ಮಂಗಳೂರು; ಮಂಗಳೂರಿನ ಕೆಎಂಸಿಯ ಎಆರ್‌ಒಐಯು ಮತ್ತು ಎಆರ್‌ಒಐ ಕರ್ನಾಟಕ ವಿಭಾಗದ ಆಯೋಜನೆಯಲ್ಲಿ ಅಸೋಸಿಯೇಷನ್ ಆಫ್ ರೇಡಿಯೇಷನ್ ಆಂಕಾಲಜಿಸ್ಟ್ ಆಫ್ ಇಂಡಿಯಾದ ೪೪ನೇ ವಾರ್ಷಿಕ ಸಮ್ಮೇಳನ ‘ಆರೋಕಾನ್-2024’ ಮಂಗಳೂರಿನ ಡಾ. ಟಿಎಂಎ ಪೈ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್ನಲ್ಲಿ ನ.೨೯ರಂದು ಜರಗಲಿದೆ.
ಸಮ್ಮೇಳನದ ಉದ್ಘಾಟನಾ ಸಮಾರಂಭ ಸಂಜೆ ೬ಕ್ಕೆ ನಡೆಯಲಿದ್ದು ಮುಖ್ಯ ಅತಿಥಿಯಾಗಿ ಭಾರತ ಸರಕಾರದ ಅಟೋಮಿಕ್ ಎನರ್ಜಿ ರೆಗ್ಯುಲೇಟರಿ ಬೋರ್ಡ್(ಎಇಆರ್ಬಿ)ನ ಚೇರ್ಮೆನ್ ದಿನೇಶ್ ಕುಮಾರ್ ಶುಕ್ಲಾ, ಗೌರವ ಅತಿಥಿಗಳಾಗಿ ಸಶಸ್ತ್ರ ಬಲದ ಮೆಡಿಕಲ್ ಸರ್ವೀಸಸ್ನ ಡೈರೆಕ್ಟರ್ ಜನರಲ್ ಸರ್ಜನ್ ವೈಸ್ ಆಡ್ಮಿರಲ್ ಡಾ. ಆರ್ತಿ ಸರೀನ್, ಪಿಜಿ ಮೆಡಿಕಲ್ ಎಜುಕೇಷನ್ ಬೋರ್ಡ್ ನ್ಯಾಷನಲ್ ಮೆಡಿಕಲ್ ಕಮಿಷನ್ನ ಅಧ್ಯಕ್ಷ ಡಾ. ವಿಜಯ್ ಓಝಾ, ಮಾಹೆ ಕುಲಪತಿ ಲೆ. ಜ. ಡಾ. ಎಂ.ಡಿ.ವೆಂಕಟೇಶ್ ಪಾಲ್ಗೊಳ್ಳಲಿದ್ದಾರೆ ಎಂದು ಕೆಎಂಸಿ ಮಂಗಳೂರಿನ ಡೀನ್ ಡಾ. ಬಿ.ಉಣ್ಣಿಕೃಷ್ಣನ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಮ್ಮೇಳನದಲ್ಲಿ ರೇಡಿಯೇಷನ್ ಆಂಕಾಲಜಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ದೇಶ ವಿದೇಶಗಳ ಸಾವಿರಾರು ಸಂಶೋಧಕರು, ತಜ್ಞರು, ವೃತ್ತಿಪರರು ಪಾಲ್ಗೊಳ್ಳಲಿದ್ದಾರೆ. ನ.೨೮ರಂದು ಇಂಡಿಯನ್ ಕಾಲೇಜ್ ಆಫ್ ರೇಡಿಯೇಷನ್ ಆಂಕಾಲಜಿ ವತಿಯಿಂದ ಕಾರ್ಯಾಗಾರ ನಡೆಯಲಿದೆ ಎಂದರು.
ಸಮ್ಮೇಳನ ಸಂಘಟನಾ ಮುಖ್ಯಸ್ಥ ಡಾ. ಎಂ.ಎಸ್.ಅತಿಯಾಮಾನ್ ಮಾತನಾಡಿ, ಒಟ್ಟಾರೆಯಾಗಿ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಕ್ಯಾನ್ಸರ್ ಕುರಿತಾದ ಜಾಗೃತಿಯಿಂದಾಗಿ ತಪಾಸಣೆ ಮಾಡಿಕೊಳ್ಳುತ್ತಿರುವವರ ಪ್ರಮಾಣ ಹೆಚ್ಚಾಗಿರುವುದು ಕೂಡ ಇದಕ್ಕೆ ಕಾರಣ. ಸಾಮಾನ್ಯವಾಗಿ ಕ್ಯಾನ್ಸರ್ನ್ನು ಪ್ರಥಮ ಹಂತದಲ್ಲಿ ಪತ್ತೆ ಹಚ್ಚಿದರೆ ಗುಣಪಡಿಸಬಹುದಾದ ಸಾಧ್ಯತೆ ಶೇ.೮೦ರಿಂದ ೮೫ ಇರುತ್ತದೆ. ನಾಲ್ಕನೇ ಹಂತದಲ್ಲಿ ಈ ಪ್ರಮಾಣ ಶೇ.೬೦ರಷ್ಟಿರುತ್ತದೆ. ಅತ್ತಾವರ ಕೆಎಂಸಿ ವತಿಯಿಂದ ವೆನ್ಲಾಕ್ ಆಸ್ಪತ್ರೆಯಲ್ಲಿ ಕ್ಯಾನ್ಸರ್ನ ಉಚಿತ ತಪಾಸಣೆಗೆ ಹೊರರೋಗಿ ವಿಭಾಗ ಕಾರ್ಯಾಚರಿಸುತ್ತಿದೆ. ಅಗತ್ಯ ಬಿದ್ದರೆ ಆಯುಷ್ಮಾನ್ನಡಿ ಕೆಎಂಸಿಯಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ದೇಶದಲ್ಲಿ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್, ಗರ್ಭಕೋಶದ ಕ್ಯಾನ್ಸರ್ ಪ್ರಕರಣಗಳು ಕೂಡ ಹೆಚ್ಚಾಗಿವೆ. ವ್ಯಾಯಾಮ ಇಲ್ಲದಿರುವುದು, ಒತ್ತಡದ ಜೀವನಶೈಲಿ, ಜಂಕ್ ಫುಡ್ಗಳ ಸೇವನೆ ಮೊದಲಾದವು ಕ್ಯಾನ್ಸರ್ಗೆ ಕಾರಣವಾಗುತ್ತಿವೆ. ತಂಬಾಕು ಸೇವನೆಯಿಂದಾಗಿ ಬಾಯಿಯ ಕ್ಯಾನ್ಸರ್ ಉಂಟಾಗುತ್ತಿದೆ. ತಪಾಸಣೆಗಳನ್ನು ನಡೆಸುವುದರಿಂದ ಕ್ಯಾನ್ಸರ್ನ ಪೂರ್ವ ಹಂತದಲ್ಲೇ ಪತ್ತೆ ಹಚ್ಚಲು ಸಾಧ್ಯ. ಒಂದು ವೇಳೆ ಕ್ಯಾನ್ಸರ್ನ ಹಂತ ತಲುಪಿದ್ದರೂ ಪರಿಣಾಮಕಾರಿ ಚಿಕಿತ್ಸೆ ನೀಡಬಹುದಾಗಿದೆ. ಈ ಬಗ್ಗೆ ಜಾಗೃತಿ, ತಪಾಸಣೆ ಮೂಡಿಸಲು ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ನ.೨೯ರಂದು ನಡೆಯಲಿರುವ ಸಮ್ಮೇಳನವು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಜಗತ್ತಿನಾದ್ಯಂತ ನಡೆದಿರುವ ಅತ್ಯಾಧುನಿಕ ಬೆಳವಣಿಗೆಗಳ ಬಗ್ಗೆಯೂ ಬೆಳಕು ಚೆಲ್ಲಲಿದೆ ಎಂದು ತಿಳಿಸಿದರು.
ಡಾ. ದಿಲ್ಸನ್ ಲೋಬೊ ಉಪಸ್ಥಿತರಿದ್ದರು.
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…