ಜನ ಮನದ ನಾಡಿ ಮಿಡಿತ

Advertisement

ಹೊಲವೊಂದರಲ್ಲಿ ಲ್ಯಾಂಡ್ ಆದ ಪ್ಯಾರಾಚ್ಯೂಟ್ವಿ..!

ಆಕಾಶದಲ್ಲಿ ಜನರೇ ಇಲ್ಲದೆ ಹಾರಿ ಬಂದ ಪ್ಯಾರಾಚ್ಯೂಟ್ ಒಂದು ಗ್ರಾಮದ ಹೊಲವೊಂದರಲ್ಲಿ ಲ್ಯಾಂಡ್ ಆದ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಭೀಮಾತೀರದ ಮರಗೂರು ಗ್ರಾಮದಲ್ಲಿ ನಡೆದಿದೆ.

ಸ್ಥಳಕ್ಕೆ ಓಡಿ ಬಂದು ಪರಿಶೀಲಿಸಿದ ಗ್ರಾಮಸ್ಥರು ಬಿದ್ದಿರುವ ಪ್ಯಾರಾಚ್ಯೂಟ್‌ನಲ್ಲಿದ್ದ ವಸ್ತುವನ್ನು ನೋಡಿ ಭಯಗೊಂಡಿದ್ದಾರೆ. ಬಾಕ್ಸ್ ಒಂದರಲ್ಲಿ ಜೋಡಿಸಲಾದ ಎಲೆಕ್ಟ್ರಾನಿಕ್ ಉಪಕರಣ ನೆಲಕ್ಕೆ ಬಿದ್ದು ಪುಡಿಯಾಗಿದ್ದರೂ ಅದರಲ್ಲಿ ಸಿಗ್ನಲ್ ಆಗುತ್ತಿತ್ತು. ಹೀಗಾಗಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ. ಕೂಲಂಕುಶವಾಗಿ ನಡೆಸಿದ ಪರಿಶೀಲನೆ ಬಳಿಕ ಇದು ಹೈದರಾಬಾದ್ ಮೂಲದ ಟಾಟ ಇನ್ಸ್ಟಿಟ್ಯೂಟ್ ಆಫ್ ಫಂಡಮೆAಟಲ್ ರಿಸರ್ಚ್ ಸೆಂಟರ್ ಹಾರಿಸಿದ್ದ ಉಪಕರಣ ಅನ್ನೋದು ಗೊತ್ತಾಗಿದೆ. ಹವಾಮಾನ ಹಾಗೂ ವಾತಾವರಣದ ಅಧ್ಯಯನಕ್ಕಾಗಿ ಇದನ್ನು ಉಡಾವಣೆ ಮಾಡಲಾಗಿದ್ದು, ನಿಯಂತ್ರಣ ಕಳೆದುಕೊಂಡು ಭೀಮಾತೀರದ ಮರಗೂರಿನ ಹೊಲಕ್ಕೆ ಬಿದ್ದಿತ್ತು. ಈ ಬಗ್ಗೆ ವಿಯಯಪುರ ಜಿಲ್ಲಾಡಳಿತ ಸಂಶೋಧನಾ ಸಂಸ್ಥೆಗೆ ಮಾಹಿತಿ ನೀಡಿದ್ದು, ಅಲ್ಲಿನ ವಿಜ್ಞಾನಿಗಳು ಈ ಉಪಕರಣ ತೆಗೆದುಕೊಂಡು ಹೋಗಲಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

Leave a Reply

Your email address will not be published. Required fields are marked *

ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ….!

ಬಂಟ್ವಾಳ: ಬಡಗಬೆಳ್ಳೂರಿನಲ್ಲಿ ಕುಸಿದು ಬಿದ್ದ ಸೇತುವೆ; ಜನ ಸಂಚಾರಕ್ಕೆ ಭಾರೀ ಸಂಕಷ್ಟ…..!

ಬಂಟ್ವಾಳ: ಜ್ವರದಿಂದ ಬಳಲುತ್ತಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ನಿಧನ….!

ಬಂಟ್ವಾಳ: ಮಿನಿ ವಿಧಾನಸೌಧ ಮುಂಭಾಗದ ಕ್ಯಾಂಟೀನ್‌ನಲ್ಲಿ ಅನಿಲ ಸೋರಿಕೆ ಆತಂಕ….!

ಕಾಸರಗೋಡು: ಸಮುದ್ರದಲ್ಲಿ ಕೊಚ್ಚಿಹೋದ ಇಬ್ಬರು ಕಾಲೇಜು ವಿದ್ಯಾರ್ಥಿಗಳು..!

ಕಡಬ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕಪ್ ಪಲ್ಟಿ..!

ಕಡಬ: ಗೋಳಿತ್ತಡಿ-ಏಣಿತ್ತಡ್ಕ-ಕುದುಲೂರು ಸಂಪರ್ಕಿತ ರಸ್ತೆ; ರಸ್ತೆಯುದ್ದಕ್ಕೂ ಹೊಂಡಮಯ..!

ಬಂಟ್ವಾಳ: ಪಾಣೆಮಂಗಳೂರು ಕಲ್ಲುರ್ಟಿ ದೈವಸ್ಥಾನದ ಮುಂಭಾಗದ ಸರ್ವೀಸ್ ರಸ್ತೆಯಲ್ಲಿ ಹೊಂಡಗುಂಡಿ…!

ಉಡುಪಿ: ಮಾದಕ ದ್ರವ್ಯ ಸಾಗಾಟ- ಮಾರಾಟ ಪ್ರಕರಣ: ಪಿಐಟಿ- ಎನ್‌ಡಿಪಿಎಸ್ ಕಾಯ್ದೆಯಡಿ ಆರೋಪಿಯ ಬಂಧನ…!

error: Content is protected !!