ಜನ ಮನದ ನಾಡಿ ಮಿಡಿತ

Advertisement

ನ.30ರಂದು ಬಂಟ್ವಾಳದ ನೂತನ ಟ್ರಾಫಿಕ್ ಪೋಲೀಸ್ ಠಾಣೆಯ ಉದ್ಘಾಟನೆ

ಬಂಟ್ವಾಳ: ನ.30 ರಂದು ಬಂಟ್ವಾಳದ ನೂತನ ಟ್ರಾಫಿಕ್ ಪೋಲೀಸ್ ಠಾಣೆಯ ಉದ್ಘಾಟನೆಗೆ ಮುಹೂರ್ತ ಪಿಕ್ಸ್ ಆಗಿದೆ.


‌‌ ಗೃಹ ಸಚಿವ ಡಾ| ಜಿ.ಪರಮೇಶ್ವರ ಅವರು ಪೋಲೀಸ್ ಠಾಣೆಯನ್ನು ಉದ್ಘಾಟಿಸಲಿದ್ದಾರೆ ಎಂದು ಅಧಿಕೃತವಾಗಿ ಮಾಹಿತಿ ನೀಡಲಾಗಿದೆ.‌‌ಬಂಟ್ವಾಳ ವೃತ್ತದಲ್ಲಿ ಟ್ರಾಫಿಕ್ ಪೋಲಿಸ್ ಠಾಣೆ ಆರಂಭವಾಗಿದ್ದರೂ ಕೂಡ ಈ ವರೆಗೆ ಸ್ವಂತ ಕಟ್ಟಡ ಹೊಂದದೆ ಮೆಲ್ಕಾರ್ ನಲ್ಲಿ ಬಾಡಿಗೆ ಕಟ್ಟಡದಲ್ಲಿ ಕಾರ್ಯಚರಿಸುತ್ತಿತ್ತು. ಕಳೆದ ಒಂದು ವರ್ಷಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನೆಪದಲ್ಲಿ ಮೆಲ್ಕಾರ್ ನಿಂದ ಮಾರ್ನಬೈಲು ಎಂಬಲ್ಲಿರುವ ಬಾಡಿಗೆ ಮನೆಯೊಂದರಲ್ಲಿ ತಾತ್ಕಾಲಿಕವಾಗಿ ನೆಲೆಯೂರಿತ್ತು‌.

ಟ್ರಾಫಿಕ್ ಪೋಲೀಸ್ ಠಾಣೆ ಸ್ವಂತ ಕಟ್ಟಡದಲ್ಲಿ ಸೇವೆ ನೀಡಬೇಕು ಎಂದು ಇಲಾಖೆಯ ಕನಸು ಆಗಿತ್ತಾದರೂ ಕಳೆದ ಒಂದು ವರ್ಷಗಳಿಂದ ಕಾಮಗಾರಿಗೆ ವೇಗ ಪಡೆದುಕೊಂಡು ಇದೀಗ ಪಾಣೆಮಂಗಳೂರು ಹಳೆಯ ಸೇತುವೆ ಸಮೀಪ ರಾಷ್ಟ್ರೀಯ ಹೆದ್ದಾರಿ ಗೆ ತಾಗಿಕೊಂಡು ಸುಸಜ್ಜಿತವಾದ ಜಾಗದಲ್ಲಿ ಉತ್ತಮವಾದ ಕಟ್ಟಡ ತಲೆಎತ್ತಿನಿಂತಿದೆ.
ಕಟ್ಟಡ ಕಾಮಗಾರಿ ಮುಗಿದು ತಿಂಗಳುಗಳು ಕಳೆದದರೂ ಉದ್ಘಾಟನೆಗೆ ಭಾಗ್ಯ ಒದಗಿ ಬಂದಿರಲಿಲ್ಲ.
ಇದೀಗ ಪ್ರವೇಶಕ್ಕೆ ದಿನ ನಿಗದಿಯಾಗಿದ್ದು, ನ.30 ರಂದು ಜಿಲ್ಲೆಯ ಸುಬ್ರಹ್ಮಣ್ಯ ಠಾಣೆ, ಮತ್ತು ಬಂಟ್ವಾಳ ಟ್ರಾಫಿಕ್ ಪೋಲೀಸ್ ಠಾಣೆಯ ಜೊತೆ ಬೆಳ್ಳಾರೆ ಪೋಲಿಸ್ ಠಾಣೆಯ ವಸತಿ ಗೃಹ ಸಮುಚ್ಚಯಗಳ ಉದ್ಘಾಟನೆ ನಡೆಯಲಿದೆ ಎಂದು ಅಧಿಕೃತ ಮಾಹಿತಿ ನೀಡಿದೆ.

Leave a Reply

Your email address will not be published. Required fields are marked *

ನವದೆಹಲಿ: ಜಿರಳೆ ಹೋರಾಟಕ್ಕೆ ಕೊನೆಗೂ ಮಣಿದ ಕೇಂದ್ರ ಸರಕಾರ; ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜಿನಾಮೆ…!

ಮಂಗಳೂರು: ರೌಡಿಶೀಟರ್ ಮೇಲೆ ಮಾರಕಾಸ್ತ್ರದಿಂದ ಭೀಕರ ದಾಳಿ…!

ಬಂಟ್ವಾಳ: ಲಾವಣ್ಯ ಹತ್ಯೆ ಪ್ರಕರಣದ ಆರೋಪಿ ಚೇತನ್ ಆರೋಗ್ಯದಲ್ಲಿ ಸುಧಾರಣೆ..!

ಬಂಟ್ವಾಳ: ತ್ಯಾಜ್ಯ ನಿರ್ವಹಣೆ ಸಂಪೂರ್ಣ ಹದಗೆಟ್ಟು ಸಾರ್ವಜನಿಕರಲ್ಲಿ ಆತಂಕ..!

ಮಂಗಳೂರು: ಮಂತ್ರಾಲಯದ ಬಳಿ ಭೀಕರ ಅಪಘಾತ; ಯಕ್ಷಧ್ರುವ ಪಟ್ಲ ಫೌಂಡೇಷನ್ ಕಾರ್ಯದರ್ಶಿ ರವಿ ಶೆಟ್ಟಿ ನಿಧನ…!

ಬಂಟ್ವಾಳ: ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದಲ್ಲಿ ಅಗ್ನಿ ಅವಘಡ…..!

ಬಂಟ್ವಾಳ: ಸೂರಿಕುಮೇರ್ ಪೆಟ್ರೋಲ್ ಬಂಕ್ ಸಮೀಪ ಅಪ*ಘಾತ; ಮಾನವೀಯತೆ ಮೆರೆದ ಎಸ್‌ಐ ರಾಮಕೃಷ್ಣ..!

ಮಂಗಳೂರು: ವಿವಾಹಿತ ಮಹಿಳೆಯೊಬ್ಬರು ಮನೆಯಲ್ಲಿಯೇ ನೇಣು ಬಿಗಿದು ಆತ್ಮಹ*ತ್ಯೆ..!

ವಿಟ್ಲ: ರಸ್ತೆ ಬದಿಯ ಮರಕ್ಕೆ ಡಿಕ್ಕಿಹೊಡೆದ ಟಿಪ್ಪರ್ ಲಾರಿ – ಇಬ್ಬರಿಗೆ ಗಾಯ..!

error: Content is protected !!