ಜನ ಮನದ ನಾಡಿ ಮಿಡಿತ

Advertisement

ಮೂಡುಬಿದಿರೆಯಲ್ಲಿ 21ನೇ ವರ್ಷದ ‘ಕೋಟಿ-ಚೆನ್ನಯ ಹೊನಲು ಬೆಳಕಿನ ಜೋಡುಕರೆ ಕಂಬಳ

ಮೂಡುಬಿದಿರೆ ಒಂಟಿಕಟ್ಟೆ ಯ ಕಡಲಕೆರೆ ನಿಸರ್ಗಧಾಮದ ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮದಲ್ಲಿ ನಡೆಯುವ ಕೋಟಿ-ಚೆನ್ನಯ 21ನೇ ವರ್ಷದ ಹೊನಲು ಬೆಳಕಿನ ಬಯಲು ಕಂಬಳೋತ್ಸವ ಡಿಸೆಂಬರ್ 17ರಂದು ಪೂರ್ವಾಹ್ನ ಗಂಟೆ 7.00ರಿಂದ ನಡೆಯಲಿದೆ ಎಂದು ಕಂಬಳ ಸಮಿತಿಯ ಅಧ್ಯಕ್ಷ ಶಾಸಕ ಉಮಾನಾಥ ಎ. ಕೋಟ್ಯಾನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಓಡಿಸಿದವರಿಗೆ ಕಾಲು ಪವನು ಚಿನ್ನದ ಬಹುಮಾನ ಲಭಿಸಲಿದೆ. ವಿಜೇತ ಕೋಣಗಳ ಸಹಾಯಕ ತಂಡಕ್ಕೆ ರೂ. 1000 ನಗದು ಬಹುಮಾನ ಲಭಿಸಲಿದೆ. ಪ್ರಧಾನ ತೀರ್ಪುಗಾರರಾಗಿ ವಿಶ್ರಾಂತ ಪ್ರಾಂಶುಪಾಲ ಕೆ. ಗುಣಪಾಲ ಕಡಂಬ, ವೀಕ್ಷಕ ವಿವರಣೆ ಮತ್ತು ತೀರ್ಪುಗಾರರಾಗಿ ರಾಜೀವ ಶೆಟ್ಟಿ ಎಡ್ತೂರು, ರವೀಂದ್ರ ಕುಮಾರ್ ಕುಕ್ಕುಂದೂರು, ನವೀನ್ಚಂದ್ರ ಅಂಬೂರಿ, ವಿಜಯಕುಮಾರ್ ಕಂಗಿನ ಮನೆ, ಸುಧಾಕರ ಶೆಟ್ಟಿ ಮುಗ್ರೋಡಿ, ಸತೀಶ್ ಹೊಸ್ಮಾರು, ವಿದ್ಯಾಧರ ಜೈನ್ ರೆಂಜಾಳ ಸಹಕರಿಸಲಿದ್ದಾರೆ. ವೀಡಿಯೋ ತೀರ್ಪುಗಾರರಾಗಿ ಬಂಟ್ವಾಳ ಮಹಾಕಾಳಿಬೆಟ್ಟು ಸೀತಾರಾಮ್ ಶೆಟ್ಟಿ, ಮೂಡುಬಿದಿರೆ ಕಂಬಳ ಸಮಿತಿ ಉಪಾಧ್ಯಕ್ಷ ಸುರೇಶ್ ಕೆ. ಪೂಜಾರಿ, ತೋಡಾರು ಪಂಚಶಕ್ತಿ ರಂಜಿತ್ ಪೂಜಾರಿ, ಸಹಕರಿಸಲಿ ದ್ದಾರೆ. ಸ್ಕೈವ್ಯೂ ಕಾರ್ಕಳ ವತಿಯಿಂದ ಲೇಸರ್ ಬೀಂ ನೆಟ್‌ವರ್ಕ್ ಸಿಸ್ಟಮ್ ಮತ್ತು ಟೈಮರ್ ಮೂಲಕ ದಾಖಲೀಕರಣ ನಡೆಯಲಿದೆ. ಕೋಣಗಳನ್ನು ಗದ್ದೆಗೆ ಇಳಿಸಲು ನೇಗಿಲು ಕಿರಿಯ ವಿಭಾಗಕ್ಕೆ ಪೂರ್ವಾಹ್ನ ಗಂಟೆ 8.00, ಹಗ್ಗ ಕಿರಿಯ ಮಧ್ಯಾಹ್ನ ಗಂಟೆ 11.00, ನೇಗಿಲು ಹಿರಿಯ ಮಧ್ಯಾಹ್ನ ಗಂಟೆ 12.00, ಹಗ್ಗ ಹಿರಿಯ ಮಧ್ಯಾಹ್ನ ಗಂಟೆ 2.00, ಕನೆಹಲಗೆ ಮತ್ತು ಅಡ್ಡಹಲಗೆ ಅಪರಾಹ್ನ ಗಂಟೆ 3.00ಕ್ಕೆ ಸಮಯ ನಿಗದಿ ಪಡಿಸಲಾಗಿದೆ.


ಕಳೆದ ಬಾರಿ 276ಜೊತೆ ಕೋಣಗಳು ಮೂಡುಬಿದಿರೆ ಕಂಬಳ ಕೂಟದಲ್ಲಿ ಭಾಗವಹಿಸಿದ್ದು, ಈ ಬಾರಿ ಮತ್ತಷ್ಟು ಜತೆ ಕೋಣಗಳು ಭಾಗವಹಿಸುವ ನಿರೀಕ್ಷೆಯಿದೆ.ಜಿಲ್ಲಾ ಕಂಬಳ ಸಮಿತಿಯು ಜಾರಿಗೊಳಿಸಿದ ಎಲ್ಲಾ ನಿಯಮ ಗಳನ್ನು ಈ ಕಂಬಳದಲ್ಲಿ ಪಾಲಿಸಲು ತೀರ್ಮಾನಿಸಲಾಗಿದೆ. ಅಹಿಂಸಾತ್ಮಕವಾಗಿ ಕಾನೂನಿನ ಚೌಕಟ್ಟಿನಲ್ಲಿ ನಿಗಧಿತ ಕಾಲಮಿತಿ ಯೊಳಗೆ ಕಂಬಳ ಕೂಟ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಮೂಡುಬಿದಿರೆ ಕಂಬಳ ಪ್ರಧಾನ ಕಾರ್ಯದರ್ಶಿ ಕೆ. ಗುಣಪಾಲ ಕಡಂಬ, ಕಾರ್ಯದರ್ಶಿ ರಂಜಿತ್ ಪೂಜಾರಿ, ಉಪಾಧ್ಯಕ್ಷ ಸುರೇಶ್ ಕೆ. ಪೂಜಾರಿ, ಪ್ರಮುಖರಾದ ಜಗದೀಶ್ ಅಧಿಕಾರಿ, ಈಶ್ವರ ಕಟೀಲ್ ಉಪಸ್ಥಿತರಿದ್ದರು

ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮದಲ್ಲಿ ನಡೆಯುವ ಕಂಬಳೋತ್ಸವ ಈ ವರ್ಷದ ಯೋಜನೆಯಾಗಿ ಸುಮಾರು 50ಲಕ್ಷ ರೂ. ವೆಚ್ಚದಲ್ಲಿ ಆವರಣ ಗೋಡೆ ಹಾಗೂ ಸ್ವಾಗತ ದ್ವಾರ ನಿರ್ಮಿಸಲಾಗುತ್ತಿದೆ. 2023ರ ಅವಧಿಯಲ್ಲಿ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಮಂಜೂರುಗೊಂಡ ಅನುದಾನವನ್ನು ಬಳಸಿಕೊಂಡು ರಕ್ಷಣಾತ್ಮಕ ಮತ್ತು ಕಲಾತ್ಮಕ ಆವರಣ ಗೋಡೆ ನಿರ್ಮಾಣಕ್ಕೆ ಕಂಬಳ ಸಮಿತಿ ಕಾರ್ಯಯೋಜನೆ ರಚಿಸಿದೆ. ಆವರಣ ಗೋಡೆಯಲ್ಲಿ ನಿರ್ಮಿಸಲುದ್ದೇಶಿಸಿರುವ ಆಕರ್ಷಣೀಯ ಸ್ವಾಗತ ಗೋಪುರಕ್ಕೆ ದೇಶದ ಗಡಿಯಲ್ಲಿ ಉಗ್ರರ ಧಾಳಿಗೆ ಪ್ರಾಣತ್ಯಾಗ ಮಾಡಿದ ವೀರಯೋಧ ಕ್ಯಾಪ್ಟನ್ ಎಂ. ವಿ. ಪ್ರಾಂಜಲ್ ನಾಮಕರಣಗೊಳಿಸಲು ಸಮಿತಿ ನಿರ್ಧರಿಸಿದೆ ಎಂದು ಕಂಬಳ ಸಮಿತಿ ಕಾರ್ಯದರ್ಶಿ ರಂಜಿತ್ ಪೂಜಾರಿ ತೋಡಾರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

ಮಂಗಳೂರು: ನ್ಯುಮೋನಿಯಾಗೆ 6ನೇ ತರಗತಿ ವಿದ್ಯಾರ್ಥಿನಿ ಬಲಿ

ಬಂಟ್ವಾಳ: ಬಿಸಿರೋಡು–ಅಡ್ಡಹೊಳೆ ಚತುಷ್ಪಥ ಕಾಮಗಾರಿ ನಿಂತಿಲ್ಲ: ಕೆಎನ್‌ಆರ್‌ಸಿಎಲ್ ಸ್ಪಷ್ಟನೆ

ವಾಷಿಂಗ್ಟನ್: ಟ್ರಂಪ್ ಸುಂಕಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್; ಕಂಪನಿಗಳಿಗೆ ಬಿಲಿಯನ್‌ಗಟ್ಟಲೆ ಮರುಪಾವತಿ..!

ಟೆಹ್ರಾನ್: ಮೊಜ್ತಬಾ ಖಮೇನಿ ಸಂಪರ್ಕಿಸುವುದು ಕಷ್ಟ; ಇರಾನ್ ಅಧ್ಯಕ್ಷರ ಬಹಿರಂಗ ಹೇಳಿಕೆ…!

ಗಂಗೊಳ್ಳಿ: ಗಂಗೊಳ್ಳಿಯಲ್ಲಿ ಮೀನುಗಾರರ ಸಮುದ್ರ ಪೂಜೆ; ಉತ್ತಮ ಮೀನುಗಾರಿಕೆಗೆ ಪ್ರಾರ್ಥನೆ..!

ಮಂಗಳೂರು: ಮಂಗಳೂರು-ಮೂಡುಬಿದಿರೆ ಹೆದ್ದಾರಿಯಲ್ಲಿ ಅಪಾಯದ ಮುನ್ಸೂಚನೆ; ಕೆತ್ತಿಕಲ್ ಗುಡ್ಡ ಮತ್ತೆ ಕುಸಿತ..!

ಬೆಳ್ತಂಗಡಿ: ಪ್ರಚೋದನಾಕಾರಿ ಭಾಷಣ ಪ್ರಕರಣ; ಎಸ್ಟಿಪಿಐ ಮುಖಂಡನಿಗೆ 6 ತಿಂಗಳ ಜೈಲು ಶಿಕ್ಷೆ…!

ಗದಗ: ಚಿಪ್ಸ್ ತರಲು ಹೋದ ಬಾಲಕಿಗೆ ಬೀದಿ ನಾಯಿಗಳ ದಾಳಿ; ಆಸ್ಪತ್ರೆಗೆ ದಾಖಲು…!

ಬಂಟ್ವಾಳ: ಮಳೆ ನೀರಿನ ಅವಾಂತರಕ್ಕೆ ಬ್ರೇಕ್; ಜೋಗಿಬೆಟ್ಟು ರಸ್ತೆಯಲ್ಲಿ ಕಾಮಗಾರಿ ಆರಂಭ…!

error: Content is protected !!