ಜನ ಮನದ ನಾಡಿ ಮಿಡಿತ

Advertisement

ಕರ್ನಾಟಕ ಜಾನಪದ ಪರಿಷತ್ತು ನೇತೃತ್ವದಲ್ಲಿ ಮೇ. ೨೮ ರಂದು ರಾಜ್ಯಮಟ್ಟದ ಒಂದು ದಿನದ ಅಧ್ಯಯನ ಶಿಬಿರ

ಶಿವಮೊಗ್ಗ :-ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಸಮಿತಿ ಮತ್ತು ಕುವೆಂಪು ವಿ.ವಿ. ಕನ್ನಡ ಅಧ್ಯಾಪಕರ ವೇದಿಕೆ ಸಹಯೋಗದಲ್ಲಿ ಮೇ ೨೮ ರಂದು ಮಂಗಳವಾರ ಬೆಳಿಗ್ಗೆ 10 ರಿಂದ ಸಂಜೆಯ ವರೆಗೆ ಜಾನಪದ ದಿಕ್ಕು-ದೆಸೆ ವಿಚಾರವಾಗಿ ಒಂದು ದಿನದ ರಾಜ್ಯ ಮಟ್ಟದ ಜಾನಪದ ಅಧ್ಯಯನ ಶಿಬಿರ ಏರ್ಪಡಿಸಲಾಗಿದೆ.


‌‌‌ ಸಹ್ಯಾದ್ರಿ ವಿಜ್ಞಾನ ಕಾಲೇಜು ಆವರಣದಲ್ಲಿರುವ ಡಾ. ರಾಧಾಕೃಷ್ಣ ಸಭಾಂಗಣ ದಲ್ಲಿ ಕಾರ್ಯಕ್ರಮ ನಡೆಯಲಿದೆ. ಕುವೆಂಪು ವಿ.ವಿ. ಕುಲಪತಿಗಳಾದ ಪ್ರೊ. ಶರತ್ ಅನಂತಮೂರ್ತಿ ಉದ್ಘಾಟಿಸಲಿದ್ದಾರೆ. ಹಂಪಿ ಕನ್ನಡ ವಿ.ವಿ. ವಿಶ್ರಾಂತ ಕುಲಪತಿಗಳು, ಕರ್ನಾಟಕ ಜಾನಪದ ಪರಿಷತ್ತು ರಾಜ್ಯ ಕಾರ್ಯಾಧ್ಯಕ್ಷರಾದ ಡಾ. ಹಿ. ಶಿ. ಬೋರಲಿಂಗಯ್ಯ, ಪ್ರೊ. ಎನ್. ರಾಜೇಶ್ವರಿ, ಪ್ರಿನ್ಸಿಪಾಲರು, ಸಹ್ಯಾದ್ರಿ ವಿಜ್ಞಾನ ಕಾಲೇಜು, ಡಾ. ಸಬಿತಾ ಬನ್ನಾಡಿ, ಅಧ್ಯಕ್ಷರು, ಕನ್ನಡ ಅಧ್ಯಾಪಕರ ವೇದಿಕೆ ಅವರು ಭಾಗವಹಿಸಲಿದ್ದಾರೆ.
ಮೊದಲ ಗೋಷ್ಠಿಯಲ್ಲಿ ಮಂಗಳೂರಿನ ಡಾ. ವಿಶ್ವನಾಥ ಬದಿಕಾನೆ ಅವರು ಜಾನಪದ ಸ್ವರೂಪ ಮತ್ತು ಮಹತ್ವ ವಿಚಾರವಾಗಿ, ಬಳ್ಳಾರಿಯ ಡಾ. ಅರುಣ್ ಜೋಳದ ಕೂಡ್ಲಿಗಿ ಅವರು ಜಾನಪದ ಅಧ್ಯಯನದ ಸಾಧ್ಯತೆ ವಿಚಾರವಾಗಿ ಮಾತನಾಡಲಿದ್ದಾರೆ. ಡಾ. ಜಿ.ಆರ್. ಲವ ಸಮನ್ವಯ ಕಾರರಾಗಿರುತ್ತಾರೆ.
ಗೋಷ್ಠಿ 2 ರಲ್ಲಿ ಡಾ. ಎಸ್. ಎಂ. ಮುತ್ತಯ್ಯ ಅವರು ಜಾನಪದ ಅನ್ವಯಿಕತೆಯ ಸಾಧ್ಯತೆಗಳು, ಡಾ. ಮೊಗಳ್ಳಿ ಗಣೇಶ್ ಅವರು ಜಾನಪದ ಅಧ್ಯಯನದ ಇತ್ತೀಚಿನ ಬೆಳವಣಿಗೆಗಳು ವಿಚಾರವಾಗಿ ಮಾತನಾಡಲಿದ್ದಾರೆ. ಡಾ. ಜಿ. ಕೆ. ಪ್ರೇಮಾ ಸಮನ್ವಯ ಕಾರರಾಗಿ ಕಾರ್ಯನಿರ್ವಹಿಸಲಿದ್ದಾರೆ. ಸಂವಾದ, ಸಮಾರೋಪ, ಪ್ರಮಾಣ ಪತ್ರ ವಿತರಣೆ ನಡೆಯಲಿದೆ.
ಅಧ್ಯಯನ ಶಿಬಿರದಲ್ಲಿ ಅಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು, ಕಜಾಪ ತಾಲ್ಲೂಕು, ಹೋಬಳಿ ಪದಾಧಿಕಾರಿಗಳು, ದ್ವಿತೀಯ ಬಿ. ಎ. ವಿದ್ಯಾರ್ಥಿಗಳು, ಸ್ನಾತಕೋತ್ತರ ಪದವಿ ತರಗತಿಗಳ ಕನ್ನಡ ಐಚ್ಛಿಕ ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶವಿದೆ. ಆಸಕ್ತರು ಹೆಸರು, ವಿಳಾಸ, ಕಾಲೇಜು ಹೆಸರು, ದೂರವಾಣಿ ಸಂಖ್ಯೆ ಜೊತೆಯಲ್ಲಿ ನೋಂದಾಯಿಸಿಕೊಳ್ಳಲು ಕಜಾಪ ಜಿಲ್ಲಾ ಅಧ್ಯಕ್ಷರು ಮನವಿ ಮಾಡಿದ್ದಾರೆ. ದೂರವಾಣಿ ಸಂಖ್ಯೆ 9449552795, ಡಾ. ಎಸ್. ಎಂ. ಮುತ್ತಯ್ಯ, ಡಾ. ಮೋಹನ್ ಚಂದ್ರಗುತ್ತಿ, ಡಾ. ಜಿ. ಆರ್. ಲವ, ಡಾ. ಜಿ. ಕೆ. ಪ್ರೇಮಾ, ಅವರಲ್ಲಿ ಹೆಸರು ನೋಂದಾಯಿಸಲು ಡಿ. ಮಂಜುನಾಥ ಪ್ರಕಟಣೆಯಲ್ಲಿ ಕೋರಿದ್ದಾರೆ.

Leave a Reply

Your email address will not be published. Required fields are marked *

ಉಡುಪಿ : ಕಾಪುವಿನಲ್ಲಿ ಭೀಕರ ಅಪಘಾತ…!

ಬಂಟ್ವಾಳ : ಸಜಿಪದಲ್ಲಿ ಭೀಕರ ಅಪಘಾತ…!

ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ….!

ಬಂಟ್ವಾಳ: ಬಡಗಬೆಳ್ಳೂರಿನಲ್ಲಿ ಕುಸಿದು ಬಿದ್ದ ಸೇತುವೆ; ಜನ ಸಂಚಾರಕ್ಕೆ ಭಾರೀ ಸಂಕಷ್ಟ…..!

ಬಂಟ್ವಾಳ: ಜ್ವರದಿಂದ ಬಳಲುತ್ತಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ನಿಧನ….!

ಬಂಟ್ವಾಳ: ಮಿನಿ ವಿಧಾನಸೌಧ ಮುಂಭಾಗದ ಕ್ಯಾಂಟೀನ್‌ನಲ್ಲಿ ಅನಿಲ ಸೋರಿಕೆ ಆತಂಕ….!

ಕಾಸರಗೋಡು: ಸಮುದ್ರದಲ್ಲಿ ಕೊಚ್ಚಿಹೋದ ಇಬ್ಬರು ಕಾಲೇಜು ವಿದ್ಯಾರ್ಥಿಗಳು..!

ಕಡಬ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕಪ್ ಪಲ್ಟಿ..!

ಕಡಬ: ಗೋಳಿತ್ತಡಿ-ಏಣಿತ್ತಡ್ಕ-ಕುದುಲೂರು ಸಂಪರ್ಕಿತ ರಸ್ತೆ; ರಸ್ತೆಯುದ್ದಕ್ಕೂ ಹೊಂಡಮಯ..!

error: Content is protected !!