ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ಸನ್ನಿಧಿಯಲ್ಲಿ ಅಷ್ಟಬಂಧ ಬ್ರಹ್ಮಕಲಶ ಹಾಗೂ ಮೂಡಪ್ಪ ಸೇವೆಯ ಅಂಗವಾಗಿ ಶ್ರೀ ಕದ್ರಿ ಮಂಜುನಾಥೇಶ್ವರ ದೇವಾಲಯದ ಆವರಣ ದಿಂದ ಮದೂರು ದೇವಾಲಯಕ್ಕೆ ಮ್ಯಾರಥಾನ್ ಓಟ ನಡೆಯಿತು.
ಮ್ಯಾರಥಾನ್ ಓಟವನ್ನು ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಉದ್ಘಾಟಿಸಿದರು. ಉದ್ಘಾಟಕರು ಮಾತಾಡಿ ಯುವ ಮನಸುಗಳು ಇಂದು ಹಾದಿ ತಪ್ಪುತ್ತಿದೆ. ಈ ಸಂದರ್ಭದಲ್ಲಿ ಇಂತಹ ಯುವಕರ ದೇವಾಲಯದ ಕಡೆಗಿನ ಮ್ಯಾರಥಾನ್ ಓಟವು ಇತರ ಯುವಕರಿಗೂ ಪ್ರೇರಣೆ ನೀಡುವಂತದ್ದು. ಇದು ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು. ಇನ್ನು ಮಧುರು ಸಿದ್ಧಿವಿನಾಯಕ ದೇವಸ್ಥಾನದ ಟ್ರಸ್ಟ್ ಸದಸ್ಯರ ಮಾತನಾಡಿ ದಕ್ಷಿಣ ಕನ್ನಡಕ್ಕೂ ಕಾಸರಗೋಡಿಗೂ ಅವಿನಾಭಾವ ಸಂಬoಧವಿದೆ. ಇಲ್ಲಿನ ಕದ್ರಿ ದೇಗುಲಕ್ಕೆ ಅದರದ್ದೆ ಆದ ಐತಿಹ್ಯ ಇದೆ. ಹಾಗೆ ಇತಿಹಾಸ ಪ್ರಸಿದ್ಧ ಮದ್ದೂರು ದೇವಾಲಯಕ್ಕೆ ಇಲ್ಲಿನಿಂದಲೇ ಪ್ರಚಾರ ಸಿಗಬೇಕೆನ್ನುವುದು ನಮ್ಮೆಲ್ಲರ ಅಭಿಲಾಷೆ ಎಂದರು. ಮ್ಯಾರಥಾನ್ ಓಟಗಾರ ಮಾತಾಡಿ ನಮಗೆ ದೇಶ ಸೇವೆ ಮಾಡಬೇಕೆನ್ನುವ ಆಸೆ ಇದೆ. ಹಾಗಾಗಿ ಊರಿನಲ್ಲಿ ಓಟದ ಸ್ಪರ್ಧೆ ಆಗಾಗ್ಗೆ ಮಾಡುತ್ತಿದ್ದೆವು. ನಮ್ಮ ಹರಕೆ ಈಡೇರಲು ನಮ್ಮ ಮ್ಯಾರಥಾನ್ ದೇವಸ್ಥಾನದ ಕಡೆಗೆ ಸಾಗಲಿದೆ. ಭವಿಷ್ಯತ್ತಿನಲ್ಲಿ ಸೇನೆಗೆ ಸೇರುವ ಅಭಿಲಾಷೆ ಈಡೇರಿಸಲು ಗಣಪನಲ್ಲಿ ಬೇಡುವೆ ಎಂದರು. ಈ ಮ್ಯಾರಥಾನ್ ಉದ್ಘಾಟನೆಯಲ್ಲಿ ಮಧೂರು ದೇವಾಲಯದ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತಿದ್ದರು.
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…