ಜನ ಮನದ ನಾಡಿ ಮಿಡಿತ

Advertisement

ಅದ್ದೂರಿಯಾಗಿ ಸಂಪನ್ನಗೊ0ಡ ಅಮ್ಟೂರು ಶ್ರೀಕೃಷ್ಣ ಮಂದಿರದ 25ನೇ ವಾರ್ಷಿಕೋತ್ಸವ

ಶ್ರೀ ಕೃಷ್ಣ ಮಂದಿರ (ರಿ) ಅಮ್ಟೂರು, ನವಜ್ಯೋತಿ ಮಿತ್ರ ಮಂಡಳಿ (ರಿ) ಅಮ್ಟೂರು, ಜ್ಯೋತಿ ಮಹಿಳಾ ಮಂಡಳಿ (ರಿ) ಅಮ್ಟೂರು ಹಾಗೆನೇ ಅಮ್ಟೂರು ಶ್ರೀ ಕೃಷ್ಣ ಮಂದಿರದ 25ನೇ ವಾರ್ಷಿಕ ಮಹೋತ್ಸವ ಬಹಳ ಅದ್ದೂರಿಯಾಗಿ ಸಂಪನ್ನಗೊ0ಡಿದೆ.

 

ಡಿ.28ರಂದು ಬೆಳಗ್ಗೆ ಗಂಟೆ 8-30ರಿಂದ ಗಣಹೋಮ, ಶ್ರೀ ಶನಿ ಪೂಜೆ, ಮಧಾಹ್ನ ಗಂಟೆ 12-30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆದಿದೆ. ಸಂಜೆ ಗಂಟೆ 4 ರಿಂದ ಭಜನಾ ಸಂಕೀರ್ತನೆ ನಡೆದು ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಮೇಳೈಸಿದೆ. ರಾತ್ರಿ ಗಂಟೆ 7-30ಕ್ಕೆ ಧಾರ್ಮಿಕ ಸಭೆ ನಡೆದಿದ್ದು, ಧಾರ್ಮಿಕ ಸಭೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧ್ಯಕ್ಷರಾದ ಡಾ.ಪ್ರಭಾಕರ ಭಟ್ ಕಲ್ಲಡ್ಕ ಉದ್ಘಾಟಿಸಿದ್ದಾರೆ. ಬಳಿಕ ಮಾತನಾಡಿದ ಅವರು, ಬಳಿಕ ಮಾತನಾಡಿದ ಇವರು, ಹಿಂದೂ ತರುಣರು ಆರ್‌ಎಸ್‌ಎಸ್ ಸಂಘಟನೆಯ ಪ್ರೇರಣೆಯಿಂದ ಹಿಂದೂ ಸಮಾಜಕ್ಕಾಗಿ ಕೆಲಸ ಕಾರ್ಯಗಳನ್ನ ಮಾಡುತ್ತಿದ್ದಾರೆ. ನಮ್ಮ ಮಕ್ಕಳಿಗೆ ಧಾರ್ಮಿಕ ಚಿಂತನೆಗಳನ್ನು ನೀಡಬೇಕು ಎಂದು ಹೇಳಿದ್ದಾರೆ. ಗುರುಪುರದ ಶ್ರೀ ವಜ್ರದೇಹಿ ಮಠದ ಪರಮಪೂಜ್ಯ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು ಆಶೀವರ್ಚನಗೈದಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಹೇರಂಬ ಇಂಡಸ್ಟಿçÃಸ್ ಪ್ರೆöÊವೆಟ್ ಲಿಮಿಟೆಡ್ ಇದರ ಸಿಎಂಡಿ ಹಾಗೂ ಅಭಿಮತ ಟಿವಿಯ ಮುಖ್ಯ ಪ್ರವರ್ತಕರಾದ ಕನ್ಯಾನ ಸದಾಶಿವ ಶೆಟ್ಟಿಯವರು ವಹಿಸಿದ್ದಾರೆ. ಬಳಿಕ ಮಾತನಾಡಿ, ಯೋಗದಲ್ಲಿ ಬಂದ ಕರ್ತವ್ಯವನ್ನ ಮಾಡಿದಾಗ ಪರಮಾತ್ಮ ಖಂಡಿತ ಫಲ ನೀಡುತ್ತಾನೆ ಎಂದು ಉತ್ತಮ ಸಂದೇಶವನ್ನ ನೀಡಿದ್ದಾರೆ. ಯುವ ವಾಗ್ಮಿ ಹಾರಿಕಾ ಮಂಜುನಾಥ್ ಧಾರ್ಮಿಕ ಭಾಷಣ ಮಾಡಿದ್ದಾರೆ. ಇನ್ನು ಈ ಸಭೆಯಲ್ಲಿ ಚಲನಚಿತ್ರ ನಿರ್ಮಾಪಕರು ಹಾಗೂ ನಿರ್ದೇಶಕರಾದ ರವಿರಾಜ್ ಸಾಲೆತ್ತೂರು, ಎಂ.ಎ ಕನ್‌ಸ್ಟçಕ್ಷನ್ ಇಂಜಿನಿಯರ್ ಮತ್ತು ಬಿಲ್ಡಿಂಗ್ ಕಂಟ್ರಾಕ್ಟರ್, ಹಾಗೂ ದ.ಕ. ಜಿಲ್ಲಾ ಕೊಟ್ಟಾರಿ ಸಮಾಜ ಸುಧಾಕ ಸಂಘದ ಅಧ್ಯಕ್ಷರಾದ ಎಂ ಮಹಾಬಲ ಕೊಟ್ಟಾರಿ, ಉದ್ಯಮಿಗಳಾದ ಲಯನ್ ಸತೀಶ್ ಕುಮಾರ್ ಆಳ್ವ ಇರಾ ಬಾಳಿಕೆ, ಅಭಿಮತ ಟಿವಿಯ ಆಡಳಿತ ಪಾಲುದಾರರಾದ ಡಾ.ಮಮತಾ ಪಿ ಶೆಟ್ಟಿ, ಅಲೆಮಾರಿ-ಅರೆ ಅಲೆಮಾರಿ ನಿಗಮದ ರವೀಂದ್ರ ಶೆಟ್ಟಿ ಉಳಿದೊಟ್ಟು, ಪ್ರಕಾಶ್ ಶೆಟ್ಟಿ ಉದ್ಯಮಿಗಳು,  ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಬೊಟ್ಯಾಡಿ, ಸತೀಶ್ ಕರ್ಕೇರ ಉದ್ಯಮಿಗಳು, ರಿಷಿ ಹಾಡ್ವೇðರ್ & ಪ್ಲೆöÊ ಕದ್ರಿ, ಮಂಗಳೂರು, ಶ್ರೀ ಕೃಷ್ಣ ಭಜನಾ ಮಂದಿರದ ಅಧ್ಯಕ್ಷರಾದ ರಮೇಶ್ ಕರಿಂಗಾಣ,ಜ್ಯೋತಿ ಮಹಿಳಾ ಮಂಡಲ(ರಿ.) ಇದರ ಲಕ್ಷಿö್ಮà ಪ್ರಭು,
ಜೆ. ಕೃಷ್ಣ ಪಾಲೇಮಾರ್, ಮಾಜಿ ಸಚಿವರು, ಕರ್ನಾಟಕ ಸರಕಾರ, ಆನಂದ ಆಳ್ವ ಗೋಳ್ತಮಜಲು, ಶ್ರೀಕಾಂತ್ ಶೆಟ್ಟಿ ಸಂಕೇಶ, ಉದ್ಯಮಿಗಳು, ನಾಗೇಶ್ ಕುಲಾಲ್ ನರಿಕೊಂಬು, ಎನ್.ಕೆ. ಕನ್ಸಲ್ಟೆಂಟ್ಸ್, ಪಾಣೆಮಂಗಳೂರು, ಸಂದೇಶ್ ಶೆಟ್ಟಿ, ಆಗ್ರಜ ಬಿಲ್ಡರ್ಸ್, ಮಂಗಳೂರು, ಅಜಯ್ ಪಿ. ಪಡೀಲ್, ಮ್ಹಾಲಕರು, ಸುರಭಿ ಗ್ರೂಪ್ ಆಫ್ ಹೋಟೆಲ್ಸ್, ಈಶ್ವರ್ ಮಲ್ಪೆ, ಸಾಮಾಜಿಕ ಕಾರ್ಯಕರ್ತರು, ಉಡುಪಿ ಮಲ್ಪೆ, ಸೋಮಪ್ಪ ಪೂಜಾರಿ ಅಮೂರು, ನಿವೃತ ಸೈನಿಕರು ಸೇರಿದಂತೆ ಹಲವರು ಉಪಸ್ಥಿತರಿದ್ರು.

ಶ್ರೀ ಕೃಷ್ಣ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ದಿನೇಶ್ ಅಮ್ಟೂರು ಸ್ವಾಗತಿಸಿದರು. ಶ್ರೀ ಕೃಷ್ಣ ಭಜನಾ ಮಂದಿರದ ಪ್ರಧಾನ ಕಾಂiÀiðದರ್ಶಿ ಕುಶಾಲಪ್ಪ ಅಮ್ಟೂರು ಪ್ರಸ್ತಾಪನೆ ಸಲ್ಲಿಸಿದರು. ರಾಧಾಕೃಷ್ಣ ಮಾಸ್ತರ್ ಧನ್ಯವಾದ ಸಮರ್ಪಿಸಿದ್ದು, ಸಂತೋಷ್ ಬೇಂಕ್ಯೆ ಹಾಗು ರಾಜೇಶ್ ಕೊಟ್ಟಾರಿ ನಿರೂಪಣೆ ಮಾಡಿದರು. ರಾತ್ರಿ ಗಂಟೆ 8ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ ನಡೆದಿದ್ದು, ರಾತ್ರಿ ಗಂಟೆ 9ರಿಂದ ಪಿಂಗಾರ ಕಲಾವೆದೆರ್ ಬೆದ್ರ ಇವರಿಂದ ತುಳು ಹಾಸ್ಯ ನಾಟಕ “ಕದಂಬ” ಪ್ರದರ್ಶನಗೊಂಡಿದೆ.

 

ಡಿ.29ರಂದು ಬೆಳಗ್ಗೆ ಗಂಟೆ 10ರಿಂದ ಶ್ರೀ ಅನಂತರಾಮ ಐತಾಳ್ ಓಣಿಬೈಲು ಪೌರೋಹಿತ್ಯದಲ್ಲಿ ಶ್ರೀ ಸತ್ಯನಾರಾಯಣ ಪೂಜೆ ನಡೆದು ಬಳಿಕ ಧಾರ್ಮಿಕ ಸಭೆ ನಡೆದಿದೆ. ಮಧ್ಯಾಹ್ನ ಗಂಟೆ 10-30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆದಿದ್ದು, ತದನಂತರ ಮಧ್ಯಾಹ್ನ ಗಂಟೆ 2 ರಿಂದ ಕಲ್ಲಡ್ಕ ವಿಠಲ ನಾಯಕ್ ಮತ್ತು ಬಳಗದವರಿಂದ ಗೀತಾ- ಸಾಹಿತ್ಯ- ಸಂಭ್ರಮ ಸಂಭ್ರಮಿಸಲಿದೆ. ಸಂಜೆ ಗಂಟೆ 4-30ರಿಂದ ಭಜನಾ ಸಂಕೀರ್ತನೆ ನಡೆದು ಸಂಜೆ ಗಂಟೆ 6 ರಿಂದ ಶ್ರೀ ಕಟೀಲು ಮೇಳದವರಿಂದ `ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿದೆ. ಇನ್ನು ಈ ಸಂದರ್ಭದಲ್ಲಿ

 

ಮೋಹನ್ ರಾಜ್ ಚೌಟ ಪುಂಜೋಳಿಮಾರ್ಗ ಗುತ್ತು ಅಮ್ಟೂರು, ಡಾ. ಹರಿಕೃಷ್ಣ ಕಾಮತ್ ಕರಿಂಗಾಣಗುತ್ತು, ನೇತ್ರ ತಜ್ಞರು, ಶ್ರೀ ಕೋಟ ಶ್ರೀನಿವಾಸ ಪೂಜಾರಿ ಸಂಸದರು, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ, ಬಿ. ನಾಗರಾಜ ಶೆಟ್ಟಿ ಬೈಲು ಮೇಗಿನಮನೆ ಮಾಜಿ ಸಚಿವರು, ಕರ್ನಾಟಕ ಸರ್ಕಾರ, ಎ. ರುಕ್ಕಯ ಪೂಜಾರಿ, ಮಾಜಿ ಶಾಸಕರು, ಕೆ. ಪದ್ಮನಾಭ ಕೊಟ್ಟಾರಿ, ಮಾಜಿ ಶಾಸಕರು,ಜಿತೇಂದ್ರ ಎಸ್. ಕೊಟ್ಟಾರಿ ಆಡಳಿತ ಪಾಲುದಾರರು, ಲೋಟಸ್ ಪ್ರಾಪರ್ಟಿಸ್, ಮಂಗಳೂರು, ಮನೋಜ್ ಕುಮಾರ್ ಕಟ್ಟೆಮಾರು ಶ್ರೀ ಮಂತ್ರದೇವತಾ ಕ್ಷೇತ್ರ ಸಾನ್ನಿಧ್ಯ, ಕಟ್ಟೆಮಾರು, ತಾರಾನಾಥ ಕೊಟ್ಟಾರಿ ತೇವು ಫರಂಗಿಪೇಟೆ ಅಧ್ಯಕ್ಷರು, ಸಂಸ್ಕಾರ ಭಾರತಿ, ದಕ್ಷಿಣ ಕನ್ನಡ, ಲಯನ್ ಶಿವರಾಮ ರೈ ಮೇರಾವು ಅಧ್ಯಕ್ಷರು, ಲಯನ್ಸ್ ಕ್ಲಬ್ ಮುಡಿಪು ಕುರ್ನಾಡು, ಪ್ರದೀಪ್ ನಾಯಕ್, ಅಧ್ಯಾಪಕರು, ಸರಕಾರಿ ಪ್ರೌಢಶಾಲೆ, ಅತ್ತಾವರ, ಲಯನ್ ಸುಧಾಕರ ಆಚಾರ್ಯ, ಆಡಳಿತ ನಿರ್ದೇಶಕರು, ಬಜಾರ್ ಗ್ರೂಪ್, ಮಾರ್ನಬೈಲು, ಡಾ. ಶರತ್ ಆಳ್ವ, ಮೂಕಾಂಬಿಕಾ ಗ್ಯಾಸ್ ಏಜೆನ್ಸಿ, ಪುತ್ತೂರು, ಲಯನ್ ಸಂದೀಪ್ ಕುಮಾರ್, ಶ್ರೀ ದುರ್ಗಾಪರಮೇಶ್ವರೀ ಸೇವಾ ಸಮಿತಿ, ನಾಗನವಳಚ್ಚಿಲು ಮಾರ್ನಬೈಲು, ಯತೀಶ್ ಕುಮಾರ್ ಅಮ್ಟೂರು, ಉದ್ಯಮಿ, ಬೆಂಗಳೂರು, ಚಂದ್ರಹಾಸ ಬಟ್ಟಹಿತ್ಲು ಮಾಲಕರು, ಬಿರ್ವ ಸೆಂಟರ್, ಮೆಲ್ಕಾರ್, ಜಗದೀಶ್ ಬಜ್ಜಾರ್, ಪೈಂಟಿAಗ್ ಕಂಟ್ರಾಕ್ಟರ್ ಸೇರಿದಂತೆ ಉಪಸ್ಥಿತರಿದ್ರು.

ಶ್ರೀ ಕೃಷ್ಣ ಭಜನಾ ಮಂದಿರದ ಅಧ್ಯಕ್ಷರಾದ ರಮೇಶ್ ಕರಿಂಗಾಣ ಸ್ವಾಗತಿಸಿದರು. ಜ್ಯೋತಿ ಮಹಿಳಾ ಮಂಡಲ(ರಿ.) ಉಪಾಧ್ಯಕ್ಷರಾದ ಸರ್ವಾಣಿ ರೈ ಧನ್ಯವಾದ ಅರ್ಪಿಸಿದರು. ಪ್ರಮುಖರಾದ ದಿನೇಶ್ ಅಮ್ಟೂರು, ಕುಶಾಲಪ್ಪ ಅಮ್ಟೂರು, ಪೃಥ್ವಿರಾಜ್ ಆಳ್ವ, ಮಹಾಬಲ ಕುಲಾಲ್, ಕೌಶಲ್ ಶೆಟ್ಟಿ, ಪ್ರಭಾಕರ ಶೆಟ್ಟಿ ಬೈದಡ್ಕ ಸೇರಿದಂತೆ ಹಲವರು ಉಪಸ್ಥಿತರಿದ್ರು.

 

 

Leave a Reply

Your email address will not be published. Required fields are marked *

ಕಾಸರಗೋಡು: ಸಮುದ್ರದಲ್ಲಿ ಕೊಚ್ಚಿಹೋದ ಇಬ್ಬರು ಕಾಲೇಜು ವಿದ್ಯಾರ್ಥಿಗಳು..!

ಕಡಬ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕಪ್ ಪಲ್ಟಿ..!

ಕಡಬ: ಗೋಳಿತ್ತಡಿ-ಏಣಿತ್ತಡ್ಕ-ಕುದುಲೂರು ಸಂಪರ್ಕಿತ ರಸ್ತೆ; ರಸ್ತೆಯುದ್ದಕ್ಕೂ ಹೊಂಡಮಯ..!

ಬಂಟ್ವಾಳ: ಪಾಣೆಮಂಗಳೂರು ಕಲ್ಲುರ್ಟಿ ದೈವಸ್ಥಾನದ ಮುಂಭಾಗದ ಸರ್ವೀಸ್ ರಸ್ತೆಯಲ್ಲಿ ಹೊಂಡಗುಂಡಿ…!

ಉಡುಪಿ: ಮಾದಕ ದ್ರವ್ಯ ಸಾಗಾಟ- ಮಾರಾಟ ಪ್ರಕರಣ: ಪಿಐಟಿ- ಎನ್‌ಡಿಪಿಎಸ್ ಕಾಯ್ದೆಯಡಿ ಆರೋಪಿಯ ಬಂಧನ…!

ಮಂಗಳೂರು: ಅಕ್ರಮ ಆನೆದಂತಗಳ ಮಾರಾಟ; ಆರೋಪಿಗಳ ಬಂಧನ..!

ಬೆಂಗಳೂರು: ಕಾರ್ಕಳದಲ್ಲಿ ತುಳು ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸುವಂತೆ ಮನವಿ..!

ಬೆಂಗಳೂರು: ಭೀಕರ ರಸ್ತೆ ಅಪಘಾತದಲ್ಲಿ ಕೇರಳ ಮೂಲದ ಇಬ್ಬರು ನರ್ಸಿಂಗ್ ವಿದ್ಯಾರ್ಥಿಗಳು ಮೃತ್ಯು…!

ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಭೇಟಿ…!

error: Content is protected !!