ಜನ ಮನದ ನಾಡಿ ಮಿಡಿತ

Advertisement

ಹೈದರಾಬಾದ್: ಮಂಗ್ಲಿ ಬರ್ತ್ ಡೇ ಪಾರ್ಟಿ ಮೇಲೆ ಏಕಾಏಕಿ ಪೊಲೀಸ್ ದಾಳಿ

ಖ್ಯಾತ ಹಿನ್ನೆಲೆ ಗಾಯಕಿ ಮಂಗ್ಲಿ ಅವರಿಗೆ ಇದೀಗ ಸಂಕಷ್ಟ ಎದುರಾಗಿದೆ. ಮಂಗ್ಲಿ ಬರ್ತ್ ಡೇ ಪಾರ್ಟಿ ಮೇಲೆ ದಾಳಿ ಮಾಡಿರುವ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. ಸ್ನೇಹಿತರಿಗಾಗಿ ಮಂಗ್ಲಿ ಪಾರ್ಟಿ ಪ್ಲಾನ್ ಮಾಡಿದ್ದು, ಡ್ರಗ್ಸ್ ಪರೀಕ್ಷೆಯಲ್ಲಿ ಪಾಸಿಟಿವ್ ರಿಪೋರ್ಟ್ ಬಂದಿದೆ. ಗಾಯಕಿ ಮಂಗ್ಲಿ ಅವರು ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಚೆವೆಲ್ಲಾದ ತ್ರಿಪುರಾ ರೆಸಾರ್ಟ್ನಲ್ಲಿ ನಿನ್ನೆ ತಮ್ಮ ಬರ್ತ್ ಡೇ ಪಾರ್ಟಿ ಆಯೋಜನೆ ಮಾಡಿದ್ದರು.

ಪೊಲೀಸರು ಈ ಪಾರ್ಟಿ ಮೇಲೆ ರೇಡ್ ಮಾಡಿದ್ದು, ಕಾರ್ಯಕ್ರಮದ ಆಯೋಜಕರಿಂದ ಅಪಾರ ಪ್ರಮಾಣದ ವಿದೇಶಿ ಮದ್ಯ, ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ. ಮಂಗ್ಲಿ ಬರ್ತ್ ಡೇ ಪಾರ್ಟಿಯಲ್ಲಿ ಆಪ್ತ ಸ್ನೇಹಿತರು, ಕುಟುಂಬಸ್ಥರು ಸೇರಿ 48 ಮಂದಿಯಷ್ಟೇ ಭಾಗಿಯಾಗಿದ್ದರು. 48 ಮಂದಿಯ ಡ್ರಗ್ಸ್ ಪರೀಕ್ಷೆಯಲ್ಲಿ 9 ಜನಕ್ಕೆ ಡ್ರಗ್ಸ್ ಪಾಸಿಟಿವ್ ಬಂದಿದೆ. ಎನ್‌ಡಿಪಿಎಸ್ ಆ್ಯಕ್ಟ್ ಹಾಗೂ ಶಬ್ದ ಮಾಲಿನ್ಯ ಕಾಯಿದೆಯಡಿ ಪೊಲೀಸರು ಕೇಸ್ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಬಹುಭಾಷಾ ಗಾಯಕಿ ಮಂಗ್ಲಿ ಅವರು ಪೊಲೀಸರ ಅನುಮತಿ ಪಡೆಯದೆ ಪಾರ್ಟಿ ಆಯೋಜನೆ ಮಾಡಿದ್ದಾರೆ.

ಪಾರ್ಟಿ ಮೇಲೆ ಏಕಾಏಕಿ ದಾಳಿ ಮಾಡಿರುವ ಪೊಲೀಸರು, ಅನುಮತಿಯಿಲ್ಲದೆ ಬಳಸಲಾಗಿದ್ದ ಡಿಜೆ ಸಿಸ್ಟಂ, ವಿದೇಶಿ ಮದ್ಯ ಹಾಗೂ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ. ಗಾಂಜಾ ಸೇವನೆ ಮಾಡಿದ್ದ 9 ಜನರನ್ನು ಬಂಧಿಸಿ ಪರೀಕ್ಷೆ ನಡೆಸಿದ್ದಾರೆ. ಗಾಯಕಿ ಮಂಗ್ಲಿ ಹಾಗೂ ತ್ರಿಪುರಾ ರೆಸಾರ್ಟ್ ಜನರಲ್ ಮ್ಯಾನೇಜರ್ ಶಿವರಾಮ ಕೃಷ್ಣ ವಿರುದ್ಧ ಕೇಸ್ ದಾಖಲಾಗಿದೆ.

Leave a Reply

Your email address will not be published. Required fields are marked *

ಬಂಟ್ವಾಳ: ಭಾರೀ ಮಳೆ ಹಾಗೂ ಬಿರುಗಾಳಿಯ ಅಬ್ಬರಕ್ಕೆ ಕುಸಿತಗೊಂಡ ಮನೆಯ ಚಾವಣಿ…!

ಬಂಟ್ವಾಳ: ಸಜೀಪಮೂಡದಲ್ಲಿ ವಿದ್ಯುತ್ ಅವಘಡ; ಪೀಠೋಪಕರಣಗಳು ಸೇರಿ ದಿನನಿತ್ಯದ ವಸ್ತುಗಳು ಸುಟ್ಟು ಭಸ್ಮ…!

ವಾಷಿಂಗ್ಟನ್: ಅಮೆರಿಕ ಕಾಂಗ್ರೆಸ್‌ನಿಂದ ಡಾ. ಯು.ಟಿ. ಖಾದರ್‌ಗೆ ಪ್ರತಿಷ್ಠಿತ ಗೌರವ…!

ವಿಶ್ವಕಪ್ ಗಲಾಟೆ: ಅರ್ಜೆಂಟೀನಾ ವಿರುದ್ಧ ಫಿಫಾ ಕಠಿಣ ಶಿಸ್ತು ಕ್ರಮ!

ನವದೆಹಲಿ: ‘ಪಾಕಿಸ್ತಾನಿ ಕಾಶ್ಮೀರ’ ಅಲ್ಲ, ಅದು PoK ಮಾತ್ರ: ನ್ಯೂಯಾರ್ಕ್ ಟೈಮ್ಸ್‌ಗೆ ಭಾರತದ ತಿರುಗೇಟು…!

ವಾಷಿಂಗ್ಟನ್: ಚೀನಾ-ಪಾಕ್ ಮೂಲಕ ಇರಾನ್‌ಗೆ 400 ರಾಕೆಟ್ ಲಾಂಚರ್? ಟ್ರಂಪ್ ಆತಂಕ…!

ಮೂಡುಬಿದಿರೆ: ಒಮಾನ್‌ನಲ್ಲಿ ಸಂಭವಿಸಿದ ವಾಹನ ಅಪ*ಘಾತದಲ್ಲಿ ಯುವಕ ಸಾ*ವು….!

ಬಂಟ್ವಾಳ: ಅಮ್ಮುಂಜೆ ವೃದ್ಧೆ ಕೊಲೆ ಪ್ರಕರಣ: ಮೂವರು ಆರೋಪಿಗಳಿಗೆ ಜೀವಾವಧಿ…!

ನವದೆಹಲಿ: ಚಿನ್ನದ ಬೆಲೆ ಇಳಿಯುತ್ತಾ? ವಿಶ್ವ ಚಿನ್ನ ಮಂಡಳಿಯ ಭವಿಷ್ಯ…!

error: Content is protected !!