ಜನ ಮನದ ನಾಡಿ ಮಿಡಿತ

Advertisement

ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರಿ ಕ್ಷೇತ್ರದಲ್ಲಿ ತೆನೆ ಹಬ್ಬ ಆಚರಣೆ

ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರಿ ಕ್ಷೇತ್ರದಲ್ಲಿ ತೆನೆ ಹಬ್ಬ ಆಚರಣೆ ಮಾಡಲಾಯಿತು, ಪ್ರತಿ ವರ್ಷವೂ ಗಣೇಶ ಚತುರ್ಥಿಯ ಎರಡು ದಿನದ ಮೊದಲು ಈ ಆಚರಣೆಯನ್ನು ನಡೆಸಲಾಗುವುದು. ಈ ದಿನವನ್ನು ಕುರಲ್​​​​​​ ಪರ್ಬ ಎಂದು ಕರೆಯಾಲಾಗುತ್ತದೆ. ಜತೆಗೆ ಇದನ್ನು ಪುರಲ್ದ ಕುರಲ್​​ ಎಂದು ಕರೆಯಲಾಗುತ್ತದೆ. ಸಾವಿರ ಸೀಮೆಯ ಒಡತಿ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿಯ ಮುಂದೆ ಈ ಕುರಲ್​​​ನ್ನು ಇಟ್ಟು, ಇಡಿ ಊರಿಗೆ ಒಳ್ಳೆಯದನ್ನು ಮಾಡಿ, ಸುಖ ಸಂತೋಷವನ್ನು ನೀಡಿ. ಮಳೆ ಬೆಳೆ ಒಳ್ಳೆಯ ರೀತಿಯಲ್ಲಿ ಆಗಲಿ ಎಂದು ಪ್ರಾರ್ಥನೆ ಮಾಡಲಾಗುತ್ತದೆ.

 

ತೆನೆಯನ್ನು ದೇವಾಲಯದ ಧ್ವಜಸ್ತಂಬದ ಮುಂಭಾಗದಲ್ಲಿ ಪ್ರಾರ್ಥನೆ ಮಾಡಿ, ಪುರೋಹಿತರ ನೇತೃತ್ವದಲ್ಲಿ ತೆನೆಯನ್ನು ದೇವಾಲಯದ ಒಳಗೆ ತೆಗೆದುಕೊಂಡು ಹೋಗಿ ತಾಯಿ ಶ್ರೀ ರಾಜರಾಜೇಶ್ವರಿ ಮುಂದೆ ಇಟ್ಟು ಪೂಜೆ ಮಾಡಲಾಗುತ್ತದೆ. ವಿಶೇಷ ಪೂಜೆಗಳು ನಡೆದು ನಂತರ ಅದನ್ನು ಭಕ್ತರಿಗೆ ನೀಡಲಾಗುತ್ತದೆ. ಇದರ ಜತೆಗೆ Let’s ಸೀಮೆಯ ಭಕ್ತಾಧಿಗಳು ದೇವರಿಗೆಮಾಡಿದ ನೈವೇದ್ಯವನ್ನು ಮನೆಮನೆಗೆ ಕೊಂಡು ಪೊಳಲಿ ಭಾಗದ ಮನೆ ಮನೆಯಲ್ಲಿ ಪುದ್ದರ್​​​ ಆಚರಣೆ ಮಾಡಲಾಗುತ್ತದೆ.

ಈ ಕಾರ್ಯಕ್ರಮದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕ ಮಾಧವ ಭಟ್ ಪೊಳಲಿ, ಅನುವಂಶಿಕ ಮೊಕ್ತೇಸರರಾದ ಡಾ. ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ದೇವಾಲಯದ ಅರ್ಚಕ ನಾರಾಯಣ ಭಟ್​, ರಾಮ್​​​ ಭಟ್​​, ​ಪರಮೇಶ್ವರ ಭಟ್ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್, ಹಾಗೂ ಭಕ್ತರು ಮೊದಲಾದವರು ಭಾಗವಹಿಸಿದರು.

Leave a Reply

Your email address will not be published. Required fields are marked *

ಉಡುಪಿ: ಕೊಲೆ ಯತ್ನ ಪ್ರಕರಣದ ಇಬ್ಬರು ಆರೋಪಿಗಳ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ…!

ಉಡುಪಿ: ಉಡುಪಿಯಲ್ಲಿ ನಿಲ್ಲಿಸಿದ್ದ ಶ್ರೀ ದುರ್ಗಾಂಬ ಬಸ್ ಕಳವು: ಮುದ್ದಾಡಿ ಹಾಡಿಯಲ್ಲಿ ಪತ್ತೆ…!

ಮಂಗಳೂರು: ವಿದ್ಯಾರ್ಥಿಗಳ ಕೊರತೆಯಿಂದ ಮಂಗಳೂರು ವಿವಿಯ 16 ಪಿಜಿ ಕೋರ್ಸ್‌ಗಳು ಸ್ಥಗಿತ.

ಮಂಗಳೂರು: ಮಂಗಳೂರು-ಉಡುಪಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಹೊಸ ಆಶಾಕಿರಣ

ಮಂಗಳೂರು: ನ್ಯಾಯಾಧೀಶರ ಕಾರಿಗೆ ಗೂಡ್ಸ್ ಆಟೋ ಡಿಕ್ಕಿ: ಗಾಯಗೊಂಡಿದ್ದ ಚಾಲಕ ಸಾವು

ಕಠ್ಮಂಡು: ನೇಪಾಳದಲ್ಲಿ ಭಾರೀ ಮಳೆ, ಪ್ರವಾಹ-ಭೂಕುಸಿತಕ್ಕೆ 27 ಮಂದಿ ಬಲಿ; ನಾಲ್ವರು ನಾಪತ್ತೆ…!

ಕಾರ್ಕಳ: ಸುವರ್ಣ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ಮುಳುಗಿ ಮೃತ್ಯು…!

ಬಂಟ್ವಾಳ: ಮಾಣಿ ಭಾಗದಲ್ಲಿ ಮಾರ್ಗಸೂಚಿ ಫಲಕಗಳ ಕೊರತೆ: ವಾಹನ ಸವಾರರಿಗೆ ಗೊಂದಲ, ಅಪಘಾತದ ಆತಂಕ

ಬಂಟ್ವಾಳ: ಕಲ್ಲಡ್ಕ ಫ್ಲೈಓವರ್‌ನಲ್ಲಿ ದನ ಸಾಗಿಸುತ್ತಿದ್ದ ಲಾರಿ ತಡೆ: ಪೊಲೀಸರಿಂದ ವಾಹನ ವಶಕ್ಕೆ

error: Content is protected !!