ಜನ ಮನದ ನಾಡಿ ಮಿಡಿತ

Advertisement

ಕ್ಯಾನ್ಸರ್ ರೋಗದಿಂದ ಮುಂಡಿತ್ತಡ್ಕ ಶಾಲೆಯ ಅಧ್ಯಾಪಕ ಪ್ರಶಾಂತ್ ರೈ ನಿಧನ

ಬದಿಯಡ್ಕ: ಕ್ಯಾನ್ಸರ್ ರೋಗ ಬಾಧಿತನಾಗಿ ಚಿಕಿತ್ಸೆ ಪಡೆಯುತ್ತಿದ್ದ ಮುಂಡಿತ್ತಡ್ಕ ಶಾಲೆಯ ಅಧ್ಯಾಪಕ ಪ್ರಶಾಂತ್ ರೈ (41) ನಿಧನರಾದರು. ಇಂದು (ಶನಿವಾರ) ಬೆಳಗ್ಗೆ ಶಿವಮೊಗ್ಗ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು. ಇವರು ಬದಿಯಡ್ಕ ಪಿಲಾ೦ಕಟ್ಟೆ ನಿವಾಸಿಯಾಗಿದ್ದಾರೆ.

ಅಧ್ಯಾಪಕರಾಗಿದ್ದ ವೇಳೆ ಅವರಿಗೆ ಕ್ಯಾನ್ಸರ್ ಬಾಧಿಸಿದ್ದು ಚಿಕಿತ್ಸೆ ನಡೆಸಲಾಗಿತ್ತು. ಈ ಮಧ್ಯೆ ಇವರ ಚಿಕಿತ್ಸೆಗಾಗಿ ಸಮಿತಿ ರಚಿಸಿ ಹಣ ಸಂಗ್ರಹವೂ ಮಾಡಲಾಗಿತ್ತು. ಆಟೋ ರಿಕ್ಷಾ ಚಾಲಕರು, ಬಸ್ಸು ಸಿಬಂದಿಗಳು ಅವರಿಗಾಗಿ ಕಾರುಣ್ಯ ಯಾತ್ರೆ ನಡೆಸಿ ಹಣ ಸಂಗ್ರಹ ಮಾಡಿದ್ದರು. ಈ ಮಧ್ಯೆ ಅವರು ಕೊನೆಯುಸಿರೆಳೆದಿರುವುದು ಅಭಿಮಾನಿ ಬಳಗಕ್ಕೆ ಶಾಕ್ ಆಗಿದೆ. ಮೃತರು ತಂದೆ ರಾಮ ಮಾಸ್ತರ್, ತಾಯಿ ಸರಳ, ಪತ್ನಿ ದಿವ್ಯ, ಮಕ್ಕಳಾದ ಮನಸ್ತಿ ಅನುಶ್ರೀ, ಸಹೋದರ ಗುರುಪ್ರಸಾದ್ ರೈ (ಶಿಕ್ಷಕರು,ಪಳ್ಳತ್ತಡ್ಕ ಶಾಲೆ) ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

 

Leave a Reply

Your email address will not be published. Required fields are marked *

ಬಂಟ್ವಾಳ: ಶಾಲಾ ಬಸ್ ನಿಯಮ ಪರಿಶೀಲನೆ ; ಶಾಲಾ ಬಸ್‌ಗಳನ್ನು ಪರಿಶೀಲಿಸಿದ ಟ್ರಾಫಿಕ್ ಪೋಲಿಸ್ ಎಸ್.ಐ.ಆದರ್ಶ್…!

ಬಂಟ್ವಾಳ: ಪಾಣೆಮಂಗಳೂರು ಫ್ಲೈಓವರ್ ಪಕ್ಕದ ಕಲ್ಲುರ್ಟಿ ಸನ್ನಿಧಿಯ ಬಳಿ ಕೃತಕ ನೆರೆ…..!

ಉಡುಪಿ: ಹೆಬ್ರಿಯಲ್ಲಿ ಅಂದರ್ ಬಾಹರ್ ಇಸ್ಪೀಟ್ ಜೂಜು ಅಡ್ಡೆಗೆ ಪೊಲೀಸರ ದಾಳಿ; 7 ಮಂದಿಯ ಬಂಧನ..!

ಬೆಳ್ತಂಗಡಿ: ಪಿಕಪ್ ವಾಹನ ಡಿಕ್ಕಿಯಾಗಿ ಸ್ಕೂಟರ್ ಸವಾರರಿಬ್ಬರು ಸಾ*ವು..!

ಉಡುಪಿ: ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಿ: ಮುಸ್ಲಿಂ ಬಾಂಧವ್ಯ ವೇದಿಕೆ ಆಗ್ರಹ

ಕುಂದಾಪುರ: ಕಂಟೇನರ್ ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಮೃತ್ಯು..!

ಬಂಟ್ವಾಳ: ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯ ಮನೆಯಲ್ಲಿ ನಡೆದ ಕಳವು ಪ್ರಕರಣದ ಆರೋಪಿಗಳು ಸರೆ..!

ಬೆಂಗಳೂರು: ಮುಖ್ಯಮಂತ್ರಿ ಡಿ. ಕೆ. ಶಿಯವರ ಅವರ ಮುಖ್ಯ ಸಲಹೆಗಾರರನ್ನಾಗಿ ಸುನಿಲ್ ಕಾನುಗೋಲು ನೇಮಕ…!

ಮಂಗಳೂರು: ಕಲ್ಲುಗುಡ್ಡೆ ನಿವಾಸಿ ಅರ್. ಪೈನ್ ಮೆಹತಾಬ್ (18) ನಾಪತ್ತೆ..!

error: Content is protected !!