ದಕ್ಷಿಣ ಕನ್ನಡ : ಮಂಗಳೂರು ಕ್ರೀಡಾಭಾರತಿ ಜಿಲ್ಲಾ ಮಹಿಳಾಪ್ರಮುಖ್ ಆಗಿ ಸಾಧಕಿ, ಕ್ರೀಡಾಪಟು, ಬಬಿತಾ ಶೆಟ್ಟಿ ಆಯ್ಕೆಯಾಗಿದ್ದಾರೆ. ಕ್ರೀಡಾಭಾರತಿ ಮಂಗಳೂರು ವಿಭಾಗದ ಜಿಲ್ಲಾ ಬೈಠಕ್ ನಗರದ ಸಂಘನಿಕೇತನದಲ್ಲಿ ನಡೆಯಿತು ಮತ್ತು ಅಲ್ಲಿ ಆಯ್ಕೆಯನ್ನು ಘೋಷಿಸಲಾಯಿತು.
ಜಿಲ್ಲಾ ಮಹಿಳಾ ಪ್ರಮುಖ್ ಆಗಿದ್ದ ಹೇಮಪ್ರಭಾ ಲೈಲಾ ಇವರು ವೃತ್ತಿಪದೋನ್ನತಿಯಿಂದ ತಮ್ಮ ಜವಾಬ್ದಾರಿಗೆ ರಾಜೀನಾಮೆ ನೀಡಿದ್ದು ,ಅವರ ಸ್ಥಾನಕ್ಕೆ ಬಬಿತಾ ಶೆಟ್ಟಿ ಇವರ ಆಯ್ಕೆಯನ್ನು ಕ್ರೀಡಾಭಾರತಿಯ ರಾಜ್ಯ ಉಪಾಧ್ಯಕ್ಷರಾದ ನಾಗರಾಜ ಶೆಟ್ಟಿಯವರು ಘೋಷಿಸಿದರು. ಸಹ ಮಹಿಳಾ ಪ್ರಮುಕ್ ಆಗಿ ಸುಮಂಗಲಾ ಕೋಟ್ಯಾನ್ ಮತ್ತು ದಿವ್ಯಾ ಸುಳ್ಯ ,ಜಿಲ್ಲಾ ಮಹಿಳಾ ಉಪಾಧ್ಯಕ್ಷರಾಗಿ ಉಷಾರಾಣಿ, ಯೋಗ ಶಿಕ್ಷಣ ಪ್ರಮುಖ್ ಆಗಿ ಶಾಂಭವಿ ಮತ್ತು ನಿರ್ಮಲ ಆಯ್ಕೆಯಾದರು. ಉಷಾರಾಣಿ ಯವರು ಕ್ರೀಡಾ ಗೀತೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಜಿಲ್ಲಾ ಕಾರ್ಯದರ್ಶಿ ಕೃಷ್ಣ ಶೆಟ್ಟಿ ತಾರೆಮರ್ ಸ್ವಾಗತದೊಂದಿಗೆ ಪ್ರಸ್ತಾವನೆಗೈದರು. ಜಿಲ್ಲಾ ಕ್ರೀಡಾ ಭಾರತೀಯ ಅಧ್ಯಕ್ಷರಾದ ಶ್ರೀ ಕಾರಿಯಪ್ಪ ರೈಯವರು ಮುಂದಿನ ಕ್ರೀಡಾ ಸಮ್ಮೇಳನದ ಬಗ್ಗೆ ವಿವರಿಸಿದರು. ರಾಜ್ಯ ಕ್ರೀಡಾ ಭಾರತಿಯ ಉಪಾಧ್ಯಕ್ಷರಾದ ಶ್ರೀ ನಾಗರಾಜ ಶೆಟ್ಟಿಯವರು ಶ್ರೀಮತಿ ಹೇಮಪ್ರಭಾ ಲೈಲಾ ಇವರನ್ನು ಜಿಲ್ಲಾ ಕ್ರೀಡಾ ಭಾರತಿಯ ಪರವಾಗಿ ಗೌರವಿಸಿ,ಅಭಿನಂದನಾ ನುಡಿಯನ್ನು ನುಡಿದರು. ರಾಜ್ಯಕ್ರೀಡಾ ಭಾರತಿಯ ಕಾರ್ಯಕಾರಿಣಿ ಸದಸ್ಯರಾದ ಭೋಜರಾಜ ಕಲ್ಲಡ್ಕ,ಜಿಲ್ಲಾ ಕ್ರೀಡಾಭಾರತಿ ಕೋಶಾಧಿಕಾರಿಗಳಾದ ಶ್ರೀ ಪ್ರೇಮನಾಥ್ ಉಳ್ಳಾಲ್,ಜೊತೆ ಕಾರ್ಯದರ್ಶಿ ಡಾ। ಕರುಣಾಕರ ಶೆಟ್ಟಿ,ಉಪಾಧ್ಯಕ್ಷರಾದ ಅನಂತ್ ಪ್ರಭು, ಎಸ್ ವಿ ಭಟ್, ಸದಾನಂದ ಪ್ರಭು, ಮಮತಾ ಅಣ್ಣಯ್ಯ ಕುಲಾಲ್, ಸುಜಾತಾ ಕೋಡಿಕಲ್, ಲೇಖನ, ಸಂಗೀತಾ ಉಪಸ್ಥಿತರಿದ್ದರು. ಜಯಶ್ರೀ ಪ್ರತಿಮ್ ವಂದಿಸಿದರು.
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…