ಜನ ಮನದ ನಾಡಿ ಮಿಡಿತ

Advertisement

ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಪಾಣೆಮಂಗಳೂರಿನ ಎಸ್. ಎಲ್. ಎನ್. ಪಿ ಆಂಗ್ಲ ಮಾಧ್ಯಮ ಶಾಲೆಯ ಸಹ ಶಿಕ್ಷಕಿ ಶ್ರೀಮತಿ ಶೈಲಜಾ. ಬಿ. ರೈ.

ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಪಾಣೆಮಂಗಳೂರಿನ ಎಸ್. ಎಲ್. ಎನ್. ಪಿ ಆಂಗ್ಲ ಮಾಧ್ಯಮ ಶಾಲೆಯ ಸಹ ಶಿಕ್ಷಕಿ ಶ್ರೀಮತಿ ಶೈಲಜಾ. ಬಿ. ರೈ.

 

ಮಾನ್ಯತೆ ಪಡೆದ ಅನುದಾನರಹಿತ ಖಾಸಗಿ ಶಾಲೆಗಳ ಸಂಘ (RUPSA) ಕೊಡಮಾಡುವ ಬಂಟ್ವಾಳ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಎಸ್. ಎಲ್. ಎನ್. ಪಿ ವಿದ್ಯಾಲಯ, ಪಾಣೆಮಂಗಳೂರಿನ ಶಿಕ್ಷಕಿ ಶ್ರೀಮತಿ ಶೈಲಜಾ. ಬಿ. ರೈ ಯವರು ಆಯ್ಕೆಯಾಗಿದ್ದರೆ. ಇವರು 18 ವರ್ಷಗಳಿಂದ ಈ ಸಂಸ್ಥೆ ಯಲ್ಲಿ ಸಮಾಜ ವಿಜ್ಞಾನ ಹಾಗೂ ಇಂಗ್ಲೀಷ್ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಾ ಇದ್ದಾರೆ. ಇವರು ಪಠ್ಯೇತರ ಚಟುವಟಿಕೆಗಳಲ್ಲಿ ತುಂಬಾ ಆಸಕ್ತಿ ಉಲ್ಲವರಾಗಿದ್ದು ಸುಮಾರು 14 ವರ್ಷಗಳ ಕಾಲ ಬುಲ್ ಬುಲ್ ಶಿಕ್ಷಕಿಯಾಗಿ ಅನೇಕ ವಿದ್ಯಾರ್ಥಿಗಳನ್ನು ತರಭೇತಿಗೊಳಿಸಿ ರಾಜ್ಯ ಪುರಸ್ಕಾರ ಪ್ರಶಸ್ತಿ ಪಡೆಯುವಂತೆ ಮಾಡಿದ್ದಾರೆ ಇವರು ಉತ್ತಮ ಕಾರ್ಯಕ್ರಮ ನಿರೂಪಕರಾಗಿರುವರು. ತನ್ನ ವಿದ್ಯಾರ್ಥಿಗಳಲ್ಲಿ ಭಾಷಣ, ಪರಿಸರ ಸಂರಕ್ಷಣೆ, ದೇಶಪ್ರೇಮ, ಧರ್ಮ ದ ಅರಿವಿನ ಬಗ್ಗೆ ಜಾಗ್ರತಿಯನ್ನು ಮೂಡಿಸಲು ಅನೇಕ ಕಾರ್ಯಕ್ರಮ ಗಳನ್ನು ತಮ್ಮ ಶಾಲಾ ಮುಖ್ಯ ಶಿಕ್ಷಕಿ ಯವರ ಹಾಗೂ ಸಹಶಿಕ್ಷಕರ ಜೊತೆ ನಡೆಸುತ್ತಾ ಬಂದಿದ್ದಾರೆ. ಇವರು ಸಾಲೆತ್ತೂರು ಪಡೆಕುಂಜ ನಿವಾಸಿ, SRDCC ಬ್ಯಾಂಕ್ ನ ಪ್ರಬಂಧಕರಾದ ಶ್ರೀ ಬಾಲಕೃಷ್ಣ ರೈ ಇವರ ಧರ್ಮ ಪತ್ನಿ ಯಾಗಿರುತ್ತಾರೆ.

Leave a Reply

Your email address will not be published. Required fields are marked *

ಬಂಟ್ವಾಳ: ಭಾರೀ ಮಳೆ ಹಾಗೂ ಬಿರುಗಾಳಿಯ ಅಬ್ಬರಕ್ಕೆ ಕುಸಿತಗೊಂಡ ಮನೆಯ ಚಾವಣಿ…!

ಬಂಟ್ವಾಳ: ಸಜೀಪಮೂಡದಲ್ಲಿ ವಿದ್ಯುತ್ ಅವಘಡ; ಪೀಠೋಪಕರಣಗಳು ಸೇರಿ ದಿನನಿತ್ಯದ ವಸ್ತುಗಳು ಸುಟ್ಟು ಭಸ್ಮ…!

ವಾಷಿಂಗ್ಟನ್: ಅಮೆರಿಕ ಕಾಂಗ್ರೆಸ್‌ನಿಂದ ಡಾ. ಯು.ಟಿ. ಖಾದರ್‌ಗೆ ಪ್ರತಿಷ್ಠಿತ ಗೌರವ…!

ವಿಶ್ವಕಪ್ ಗಲಾಟೆ: ಅರ್ಜೆಂಟೀನಾ ವಿರುದ್ಧ ಫಿಫಾ ಕಠಿಣ ಶಿಸ್ತು ಕ್ರಮ!

ನವದೆಹಲಿ: ‘ಪಾಕಿಸ್ತಾನಿ ಕಾಶ್ಮೀರ’ ಅಲ್ಲ, ಅದು PoK ಮಾತ್ರ: ನ್ಯೂಯಾರ್ಕ್ ಟೈಮ್ಸ್‌ಗೆ ಭಾರತದ ತಿರುಗೇಟು…!

ವಾಷಿಂಗ್ಟನ್: ಚೀನಾ-ಪಾಕ್ ಮೂಲಕ ಇರಾನ್‌ಗೆ 400 ರಾಕೆಟ್ ಲಾಂಚರ್? ಟ್ರಂಪ್ ಆತಂಕ…!

ಮೂಡುಬಿದಿರೆ: ಒಮಾನ್‌ನಲ್ಲಿ ಸಂಭವಿಸಿದ ವಾಹನ ಅಪ*ಘಾತದಲ್ಲಿ ಯುವಕ ಸಾ*ವು….!

ಬಂಟ್ವಾಳ: ಅಮ್ಮುಂಜೆ ವೃದ್ಧೆ ಕೊಲೆ ಪ್ರಕರಣ: ಮೂವರು ಆರೋಪಿಗಳಿಗೆ ಜೀವಾವಧಿ…!

ನವದೆಹಲಿ: ಚಿನ್ನದ ಬೆಲೆ ಇಳಿಯುತ್ತಾ? ವಿಶ್ವ ಚಿನ್ನ ಮಂಡಳಿಯ ಭವಿಷ್ಯ…!

error: Content is protected !!