ಮಂಗಳೂರು: ಪವಿತ್ರ ಹಜ್ ಯಾತ್ರೆ ಕೈಗೊಳ್ಳಲಿರುವ ಮೊಹಮ್ಮದ್ ಶರೀಫ್ ದೇರಳಕಟ್ಟೆ ಅವರಿಗೆ ಮಂಗಳೂರು ಗೆಳೆಯರ ಬಳಗದ ವತಿಯಿಂದ ಸೋಮವಾರ ನಗರದ ಬಂದರ್ ಮುಸ್ಲಿಂ ಸೆಂಟ್ರಲ್ ಸಮಿತಿ ಸಭಾಂಗಣದಲ್ಲಿ ವಿನೂತನ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಕಂದಕ್ ಬದ್ರಿಯಾ ಜುಮಾ ಮಸೀದಿ ಖತೀಬ್ ಅಬೂಬಕ್ಕರ್ ಸಿದ್ದೀಕ್ ಅವರು ದುಆ ನೆರವೇರಿಸಿ ಹಜ್ ಕರ್ಮಗಳ ಬಗ್ಗೆ ಸಂದೇಶ ನೀಡಿದರು. ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ನಾಸೀರ್ ಲಕ್ಕಿಸ್ಟಾರ್, ಸೆಂಟ್ರಲ್ ಕಮಿಟಿ ಕಾರ್ಯದರ್ಶಿ ಹಾಜಿ ಮೊಹಮ್ಮದ್ ಹನೀಫ್, ಮ.ನ.ಪಾ ಸದಸ್ಯರಾದ ಅಬ್ದುಲ್ ರವೂಫ್ ಬಜಾಲ್, ಸಂಶುದ್ದೀನ್ ಕುದ್ರೋಳಿ, ಮಾಜಿ ಮೇಯರ್ ಕೆ.ಅಶ್ರಫ್ ಮಾತನಾಡಿದರು.
ಕಾರ್ಯಕ್ರದಲ್ಲಿ ಮೂಡಾ ಸದಸ್ಯ ಅದ್ದು ಕೃಷ್ಣಾಪುರ, ಮ.ನ.ಪಾ ಸದಸ್ಯೆ ಝೀನತ್ ಸಂಶುದ್ದೀನ್, ಸುರತ್ಕಲ್ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಅಶ್ರಫ್ ಕಾನ, ಫುಟ್ ಬಾಲ್ ಜಿಲ್ಲಾಧ್ಯಕ್ಷ ಡಿ.ಎಂ.ಅಸ್ಲಾಂ, ವಕೀಲ ಮುಖ್ತಾರ್, ಸಿ.ಎಂ.ಹನೀಫ್, ನಝೀರ್ ಬಜಾಲ್, ಸಂಶುದ್ದೀನ್ ಬಂದರ್, ಯು.ಬಿ.ಸಲೀಂ ಉಳ್ಳಾಲ, ಡಿ.ಎಂ.ಮುಸ್ತಫಾ, ಆರೀಫ್ ಬಂದರ್, ಇಮ್ರಾನ್ ಎ.ಆರ್, ಹೈದರ್ ಬೋಳಾರ್, ಮುಸ್ತಫಾ ಹರೇಕಳ, ಫಾರೂಖ್ ಪಾಂಡೇಶ್ವರ, ಸಿರಾಜ್ ಕಂದಕ್, ಹೈದರ್ ಕಂದಕ್, ಫೈಝಲ್ ಕಂದಕ್, ಸಿದ್ದೀಕ್ ಕಂದಕ್, ಅಲ್ತಾಫ್ ಕಂದಕ್, ಬದ್ರುದ್ದೀನ್ ಕಂದಕ್, ಆರೀಫ್, ತೌಸೀಫ್, ಆಸೀಫ್ ಕಂದಕ್, ಶಾಝ್, ಮುಖ್ತಾರ್ ಕಂದಕ್, ರಹೀಂ, ತ್ವಾಹ ಕಂದಕ್, ಝಹೀರ್ ಕಂದಕ್, ನೌಶೀರ್, ಸಲೀಂ, ಕಬೀರ್, ಕೆ.ಪಿ.ಮೊಯಿದ್ದೀನ್ ಕಂದಕ್, ಜುನೈದ್ ಪಾಂಡೇಶ್ವರ, ಮುನೀರ್ ಮುಕ್ಕಚ್ಚೇರಿ, ಮುಸ್ತಫಾ ಕಸೈಗಲ್ಲಿ, ಎನ್.ಕೆ.ಅಬೂಬಕ್ಕರ್, ಸ್ವಾಲಿ ಕಂದಕ್, ಹನೀಫ್ ಬಜಾಲ್ ಮತ್ತಿತರರು ಉಪಸ್ಥಿತರಿದ್ದರು.
ಮ.ನ.ಪಾ ಸದಸ್ಯ ಅಬ್ದುಲ್ ಲತೀಫ್ ಕಂದಕ್ ಸ್ವಾಗತಿಸಿದರು. ಮನ್ಸೂರ್ ಕುದ್ರೋಳಿ ವಂದಿಸಿದರು.
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…