ಜನ ಮನದ ನಾಡಿ ಮಿಡಿತ

Advertisement

ಭತ್ತದ ಬೆಳೆನಿರ್ವಹಣೆ : ಕೃಷಿ ವಿಜ್ಞಾನಿ ಕೇದಾರನಾಥರಿಂದ ಮಾಹಿತಿ

ದಕ್ಷಿಣ ಕನ್ನಡ :ಭತ್ತದ ಬೆಳೆಯಲ್ಲಿ ತೇನೆ ತಿಗಣೆ (ಬಂಬುಚಿ) ಕೀಟದ ನಿರ್ವಹಣೆ

ಭತ್ತವು ಪ್ರಮುಖ ಆಹಾರ ಬೆಳೆಯಾಗಿದ್ದು, ಸುಮಾರು 200 ಕ್ಕೂ ಹೆಚ್ಚು ಕೀಟಗಳ ಬಾಧೆಗೆ ಒಳಗಾಗುತ್ತದೆ. ಇವುಗಳಲ್ಲಿ 20 ಕೀಟಗಳು ಭತ್ತದ ಬೆಳೆಯ ವಿವಿಧ ಹಂತದಲ್ಲಿ ಕಂಡು ಬಂದು ಇಳುವರಿಯೂ ಕಡಿಮೆಮಾಡಿ ಆರ್ಥಿಕ ಹಾನಿಯುಂಟು ಮಾಡುತ್ತವೆ. ಪ್ರಮುಖವಾಗಿ ಭತ್ತದ ತೆನೆ ಬಿಡುವ ಸಮಯ ಮತ್ತು ಕಾಳು ತುಂಬುವ ಸಮಯದಲ್ಲಿ ತೆನೆ ತಿಗಣೆ (ಬಾಂಬೂಚಿ) ಕೀಟದ ಹಾವಳಿ ಕಂಡು ಬರುತ್ತದೆ.

ಈ ಕೀಟದ ಮರಿ ಹಾಗೂ ಪ್ರೌಢ ಕೀಟಗಳು ಭತ್ತದ ತೇನೆಗಳಲ್ಲಿನ ಬೀಜಗಳ ರಸವನ್ನು ಹೀರುವುದರಿಂದ ಕಾಳುಗಳು ಜೊಳ್ಳಾಗುವುದಲ್ಲದೆ, ರಸ ಹಿರಿರುವ ಕಾಳುಗಳ ಜಾಗದಲ್ಲಿ ಕಪ್ಪು ಚುಕ್ಕೆ ಕಾಣುತ್ತವೆ, ಇದರಿಂದ ಭತ್ತದ ಇಳುವರಿ ಕಡಿಯಾಗುವದಲ್ಲದೆ ಭತ್ತದ ಮಾರುಕಟ್ಟೆ ಬೆಲೆಯು ಕಡಿಮೆಯಾಗಿ ರೈತರು ಆರ್ಥಿಕ ನಷ್ಠ ಅನುಭವಿಸಬೇಕಾಗುತ್ತದೆ. ಆದ್ದರಿಂದ ಈ ಕೀಟದ ಸಮಗ್ರ ನಿರ್ವಹಣೆ ತುಂಬಾ ಅವಶ್ಯಕವೆಂದು ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣೆ ವಿಜ್ಞಾನಿಗಳಾದ ಡಾ. ಕೇದಾರನಾಥ ರವರು ತಿಳಿಸಿದರು. ಈ ಕೀಟದ ಸಮಗ್ರ ನಿರ್ವಹಣೆಗಾಗಿ ರೈತರು ಭತ್ತದ ಗದ್ದೆಯಲ್ಲಿ ಮತ್ತು ಬದುಗಳಲ್ಲಿರುವ ಕಳೆಗಳನ್ನು ತೆಗೆದು ಸ್ವಚ್ಛತೆಯನ್ನು ಕಾಪಾಡಬೇಕು. ಹಾಗೆಯೇ 5 ಮಿಲಿ ಅಝಾಡಿರಚ್ಟಿನ್ 0.03 % (ಕಹಿ ಬೇವಿನ ಎಣ್ಣೆ) ಅಥವಾ 2 ಮಿಲಿ ಫಿಪ್ರೊನಿಲ್ 5% ಎಸ್ ಸಿ ಅಥವಾ 0.6 ಮಿಲಿ ಇಮೀಡಾಕ್ಲೋಪ್ರಿಡ್ 06% + ಲಾಂಬ್ಧಾ ಸೈಹಲೋತ್ರೀನ್ 04 % ಎಸ್ ಎಲ್ ಅನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಬೆಳಿಗ್ಗೆ ಅಥವಾ ಸಾಯಂಕಾಲದ ಸಮಯದಲ್ಲಿ ಸಿಂಪರಣೆ ಮಾಡಬೇಕು ಎಂದು ತಿಳಿಸಿದರು.

Leave a Reply

Your email address will not be published. Required fields are marked *

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಮಂಜುನಾಥ್ ಶೆಟ್ಟಿ ದಂಪತಿಗೆ ಸನ್ಮಾನ

ಉಡುಪಿ: ಕರಾವಳಿ ನಿವಾಸಿಗಳ ಸಂಕಷ್ಟಕ್ಕೆ ಸ್ಪಂದಿಸಿದ ಜಿಲ್ಲಾಡಳಿತ…!

ಬಂಟ್ವಾಳ: ಮಾಣಿ ಸಮೀಪ ಜೋಗಿಬೆಟ್ಟು ರಸ್ತೆ ಕೆರೆಯಂತಾದ ದೃಶ್ಯ….!

ವಾಷಿಂಗ್ಟನ್: ಉತ್ತರ ಅಮೆರಿಕಾ ಬಂಟರ ಸಂಘದ `ದಿಬ್ಬಣ’ ಮಹಾ ಅಧಿವೇಶನ..!

ಮಂಗಳೂರು: ಮಂಗಳೂರಿನಲ್ಲಿ ಎಐ ಸಿ.ಸಿ ಕ್ಯಾಮರಾಗಳ ಅಳವಡಿಕೆ….!

ಬಂಟ್ವಾಳ: ಮಳೆ ಅನಾಹುತ: ರಾಯಿಯ ಜೀವನ್ ಪಿಂಟೋ ಮೃತದೇಹ ಪ*ತ್ತೆ…..!

ಬಂಟ್ವಾಳದಲ್ಲಿ ಮಳೆ ಅವಾಂತರ; ಮರ ಬಿದ್ದು ಸ್ಥಳೀಯರ ಪರದಾಟ

ಶ್ರೀಲಂಕಾ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾಗೆ ಆಕಿಬ್ ನಬಿ ಎಂಟ್ರಿ

ಬಿಹಾರದ ಸಹರ್ಸಾದಲ್ಲಿ ರೈಲು ಅಗ್ನಿ ಅವಘಡ; ತಪ್ಪಿದ ಭಾರೀ ಅನಾಹುತ

error: Content is protected !!