಗಿ ಹೋಗಿದ್ದರು. ಇಲ್ಲಿನ ಪಿ.ಡಿ.ಒ.ಅವರಿಗೆ ಆರೋಗ್ಯ ಸರಿ ಇಲ್ಲದ ಕಾರಣ ಇವರಿಗೆ ಹೆಚ್ಚವರಿಯಾಗಿ ಪಿ.ಡಿ.ಒ.ಹುದ್ದೆಯನ್ನು ನೀಡಲಾಗಿತ್ತು.
ಆದರೆ ಇವರು ಎರಡು ಹುದ್ದೆಯನ್ನು ನಿಭಾಯಿಸಲು ಸಾಧ್ಯವಾಗದೆ ನೊಂದುಕೊಂಡಿದ್ದರು, ಒತ್ತಡದಿಂದ ಇವರು ಅನಾರೋಗ್ಯಕ್ಕೆ ತುತ್ತಾಗಿದ್ದಾರಾ? ಎಂಬ ಪ್ರಶ್ನೆಯನ್ನು ಹಾಕುತ್ತಿದ್ದಾರೆ.
ಅವರು ನಿನ್ನೆ ಅಂದರೆ ಸೆ. 12 ರಂದುಮಧ್ಯಾಹ್ನ 12 ಗಂಟೆವರೆಗೆ ಆಫೀಸಿಗೆ ಬರದ ಕಾರಣ ಇಲ್ಲಿನ ಸಿಬ್ಬಂದಿ ಪೋನ್ ಮಾಡಿದಾಗ ನನಗೆ ಹುಷಾರಿಲ್ಲ ಕೆಲವೊಂದು ಟೆಸ್ಟ್ ಗಳನ್ನು ಇಸಿಜಿ‌ಸಹಿತ ಇನ್ನೂ ಕೆಲವು ಪರೀಕ್ಷೆ ನಡೆಸಿ ಮತ್ತೆ ಬರುವುದಾಗಿ ತಿಳಿಸಿದ್ದರಂತೆ. ಆ ಬಳಿಕ ಅಫೀಸಿಗೆ ಬರದೆ ಮನೆಗೂ ಹೋಗದೆ ಪೋನ್ ಸ್ವೀಚ್ ಆಫ್ ಆಗಿದ್ದು ಪತ್ತೆಯಿಲ್ಲ ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *

ಕಾಸರಗೋಡು: ಸಮುದ್ರದಲ್ಲಿ ಕೊಚ್ಚಿಹೋದ ಇಬ್ಬರು ಕಾಲೇಜು ವಿದ್ಯಾರ್ಥಿಗಳು..!

ಕಡಬ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕಪ್ ಪಲ್ಟಿ..!

ಕಡಬ: ಗೋಳಿತ್ತಡಿ-ಏಣಿತ್ತಡ್ಕ-ಕುದುಲೂರು ಸಂಪರ್ಕಿತ ರಸ್ತೆ; ರಸ್ತೆಯುದ್ದಕ್ಕೂ ಹೊಂಡಮಯ..!

ಬಂಟ್ವಾಳ: ಪಾಣೆಮಂಗಳೂರು ಕಲ್ಲುರ್ಟಿ ದೈವಸ್ಥಾನದ ಮುಂಭಾಗದ ಸರ್ವೀಸ್ ರಸ್ತೆಯಲ್ಲಿ ಹೊಂಡಗುಂಡಿ…!

ಉಡುಪಿ: ಮಾದಕ ದ್ರವ್ಯ ಸಾಗಾಟ- ಮಾರಾಟ ಪ್ರಕರಣ: ಪಿಐಟಿ- ಎನ್‌ಡಿಪಿಎಸ್ ಕಾಯ್ದೆಯಡಿ ಆರೋಪಿಯ ಬಂಧನ…!

ಮಂಗಳೂರು: ಅಕ್ರಮ ಆನೆದಂತಗಳ ಮಾರಾಟ; ಆರೋಪಿಗಳ ಬಂಧನ..!

ಬೆಂಗಳೂರು: ಕಾರ್ಕಳದಲ್ಲಿ ತುಳು ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸುವಂತೆ ಮನವಿ..!

ಬೆಂಗಳೂರು: ಭೀಕರ ರಸ್ತೆ ಅಪಘಾತದಲ್ಲಿ ಕೇರಳ ಮೂಲದ ಇಬ್ಬರು ನರ್ಸಿಂಗ್ ವಿದ್ಯಾರ್ಥಿಗಳು ಮೃತ್ಯು…!

ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಭೇಟಿ…!

error: Content is protected !!