ದ.ಕ.ಜಿಲ್ಲೆಯ 14 ಅಲ್ ಬಿರ್ ಶಾಲೆಗಳ ಕಿಡ್ಸ್ ಫೆಸ್ಟ್ ಕಾರ್ಯಕ್ರಮವು ಜ.23 ಮಂಗಳವಾರ ಬೆಳಿಗ್ಗೆ 9 ಗಂಟೆಯಿಂದ ನಡೆಯಲಿದೆ ಎಂದು ಕಿಡ್ಸ್ ಫೆಸ್ಟ್ ಕಾರ್ಯಕ್ರಮದ ಅಧ್ಯಕ್ಷರಾದ ಡಿ.ಎ.ಉಸ್ಮಾನ್ ಹಾಜಿ ಏರ್ ಇಂಡಿಯಾ ಅವರು ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದರು.
ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರ ಸಹಿತ ಸುಮಾರು ಎರಡು ಸಾವಿರದಷ್ಟು ಜನರು ಸೇರಲಿರುವ ಈ ಕಾರ್ಯಕ್ರಮವನ್ನು ಸಮಸ್ತ ಕೇರಳ ಮುಷಾವರ ಸದಸ್ಯರಾದ ಉಸ್ಮಾನುಲ್ ಫೈಝಿ ಅವರು ಉದ್ಘಾಟಿಸಲಿದ್ದು ಅಂಗರಕರಿಯ ಮಸೀದಿಯ ಖತೀಬರಾದ ಸಯ್ಯದ್ ಅಕ್ರಮ್ ಆಲಿ ತಂಙಳ್ ಅವರು ದುವಾ ಆಶೀರ್ವಚನ ನೀಡಲಿದ್ದಾರೆ.
ಆದರ್ಶ್ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾದ ಮುಹಮ್ಮದ್ ಆಸಿಫ್ ಅವರು ಧ್ವಜಾರೋಹಣ ನೆರವೇರಿಸಲಿದ್ದು ಅಲ್ ಬಿರ್ ನಿರ್ದೇಶಕರಾದ ಕೆ.ಪಿ.ಮುಹಮ್ಮದ್, ಅಲ್ ಬಿರ್ ಜಿಲ್ಲಾ ಸಂಯೋಜಕರಾದ ಶುಕುರ್ ದಾರಿಮಿ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ಐ.ಕೆ.ಮೂಸ ದಾರಿಮಿ ಕಕ್ಕಿಂಜೆ,ರಫೀಕ್ ಹುದವಿ ಕೋಲಾರಿ,ಆಸಿಫ್ ಪರಂಪಳ್ಳಿ, ಅಬ್ದುಲ್ ಹಮೀದ್ ಅಸ್ಕಾಫ್, ಎಮ್.ಹೆಚ್.ಮುಹಿಯುದ್ದೀನ್ ಹಾಜಿ, ಅಬ್ದುಲ್ ಲತೀಫ್ ಗುರುಪುರ, ಶಾಫಿ ಮೂಲರಪಟ್ಣ, ಎಮ್.ಎ.ಎಸ್.ಆಸಿಫ್, ರಫೀಕ್ ಮಾಸ್ಟರ್, ಮಯ್ಯದ್ದಿ ಗುಂಡುಕಲ್, ಇಶಾಕ್ ಹಾಜಿ ತೋಡಾರ್ ಸಹಿತ ಹಲವಾರು ಮಂದಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದವರು ತಿಳಿಸಿದರು.
ಅಲ್ ಬಿರ್ ಶಿಕ್ಷಣ ಸಂಸ್ಥೆಗಳಲ್ಲಿ ಉತ್ತಮ ಗುಣಮಟ್ಟದ ಲೌಕಿಕ ಹಾಗೂ ಧಾರ್ಮಿಕ ಶಿಕ್ಷಣವನ್ನು ನೀಡಲಾಗುತ್ತಿದ್ದು ರಾಜ್ಯದಲ್ಲಿ ಮೂರು ಸಾವಿರದಷ್ಟು ಶಾಲೆಗಳನ್ನು ಪ್ರಾರಂಭಿಸಲು ಅವಕಾಶ ಸಿಕ್ಕಿದೆ, ಇದು ಮೂರನೇ ಫೆಸ್ಟ್ ಆಗಿದ್ದು ಮೊದಲ ಫೆಸ್ಟ್ ಅಡ್ಡೂರು, ಎರಡನೇ ಫೆಸ್ಟ್ ಉಪ್ಪಿನಂಗಡಿಯಲ್ಲಿ ನಡೆದಿತ್ತೆಂದು ಮಾಹಿತಿ ನೀಡಿದ ಅವರು, ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ವಿಭಾಗದಲ್ಲಿ ವಿವಿಧ ಸ್ಪರ್ಧೆಗಳು ನಡೆಯಲಿದೆ ಎಂದು ಮಾಹಿತಿ ನೀಡಿದರು.
ಕಿಡ್ಸ್ ಫೆಸ್ಟ್ ಕಾರ್ಯಕ್ರಮದ ಕಾರ್ಯದರ್ಶಿ ಅಬ್ದುಲ್ ಸಲಾಮ್ ಬೂಟ್ ಬಝಾರ್, ಕೋಶಾಧಿಕಾರಿ ಎಮ್.ಜಿ.ಮುಹಮ್ಮದ್ ಹಾಜಿ ಹಾಗೂ ಅಲ್ ಬಿರ್ ಸಂಯೋಜಕರಾದ ಆರಿಫ್ ಕಮ್ಮಾಜೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಘಟಕದ ನಾಲ್ಕನೇ ವರ್ಷದ ದುಬೈ "ಗಡಿನಾಡ ಉತ್ಸವ -2025" ಕಾರ್ಯಕ್ರಮವು ನಗರದ…
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಉಂಟಾಗಿ 11ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು…