ಆಕಾಶದಲ್ಲಿ ಜನರೇ ಇಲ್ಲದೆ ಹಾರಿ ಬಂದ ಪ್ಯಾರಾಚ್ಯೂಟ್ ಒಂದು ಗ್ರಾಮದ ಹೊಲವೊಂದರಲ್ಲಿ ಲ್ಯಾಂಡ್ ಆದ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಭೀಮಾತೀರದ ಮರಗೂರು ಗ್ರಾಮದಲ್ಲಿ ನಡೆದಿದೆ.
ಸ್ಥಳಕ್ಕೆ ಓಡಿ ಬಂದು ಪರಿಶೀಲಿಸಿದ ಗ್ರಾಮಸ್ಥರು ಬಿದ್ದಿರುವ ಪ್ಯಾರಾಚ್ಯೂಟ್‌ನಲ್ಲಿದ್ದ ವಸ್ತುವನ್ನು ನೋಡಿ ಭಯಗೊಂಡಿದ್ದಾರೆ. ಬಾಕ್ಸ್ ಒಂದರಲ್ಲಿ ಜೋಡಿಸಲಾದ ಎಲೆಕ್ಟ್ರಾನಿಕ್ ಉಪಕರಣ ನೆಲಕ್ಕೆ ಬಿದ್ದು ಪುಡಿಯಾಗಿದ್ದರೂ ಅದರಲ್ಲಿ ಸಿಗ್ನಲ್ ಆಗುತ್ತಿತ್ತು. ಹೀಗಾಗಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ. ಕೂಲಂಕುಶವಾಗಿ ನಡೆಸಿದ ಪರಿಶೀಲನೆ ಬಳಿಕ ಇದು ಹೈದರಾಬಾದ್ ಮೂಲದ ಟಾಟ ಇನ್ಸ್ಟಿಟ್ಯೂಟ್ ಆಫ್ ಫಂಡಮೆAಟಲ್ ರಿಸರ್ಚ್ ಸೆಂಟರ್ ಹಾರಿಸಿದ್ದ ಉಪಕರಣ ಅನ್ನೋದು ಗೊತ್ತಾಗಿದೆ. ಹವಾಮಾನ ಹಾಗೂ ವಾತಾವರಣದ ಅಧ್ಯಯನಕ್ಕಾಗಿ ಇದನ್ನು ಉಡಾವಣೆ ಮಾಡಲಾಗಿದ್ದು, ನಿಯಂತ್ರಣ ಕಳೆದುಕೊಂಡು ಭೀಮಾತೀರದ ಮರಗೂರಿನ ಹೊಲಕ್ಕೆ ಬಿದ್ದಿತ್ತು. ಈ ಬಗ್ಗೆ ವಿಯಯಪುರ ಜಿಲ್ಲಾಡಳಿತ ಸಂಶೋಧನಾ ಸಂಸ್ಥೆಗೆ ಮಾಹಿತಿ ನೀಡಿದ್ದು, ಅಲ್ಲಿನ ವಿಜ್ಞಾನಿಗಳು ಈ ಉಪಕರಣ ತೆಗೆದುಕೊಂಡು ಹೋಗಲಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಯತ್ನ ಪ್ರಕರಣದ ಆರೋಪಿಗಳಿಬ್ಬರ ಮೃತದೇಹಗಳು ಬೈಂದೂರು ತಾಲೂಕಿನ ಗೋಳಿಹೊಳೆ ಗ್ರಾಮದ ಚಾರ್ಸಲ್ ಪ್ರದೇಶದ…
ಉಡುಪಿ ನಗರದ ಹನುಮಾನ್ ಪೆಟ್ರೋಲ್ ಬಂಕ್ ಹಿಂಭಾಗ ನಿಲ್ಲಿಸಿದ್ದ ಶ್ರೀ ದುರ್ಗಾಂಬ ಬಸ್‌ವೊಂದು ಕಳವಾಗಿರುವ ಘಟನೆ ಸೆ.29ರಂದು ಬೆಳಕಿಗೆ ಬಂದಿದ್ದು,…
ಮಂಗಳೂರು ವಿಶ್ವವಿದ್ಯಾನಿಲಯದ 16 ಸ್ನಾತಕೋತ್ತರ ಪದವಿ ಕೋರ್ಸ್‌ಗಳನ್ನು 2026-27ನೇ ಶೈಕ್ಷಣಿಕ ಸಾಲಿನಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಕೋರ್ಸ್‌ಗಳನ್ನು ಮುಂದುವರಿಸಲು ಅಗತ್ಯವಿರುವಷ್ಟು ವಿದ್ಯಾರ್ಥಿಗಳು…
ಮಂಗಳೂರು ಮತ್ತು ಉಡುಪಿ ಸೇರಿದಂತೆ ಕರಾವಳಿ ಕರ್ನಾಟಕ ಭಾಗದಲ್ಲಿ ಕರ್ನಾಟಕ ಹೈಕೋರ್ಟ್‌ನ ಸರ್ಕ್ಯೂಟ್ ಬೆಂಚ್ ಅಥವಾ ಶಾಶ್ವತ ಪೀಠ ಸ್ಥಾಪಿಸುವ…
ಮಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು ಪ್ರಯಾಣಿಸುತ್ತಿದ್ದ ಕಾರಿಗೆ ಗೂಡ್ಸ್ ಆಟೋ ರಿಕ್ಷಾ ಡಿಕ್ಕಿಯಾಗಿ, ತೀವ್ರವಾಗಿ ಗಾಯಗೊಂಡಿದ್ದ ಆಟೋ…
ನೇಪಾಳದಲ್ಲಿ ಕಳೆದ ಕೆಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪ್ರವಾಹ ಹಾಗೂ ಭೂಕುಸಿತ ಸಂಭವಿಸಿದ್ದು, ಸೆ.24ರಿಂದ ಈವರೆಗೆ ಕನಿಷ್ಠ…