ಉಪನಿಷತ್ತ್, ಭಗವದ್ಗೀತೆ, ಇದನ್ನು ಜನ ಸಾಮಾನ್ಯರು ತಿಳಿದಿರುವುದು ತುಂಬ ಅಪರೂಪ. ಆದರೆ ಯಕ್ಷಗಾನದ ಮೂಲಕ ಇದನ್ನು ತಿಳಿಯುವುದು ಸಾಧ್ಯ. ಯಕ್ಷಗಾನದಿಂದ ನಮ್ಮ ಜೀವನದ ಮೂಲ ಚಿಂತನೆಯ ಅರಿವು ಉಂಟಾಗುತ್ತದೆ. ದುಷ್ಟರ ನಾಶವಾಗಿ ಶಿಷ್ಟರ ರಕ್ಷಣೆಯ ಬಗ್ಗೆಯೂ ಯಕ್ಷಗಾನದಲ್ಲಿ ತಿಳಿಯುತ್ತದೆ ಎಂದು ವಿವೇಕಾನಂದ ವಿದ್ಯಾವರ್ದಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಹೇಳಿದ್ದಾರೆ.
ಅವರು ಬಿ.ಸಿ.ರೋಡಿನ ಚಂಡಿಕಾಪರಮೇಶ್ವರಿ ದೇವಸ್ಥಾನದಲ್ಲಿ ಗೆಜ್ಜೆಗಿರಿ ಮೇಳದವರಿಂದ ನಡೆದ ಯಕ್ಷೋತ್ಸವ 2025 ಕಾರ್ಯಕ್ರಮದ ಧಾರ್ಮಿಕ ಕಾಯಕ್ರಮದಲ್ಲಿ ಮಾತನಾಡಿ ನಮ್ಮ ಧರ್ಮರಕ್ಷಣೆಯ ಕೈಂಕರ್ಯದಲ್ಲಿ ಯಕ್ಷಗಾನ ಪ್ರಸಂಗ ಸದಾ ಪ್ರೇರಣೆ ನೀಡಲಿ ಎಂದರು.
ಇದೇ ಸಂದರ್ಭ ಮೇಳದ ಕಲಾವಿದರಾದ ಲಕ್ಣ್ಮಣ್ ಗೌಡ ಮುಚ್ಚೂರು, ದಾಮೋದರ ಪಾಟಾಳಿ, ದತ್ತೇಶ್ ಮಾವಿನಕಟ್ಡೆ, ಶ್ರೀಶ ಭಟ್ ಪೊಳಲಿ, ವಿಶ್ವನಾಥ ಕುಲಾಲ್ ಪದ್ಮುಂಜ ಮತ್ತು ಬಾಬಣ್ಣ ಪಾರೆಂಕಿ ಮಡಂತ್ಯಾರ್ ಇವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಮೇಳದ ಪ್ರಧಾನ ಭಾಗವತರಾದ ಯೋಗೀಶ್ ಶರ್ಮ ಅಳದಂಗಡಿ, ಪ್ರಸಂಗಕರ್ತ ನಿತಿನ್ ಕುಮಾರ್ ತೆಂಕಕಾರಂದೂರು, ಹಿಮ್ಮೇಳ ಕಲಾವಿದ ಗಣಪತಿ ಭಟ್, ಉದ್ಯಮಿ ಭರತ್ ಅಂಚನ್ ಉಪಸ್ಥಿತರಿದ್ದರು.
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…