ಅದರಂತೆ, ಕಗ್ಗಲಿಪುರ ಠಾಣೆಗೆ ಬಂದ ಮಹಿಳೆ ತನ್ನ ಮೇಲೆ ನಡೆದ ಎರಡು ವರ್ಷಗಳ ಹಿಂದೆ ನಡೆದಿರುವ ಲೈಂಗಿಕ ದೌರ್ಜನ್ಯ ಮತ್ತು ಹನಿಟ್ರ್ಯಾಪ್‌ಗೆ ಬಳಸಿಕೊಂಡಿರುವ ಕುರಿತು ದೂರು ಕೊಟ್ಟಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ದೂರು ಪರಿಶೀಲಿಸಿದ ಠಾಣೆಯ ಅಧಿಕಾರಿಗಳು, ನಂತರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯಾಗಿ ಶಾಸಕ ಮುನಿರತ್ನ ಸೇರಿದಂತೆ 7 ಜನರ ವಿರುದ್ಧ ದೂರು ದಾಖಲಾಗಿದೆ. 2020 ರಿಂದ ನಡೆದ ಘಟನೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಸಮಾಜ ಸೇವಾ ಕಾರ್ಯದ ಮೂಲಕ ಮುನಿರತ್ನ ಅವರಿಗೆ ಪರಿಚಯವಾಗಿದ್ದ ಮಹಿಳೆ, ನಂತರ ಅವರಿಗೆ ಹತ್ತಿರವಾಗಿ ಬಿಜೆಪಿ ಸೇರಿಕೊಂಡು ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಮಹಿಳೆಯನ್ನು ಕಗ್ಗಲಿಪುರ ಠಾಣೆ ವ್ಯಾಪ್ತಿಯಲ್ಲಿರುವ ರೆಸಾರ್ಟ್‌ಗೆ ಕರೆದೊಯ್ಯುತ್ತಿದ್ದ ಮುನಿರತ್ನ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮುನಿರತ್ನ ಜೈಲಿನ ಭವಿಷ್ಯ ಇಂದು ನಿರ್ಧಾರವಾಗಲಿತ್ತು. ಅಷ್ಟರಲ್ಲಿ ಮತ್ತೊಂದು ಕೇಸ್ ದಾಖಲಾಗಿದೆ. ಹೌದು ಮುನಿರತ್ನಗೆ ಗುತ್ತಿಗೆದಾರ ಚಲುವರಾಜುಗೆ ವಂಚಿಸಿದ್ದ ಪ್ರಕರಣದಲ್ಲಿ ರಿಲೀಫ್ ಸಿಕ್ಕಿದ್ದರೂ, ಜಾತಿ ನಿಂದನೆ ಕೇಸ್ ನ ಜಾಮೀನು ಅರ್ಜಿಯ ಆದೇಶ ಇಂದು ನೀಡಬೇಕಿತ್ತು.