ಜನ ಮನದ ನಾಡಿ ಮಿಡಿತ

Advertisement

ಕೆನರಾ ಸಮೂಹ ಶಿಕ್ಷಣ ಸಂಸ್ಥೆಗಳು–ಮಹಾತ್ಮ ಗಾಂಧಿ ಮ್ಯೂಸಿಯಂ ಉದ್ಘಾಟನೆ

ಮಂಗಳೂರು: ಡಿ 23, ಮಂಗಳೂರಿನ ಪ್ರತಿಷ್ಠಿತ ಕೆನರಾ ಸಮೂಹ ಶಿಕ್ಷಣ ಸಂಸ್ಥೆ ಮಂಗಳೂರು ಇದರ ಹಳೆ ವಿದ್ಯಾರ್ಥಿಗಳ ಜಾಗತಿಕ ಸಮ್ಮಿಲನ-2023 ಆದಿತ್ಯವಾರದಂದು ಕೆನರಾ ಪ್ರೌಢಶಾಲೆ,ಕೊಡಿಯಾಲ್ ಬೈಲ್ ಇಲ್ಲಿ ನೆರವೇರಿತು.

ಈ ಸಂದರ್ಭದಲ್ಲಿ ಶತಮಾನಗಳಷ್ಟು ಹಳೆಯದಾದ ಮಹಾತ್ಮ ಗಾಂಧಿ ಮ್ಯೂಸಿಯಂನ ಉದ್ಘಾಟನೆಯು ನೆರವೇರಿತು.ಭಾರತ ಸರಕಾರದ ಪುರಾತತ್ವ ಮತ್ತುಉತ್ಖನನ ಇಲಾಖೆಯ ಮಾಜಿ ನಿರ್ದೇಶಕರಾದ ಶ್ರೀ ರಾಮಚಂದ್ರ ಹೆಗಡೆ, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ಮಾಜಿ ಪ್ರಾಧ್ಯಾಪಕರು ಶ್ರೀ ಮುರುಗೇಶ್ ತುರುವೇಕೆರೆ, ಕೇರಳ ಸರ್ಕಾರದ ಪುರಾತತ್ವ ಇಲಾಖೆಯ ಡಾ.ವಿ.ಆರ್.ಶಾಜಿ, ಶ್ರೀ ಪ್ರಭಾಕರ ಕಿಣಿ , ಶ್ರೀ ರಾಮದಾಸ್ ಪ್ರಭು,ಮಹಾತ್ಮ ಗಾಂಧಿ ಮ್ಯೂಸಿಯಂನ ಪುನರ್ವಿನ್ಯಾಸಕ್ಕೆ ಕೊಡುಗೆ ನೀಡಿದ ಶ್ರೀ ಸುಜಯ್ ಲೋಬೋ ದೀಪ ಬೆಳಗಿಸಿ ಮ್ಯೂಸಿಯಂ ನ ಉದ್ಘಾಟನೆ ಮಾಡಿದರು.

ಮ್ಯೂಸಿಯಂ ನಿರ್ದೇಶಕರಾದ ಶ್ರೀ ಪಯ್ಯನೂರು ರಮೇಶ್ ಪೈ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಕೆನರಾ ಹಳೆ ವಿದ್ಯಾರ್ಥಿಗಳ ಜಾಗತಿಕ ಸಮಾವೇಶದ ದಿನ ಜರುಗಿದ ಈ ವಿಶಿಷ್ಟ ಪೂರ್ಣ ಕಾರ್ಯಕ್ರಮವು ಪುರಾತನ ವಸ್ತುಗಳು ಹಾಗೂ ಶಾಸನ ಶಾಸ್ತ್ರದ ಆಸಕ್ತಿ ಉಳ್ಳವರ ಮನಸೆಳೆಯಿತು. ಹಳೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಈ ಮ್ಯೂಸಿಯಂನ ವೀಕ್ಷಣೆಗೆ ಮುಕ್ತ ಅವಕಾಶವನ್ನು ನೀಡಲಾಯಿತು.


ಕನರಾ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ ವಾಸುದೇವ ಕಾಮತ್, ಕಾರ್ಯದರ್ಶಿ ಶ್ರೀ ಎಂ.ರಂಗನಾಥ್ ಭಟ್,ಸದಸ್ಯರಾದ ಶ್ರೀ ಸುರೇಶ್ ಕಾಮತ್ ,ಶ್ರೀ ಗೋಪಾಲಕೃಷ್ಣ ಶೆಣೈ CA ಎಂ.ವಾಮನ್ ಕಾಮತ್, ಶ್ರೀ ಬಸ್ತಿ ಪುರುಷೋತ್ತಮ ಶೆಣೈ, ಶ್ರೀ ಶಿವಾನಂದ ಶೆಣೈ, ಶ್ರೀ ಯೋಗೀಶ್ ಕಾಮತ್, ಶ್ರೀ ನರೇಶ್ ಶೆಣೈ, ಶ್ರೀಮತಿ ಅಶ್ವಿನಿ ಕಾಮತ್, ಶ್ರೀ ಗೋಪಿನಾಥ್ ಭಟ್, ಶ್ರೀ ಯೋಗೀಶ್ ಕಾಮತ್, ಆಡಳಿತ ಅಧಿಕಾರಿ ಡಾ. ದೀಪ್ತಿ ನಾಯಕ್, ಪಿ ಆರ್ ಒ ಶ್ರೀಮತಿ ಉಜ್ವಲ್ ಮಲ್ಯ, ಸಮ್ಮಿಲನದ ಉಸ್ತುವಾರಿ ಶ್ರೀ ಗೋಪಾಲಕೃಷ್ಣ ಶೆಟ್ಟಿ,ಕೆನರಾ ಸಹೋದರಿ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರುಗಳು, ಬೋಧಕ ಬೋಧಕೇತರ ಸಿಬ್ಬಂದಿ ವರ್ಗ,ಸಂಸ್ಥೆಯ ಹಳೆಯ ಹಿರಿಯ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಆಂಧ್ರಪದೇಶದಲ್ಲಿ ಫ್ಲೋರ್ ಮಾಸ್ಟರ್ಸ್ ಮೊದಲ ಫ್ಲಾಟ್ ಬ್ರೆಡ್ ಸ್ಥಾವರ; ರೂ. 100 ಕೋಟಿ ಹೂಡಿಕೆ, ರಫ್ತು ಆಧಾರಿತ ಉದ್ಯಮ..!

ಮುಲ್ಕಿ: ಮುಲ್ಕಿ ಬಸ್ ನಿಲ್ದಾಣದ ಬಳಿ ಬಸ್-ಕಾರು ಡಿಕ್ಕಿ; ಮಕ್ಕಳಿದ್ದ ಕಾರು ಅಪಾಯದಿಂದ ಪಾರು

ನ್ಯೂಯಾರ್ಕ್: ಅಮೆರಿಕ-ಇರಾನ್ ಮಿಲಿಟರಿ ವಿರಾಮದ ಪರಿಣಾಮ; ಕಚ್ಚಾ ತೈಲ ಬೆಲೆ ಇಳಿಕೆ, ಹಣದುಬ್ಬರಕ್ಕೂ ಬ್ರೇಕ್?

ನವದೆಹಲಿ: ಜಿರಳೆ ಹೋರಾಟಕ್ಕೆ ಕೊನೆಗೂ ಮಣಿದ ಕೇಂದ್ರ ಸರಕಾರ; ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜಿನಾಮೆ…!

ಮಂಗಳೂರು: ರೌಡಿಶೀಟರ್ ಮೇಲೆ ಮಾರಕಾಸ್ತ್ರದಿಂದ ಭೀಕರ ದಾಳಿ…!

ಬಂಟ್ವಾಳ: ಲಾವಣ್ಯ ಹತ್ಯೆ ಪ್ರಕರಣದ ಆರೋಪಿ ಚೇತನ್ ಆರೋಗ್ಯದಲ್ಲಿ ಸುಧಾರಣೆ..!

ಬಂಟ್ವಾಳ: ತ್ಯಾಜ್ಯ ನಿರ್ವಹಣೆ ಸಂಪೂರ್ಣ ಹದಗೆಟ್ಟು ಸಾರ್ವಜನಿಕರಲ್ಲಿ ಆತಂಕ..!

ಮಂಗಳೂರು: ಮಂತ್ರಾಲಯದ ಬಳಿ ಭೀಕರ ಅಪಘಾತ; ಯಕ್ಷಧ್ರುವ ಪಟ್ಲ ಫೌಂಡೇಷನ್ ಕಾರ್ಯದರ್ಶಿ ರವಿ ಶೆಟ್ಟಿ ನಿಧನ…!

ಬಂಟ್ವಾಳ: ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದಲ್ಲಿ ಅಗ್ನಿ ಅವಘಡ…..!

error: Content is protected !!