ಜನ ಮನದ ನಾಡಿ ಮಿಡಿತ

Advertisement

ಖಲಿಸ್ತಾನಿ ಭಯೋತ್ಪಾದಕ ಸುಖದೋಲ್ ಸಿಂಗ್ ಹತ್ಯೆ; ಭಾರತ ಮೇಲೆ ಕೆನಡಾ ಪ್ರಧಾನಿ ಗರಂ..!

ಕೆನಡಾದಲ್ಲಿ ನಡೆಯುತ್ತಿದ್ದ ಖಲಿಸ್ತಾನ್ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಾಗೂ ಭಾರತ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಖಲಿಸ್ತಾನಿ ಭಯೋತ್ಪಾದಕ ಸುಖದೋಲ್ ಸಿಂಗ್ ನನ್ನು ಹತ್ಯೆ ಮಾಡಲಾಗಿದೆ. ಕೆನಡಾದಲ್ಲಿ ಹರ್‌ದೀಪ್‌ ನಿಜ್ಜಲ್ ಬಳಿಕ ಮತೋರ್ವ ಖಲಿಸ್ತಾನಿ ಉಗ್ರನ ಹತ್ಯೆಯಾಗಿದ್ದು, ಗ್ಯಾಂಗ್ ವಾರ್​ನಲ್ಲಿ ಈತನ ಹತ್ಯೆಯಾಗಿದೆ.

ಭಾರತದ ಪಂಜಾಬ್‌ನ ಮೊಗಾದಿಂದ 2017 ರಲ್ಲಿ ನಕಲಿ ಪಾಸ್‌ಪೋರ್ಟ್‌ ಮೂಲಕ ಸುಖದೋಲ್ ಸಿಂಗ್ ಕೆನಡಾಕ್ಕೆ ಪಲಾಯನ ಮಾಡಿದ್ಧಾನೆ. ಅಲ್ಲಿ ಹೋದ ಮೇಲೆ ಖಲಿಸ್ತಾನ್ ಚಳುವಳಿಯಲ್ಲಿ ಭಾಗಿಯಾಗಿ ಸಂಘಟನೆಗೆ ಮುಂದಾಗಿದ್ದು, ಹರ್ದೀಪ್ ಸಿಂಗ್ ದಲ್ಲಾ ಅವರ ನಿಕಟ ಸಹವರ್ತಿಯಾಗಿದ್ದನು.


ಖಲಿಸ್ತಾನ್ ಮತ್ತು ಕೆನಡಾದೊಂದಿಗೆ ಸಂಪರ್ಕ ಹೊಂದಿರುವ 43 ದರೋಡೆಕೋರರಲ್ಲಿ ಸುಖದೋಲ್ ಸಿಂಗ್‌ ಕೂಡ ಒಬ್ಬನಾಗಿದ್ದಾನೆ ಎಂದು ತಿಳಿದು ಬಂದಿದೆ.


ಇನ್ನೂ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ಹತ್ಯೆಯಲ್ಲಿ ಭಾರತದ ಪ್ರತಿನಿಧಿಗಳ ಪಾತ್ರ ಇದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಇತ್ತಿಚೇಗೆ ಹೇಳಿದ್ದಾರೆ. ಹೀಗಾಗಿ ಭಾರತ ಮತ್ತು ಕೆನಡಾ ನಡುವೆ ರಾಜತಾಂತ್ರಿಕ ಗದ್ದಲದ ಬೆನ್ನಲ್ಲೇ ಸುಖದೋಲ್ ಸಿಂಗ್ ಕೊಲೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Leave a Reply

Your email address will not be published. Required fields are marked *

ಪುತ್ತೂರು: ಪುತ್ತೂರಿನ ಸಮಾಜ ಸೇವಕಿ ಕೆರೆಮನೆ ನಳಿನಿ ಲೋಕಪ್ಪ ಗೌಡ ನಿಧನ.

ಯುವತಿಯರನ್ನು ನಂಬಿಸಿ ಕೈಕೊಟ್ಟ ಭೂಪನೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ…!

ಪಟ್ಲ ಸತೀಶ್ ಶೆಟ್ಟಿ ಅವರಿಗೆ ಡಾ. ಶಿವರಾಮ ಕಾರಂತ ಪ್ರಶಸ್ತಿ..!

ವ್ಯಕ್ತಿಯೊಬ್ಬ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ…!

ವಿ ಡಿ ಸತೀಶನ್ ಅವರನ್ನು ಕಾಸರಗೋಡಿನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು…!

ಜಿಲ್ಲೆಯ ಹಿರಿಯ ರಾಜಕಾರಣಿ, ಬೈಂದೂರಿನ ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ನಿಧನ…!

ಬಂಟ್ವಾಳ: ನಿವೃತ್ತ ಕೃಷಿ ಅಧಿಕಾರಿ ನಾರಾಯಣ ನಾಯ್ಕ್ (65) ಹೃದಯಾಘಾತದಿಂದ ನಿಧನ!

ಮಂಗಳೂರು: ಪಟ್ಲ ಸತೀಶ್ ಶೆಟ್ಟಿಯವರಿಗೆ ಅತ್ಯುನ್ನತ ಡಾ. ಶಿವರಾಮ ಕಾರಂತ ಪ್ರಶಸ್ತಿ ಘೋಷಣೆ!

ಮಂಗಳೂರು: ಪಚ್ಚನಾಡಿ ರೈಲ್ವೇ ಹಳಿಯಲ್ಲಿ ಯುವಕನ ಮೃ*ತದೇಹ ಪತ್ತೆ; ಸಂಶಯಾಸ್ಪದ ಸಾ*ವು..!

error: Content is protected !!